ಜೈಪುರ: ಮೂವರು ಸಚಿವರು ಇದ್ದ ಹೋಟೆಲ್‌ಗೆ ಬಾಂಬ್ ಬೆದರಿಕೆ!

ರಫೆಲ್ಸ್ ಹೋಟೆಲ್‌ ಮತ್ತು ಹಾಲಿಡೇ ಇನ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತಾ ಪರಿಶೀಲನೆ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
Bomb threat
ಸಾಂದರ್ಭಿಕ ಚಿತ್ರonline desk
Updated on

ಜೈಪುರ: ರಾಜಸ್ಥಾನದ ಮೂವರು ಸಚಿವರು ಹೋಟೆಲ್‌ ಸೇರಿದಂತೆ ಜೈಪುರದ ಎರಡು ಉನ್ನತ ದರ್ಜೆಯ ಹೋಟೆಲ್‌ಗಳಿಗೆ ಶನಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣವೇ ಹೋಟೆಗಳಲ್ಲಿದ್ದ ಎಲ್ಲಾ ಗ್ರಾಹಕರನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಫೆಲ್ಸ್ ಹೋಟೆಲ್‌ ಮತ್ತು ಹಾಲಿಡೇ ಇನ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತಾ ಪರಿಶೀಲನೆ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.

ರಾಜಸ್ಥಾನ ಗೃಹ ಸಚಿವ ಜವಾಹರ್ ಸಿಂಗ್ ಬೆಧಮ್, ಕೌಶಲ್ಯ, ಉದ್ಯೋಗ ಮತ್ತು ಉದ್ಯಮಶೀಲತೆ ಸಚಿವ ಕೆ ಕೆ ವಿಷ್ಣೋಯ್ ಹಾಗೂ ಸಹಕಾರಿ ಖಾತೆ ರಾಜ್ಯ ಸಚಿವ ಗೌತಮ್ ಡಾಕ್ ಅವರು ಹಾಲಿಡೇ ಇನ್ ಹೋಟೆಲ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಬಾಂಬ್ ಬೆದರಿಕೆ ಬಂದಿದೆ.

Bomb threat
ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ, ಭಾರಿ ವಿಳಂಬ

ರಫೆಲ್‌ಗೆ ಬಾಂಬ್ ಬೆದರಿಕೆ ಬಗ್ಗೆ ತಿಳಿಸಲಾಯಿತು ಮತ್ತು ತಕ್ಷಣ ಜನರನ್ನು ಹೋಟೆಲ್‌ನಿಂದ ಸ್ಥಳಾಂತರಿಸುವಂತೆ ಸೂಚಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿಡೇ ಇನ್ ಹೋಟೆಲ್‌ ನಲ್ಲಿದ್ದ ಮೂವರು ಸಚಿವರು ಸಹ ತಕ್ಷಣ ಆವರಣವನ್ನು ತೊರೆದರು ಎಂದು ಅವರು ಹೇಳಿದ್ದಾರೆ.

ಬಾಂಬ್ ಮತ್ತು ಶ್ವಾನ ದಳಗಳು ಹೋಟೆಲ್‌ನಲ್ಲಿ ಸಂಪೂರ್ಣ ಶೋಧ ನಡೆಸಿದವು. ಆದರೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ಲಲಿತ್ ಶರ್ಮಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com