

ಚಕ್ರಧರಪುರ: ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ವ್ಯಾಪ್ತಿಯಲ್ಲಿ 22 ಕಾಡು ಆನೆಗಳ ಹಿಂಡು ಸುರಕ್ಷಿತವಾಗಿ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು ಒಂದು ಡಜನ್ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಶನಿವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ಬಿರ್ಸಾ ಮತ್ತು ಡಿ ಕ್ಯಾಬಿನ್ ವಿಭಾಗದ ನಡುವಿನ ಜಾರ್ಖಂಡ್-ಒಡಿಶಾ ಗಡಿಯ ಬಳಿ ಆನೆಗಳ ಚಲನವಲನದ ಬಗ್ಗೆ ಫೀಲ್ಡ್ ಅಧಿಕಾರಿಗಳು ಮಾಹಿತಿ ನೀಡಿದ ನಂತರ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಶನಿವಾರ ಬೆಳಗ್ಗೆ ಆನೆಗಳ ಹಿಂಡು ಸುರಕ್ಷಿತವಾಗಿ ಹಳಿ ದಾಟುವವರೆಗೆ 3-4 ಗಂಟೆಗಳ ಕಾಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
ವನ್ಯಜೀವಿ ಸಂರಕ್ಷಣೆ ಮತ್ತು ಕಾರ್ಯಾಚರಣೆಯ ಸುರಕ್ಷತೆಗೆ ತನ್ನ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಚಕ್ರಧರಪುರ ವಿಭಾಗವು ನವೆಂಬರ್ 1 ರಂದು 22 ಆನೆಗಳ ಹಿಂಡಿನ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಬಿಸ್ರಾ ಮತ್ತು ಡಿ ಕ್ಯಾಬಿನ್ ವಿಭಾಗದ ನಡುವಿನ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು ಎಂದು ಆಗ್ನೇಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ(ಸಿಕೆಪಿ ವಿಭಾಗ) ಆದಿತ್ಯ ಕುಮಾರ್ ಚೌಧರಿ ಅವರು ತಿಳಿಸಿದ್ದಾರೆ.
"ರೈಲು ಹಳಿಯ ಬಳಿ 22 ಆನೆಗಳ ಚಲನವಲನದ ಬಗ್ಗೆ ನಮಗೆ ವರದಿ ಬಂದ ಕೂಡಲೇ, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ರೈಲು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ.
Advertisement