ದಸರಾ ಮೆರವಣಿಗೆ: ಶಿಬಿರದ ಆನೆಗಳಿಗೆ ಬೇಡಿಕೆ ಹೆಚ್ಚಳ; ರೊಬೊಟಿಕ್ ಆನೆ ಬಳಕೆಗೆ ಅರಣ್ಯ ಇಲಾಖೆ ಚಿಂತನೆ..!

ಶಿಬಿರದ ಆನೆಗಳಿಗೆ ಮಾವುತರ ಆಜ್ಞೆಗಳನ್ನು ಅನುಸರಿಸಲು ತರಬೇತಿ ನೀಡಲಾಗಿರುತ್ತದೆ. ಅವು ಸಣ್ಣ ಗುಂಪುಗಳ ಜನರಿಗಷ್ಟೇ ಒಗ್ಗಿಕೊಂಡಿರುತ್ತವೆ.
 elephants
ಆನೆ.
Updated on

ಬೆಂಗಳೂರು: ದಸರಾ ಹಬ್ಬ ಹಿನ್ನೆಲೆಯಲ್ಲಿ ಮೆರವಣಿಗಳಿಗೆ ಶಿಬಿರದ ಆನೆಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಈ ನಡುವೆ ರೊಬೊಟಿಕ್ ಆನೆ ಬಳಕೆ ಕುರಿತು ಅರಣ್ಯ ಇಲಾಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ದಸರಾ ಮೆರವಣಿಗೆಗಳಿಗೆ ಶಿಬಿರ ಆನೆಗಳ ರವಾನಿಸುವಂತೆ ಧಾರ್ಮಿಕ ಸಂಸ್ಥೆಗಳು ಹಾಗೂ ಇತರರಿಂದ ಅರಣ್ಯ ಇಲಾಖೆಗೆ ಮನವಿ ಪತ್ರಗಳು ಬರುತ್ತಿದ್ದು, ಈ ನಡುವೆ ರೊಬೊಟಿಕ್ ಆನೆ ಬಳಕೆ ಕುರಿತು ಅರಣ್ಯ ಇಲಾಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ತುಮಕೂರಿಗೆ ಶಿಬಿರದ ಆನೆಗಳನ್ನು ಕಳುಹಿಸುವ ಅರಣ್ಯ ಇಲಾಖೆಗೆ ಮನವಿ ಪತ್ರ ಬಂದಿದೆ ಎಂದು ಇಲಾಖೆ ತಿಳಿಸಿದೆ.

ನೆರೆಯ ರಾಜ್ಯಗಳಿಂದ ಆನೆಗಳನ್ನು ತಂದರೆ ಪ್ರತಿ ಆನೆಗೆ ದಿನಕ್ಕೆ ಕನಿಷ್ಟ 2 ಲಕ್ಷ ರೂ ಪಾವತಿಸಬೇಕಾಗುತ್ತದೆ. ಆನೆಗಳು, ಮಾವುತರು ಮತ್ತು ಕವಡಿಗಳ ಸಾಗಣೆ, ಆಹಾರ, ವಸತಿ ಮತ್ತು ತರಬೇತಿಗೆ ಹಣ ವ್ಯಯಿಸಬೇಕು. ಹೀಗಾಗಿ ಸಕ್ರೆಬೈಲುವಿನಿಂದ ತುಮಕೂರಿಗೆ ಆನೆಗಳನ್ನು ಕಳುಹಿಸಲು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮಠಗಳ ಮನವಿ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸಿ. ರೈ ಅವರು, ಸಕ್ರೆಬೈಲು, ದುಬಾರೆ ಮತ್ತು ಇತರ ಶಿಬಿರಗಳಲ್ಲಿರುವ ಆನೆಗಳ ವಿವರಗಳನ್ನು ದಸರಾ ಮತ್ತು ಮಠಗಳ ಆಚರಣೆಗಳಲ್ಲಿ ಭಾಗವಹಿಸಲು ನವೆಂಬರ್‌ನಲ್ಲಿ ತುಮಕೂರಿಗೆ ಮತ್ತು ಹುಬ್ಬಳ್ಳಿಗೆ ಕಳುಹಿಸುವಂತೆ ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನೆ ಶಿಬಿರಗಳ ಸಿಬ್ಬಂದಿ, ಮೆರವಣಿಗೆ ಹಾಗೂ ಉತ್ಸವಗಳ ನಡೆದುವ ಸಾಗುವ ತರಬೇತಿಗಳನ್ನು ಆನೆಗಳಿಗೆ ನೀಡಲಾಗಿಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

 elephants
ದಸರಾ ಹಬ್ಬಕ್ಕೆ ರಾಜ್ಯ ಸರ್ಕಾರ ಗಿಫ್ಟ್: 39 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ; ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾಗೂ ಸ್ಥಾನ..!

ಆನೆ ಶಿಬಿರಗಳ ಈ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅರಣ್ಯ ಇಲಾಖೆ, ಆನೆಗಳ ಬದಲಿಗೆ ಮಠಗಳಿಗೆ ದಾನ ಮಾಡಲಾಗಿರುವ ರೊಬೋಟಿಕ್ ಆನೆಗಳ ಬಳಸುವಂತೆ ಸಲಹೆ ನೀಡಿದೆ.

ಕೆಲವು ಮಠಗಳಿಂದ ಮೂರು ಹಸು ಹಾಗೂ ಆನೆಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಗೆ ಯಾವುದೇ ಆನೆಗಳನ್ನು ಕಳುಹಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ 2015 ರ ಕರ್ನಾಟಕ ಹೈಕೋರ್ಟ್ ನಿರ್ದೇಶನಗಳನ್ನು ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಸಂರಕ್ಷಣಾ ತಜ್ಞರು ಮತ್ತು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ರಿಟ್ ಅರ್ಜಿ 4610/2013 ರಲ್ಲಿ, ನ್ಯಾಯಾಲಯವು, “ಭಿಕ್ಷಾಟನೆ, ಪ್ರದರ್ಶನ ಅಥವಾ ಮೆರವಣಿಗೆಯ ಯಾವುದೇ ರೂಪದಲ್ಲಿ ಆನೆಗಳನ್ನು ಬಳಸುವುದನ್ನು ನಿಷೇಧಿಸಲು ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದೆ. ಈ ವಿಷಯದಲ್ಲಿ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚಿಸಿ ಎಂದು ತಿಳಿಸಿದೆ.

 elephants
ಕೇರಳ: ಇಬ್ಬರು ಮಾವುತರ ಮೇಲೆ ದೇವಸ್ಥಾನದ ಆನೆ ದಾಳಿ; ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕರ್ನಾಟಕ ಹೈಕೋರ್ಟ್‌ನ ಆದೇಶ ಹಾಗೂ ರಾಜ್ಯ ಸರ್ಕಾರ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆಯು ವಾರ್ಷಿಕವಾಗಿ 14-16 ಸುಶಿಕ್ಷಿತ, ಶಿಬಿರ ಆನೆಗಳನ್ನು ದಸರಾಗೆ ಕಳುಹಿಸುತ್ತಿದೆ. ಸಕ್ರೆಬೈಲು ಆನೆ ಶಿಬಿರದಿಂದ ಮೂರು ಆನೆಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.“ಆದರೆ ಈ ವರ್ಷ ಗೃಹ ಸಚಿವರು, ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರಿಂದ 12 ಶಿಬಿರ ಆನೆಗಳನ್ನು ತುಮಕೂರು ಮತ್ತು ಹುಬ್ಬಳ್ಳಿಗೆ ಕಳುಹಿಸಲು ನಮಗೆ ನಿರ್ದೇಶನಗಳು ಬಂದಿವೆ. ಮೈಸೂರಿಗೆ ಕಳುಹಿಸಲಾದ ಆನೆಗಳಿಗೆ ವಾರ್ಷಿಕವಾಗಿ ತರಬೇತಿ ನೀಡಲಾಗುತ್ತದೆ.

ಶಿಬಿರದ ಆನೆಗಳಿಗೆ ಮಾವುತರ ಆಜ್ಞೆಗಳನ್ನು ಅನುಸರಿಸಲು ತರಬೇತಿ ನೀಡಲಾಗಿರುತ್ತದೆ. ಅವು ಸಣ್ಣ ಗುಂಪುಗಳ ಜನರಿಗಷ್ಟೇ ಒಗ್ಗಿಕೊಂಡಿರುತ್ತವೆ. ಹೆಚ್ಚೆಚ್ಚು ಜನರಿರುವ ಸ್ಥಳಗಳಿಗೆ ಅವು ಒಗ್ಗಿಕೊಳ್ಳುವುದಿಲ್ಲ. ಆದರೆ ಮಂತ್ರಿಗಳು ಮತ್ತು ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅರಣ್ಯಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com