Bihar Polls: ತಮ್ಮನ್ನು ಪ್ರಶ್ನಿಸಬಾರದೆಂದು ಯುವಕರಿಗೆ ರೀಲ್ಸ್ ಮಾಡಲು ಮೋದಿ ಪ್ರೋತ್ಸಾಹ; ರಾಹುಲ್ ಗಾಂಧಿ

ಬಿಹಾರದಲ್ಲಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ 'ಮತ ಕಳ್ಳತನ'ದಲ್ಲಿ ತೊಡಗಿದ್ದಾರೆ, ಏಕೆಂದರೆ ಎನ್‌ಡಿಎ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಅವರಿಗೆ ತಿಳಿದಿದೆ.
Congress Leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Updated on

ಔರಂಗಾಬಾದ್: ಯುವಜನರು ಸಾಮಾಜಿಕ ಮಾಧ್ಯಮ ರೀಲ್‌ಗಳನ್ನು ಮಾಡುವುದರಲ್ಲಿ ನಿರತರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ. ಏಕೆಂದರೆ, ಇದರಿಂದ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳಿಂದ ವಿಚಲಿತರಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಸತತ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಸಾಮಾಜಿಕ ಮಾಧ್ಯಮಗಳ 'ವ್ಯಸನ'ವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದರು.

'ಮೋದಿ ಅವರು ನಿಮ್ಮನ್ನು ರೀಲ್‌ಗಳನ್ನು ಮಾಡುವ, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಬಳಸುವ ವ್ಯಸನಿಯನ್ನಾಗಿ ಮಾಡಲು ಬಯಸುತ್ತಾರೆ. ಇದು 21ನೇ ಶತಮಾನದ ಹೊಸ ಉತ್ತುಂಗ. ಅವರು ಇಂತಹ ಸನ್ನಿವೇಶವನ್ನು ಬಯಸುತ್ತಾರೆ. ಏಕೆಂದರೆ, ಇದರಿಂದ ಯುವಕರು ವಿಚಲಿತರಾಗುತ್ತಾರೆ ಮತ್ತು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಬಗ್ಗೆ ಅವರ ಸಮಸ್ಯೆಗಳಿಗೆ ತಮ್ಮ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ' ಎಂದು ದೂರಿದರು.

'ಬಿಹಾರದಲ್ಲಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ 'ಮತ ಕಳ್ಳತನ'ದಲ್ಲಿ ತೊಡಗಿದ್ದಾರೆ, ಏಕೆಂದರೆ ಎನ್‌ಡಿಎ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಬಿಹಾರದಲ್ಲಿ ಇಂಡಿಯಾ ಬಣವು ಅಧಿಕಾರಕ್ಕೆ ಬಂದರೆ, ಅತ್ಯಂತ ಹಿಂದುಳಿದ, ಸಾಮಾಜಿಕವಾಗಿ ಹಿಂದುಳಿದ ಮತ್ತು ದಲಿತರ ಪರ ಸರ್ಕಾರವಾಗಿರುತ್ತದೆ' ಎಂದು ಹೇಳಿದರು.

Congress Leader Rahul Gandhi
Bihar Polls: ಕೇವಲ 26 ಸೆಕೆಂಡುಗಳಲ್ಲಿ ಬಿಡುಗಡೆಯಾದ NDA ಪ್ರಣಾಳಿಕೆ 'ಸುಳ್ಳಿನ ಸರಮಾಲೆ'; ಅಶೋಕ್ ಗೆಹ್ಲೋಟ್

'ನಾವು ರಾಜ್ಯವನ್ನು ಉತ್ಪಾದನಾ ಕೇಂದ್ರವನ್ನಾಗಿ ಪರಿವರ್ತಿಸಲು ಬಯಸುತ್ತೇವೆ. ಬಟ್ಟೆ ಮತ್ತು ಮೊಬೈಲ್ ಫೋನ್‌ಗಳ ಮೇಲೆ ಮೇಡ್ ಇನ್ ಬಿಹಾರ ಲೇಬಲ್‌ಗಳನ್ನು ನೋಡಿ, ಇದರಿಂದ ಚೀನಾ ಕೂಡ ಎದ್ದು ಕುಳಿತು ಗಮನಿಸಬೇಕಾಗುತ್ತದೆ'. ಅಲ್ಲದೆ, ನಳಂದದಲ್ಲಿ ಅತ್ಯಾಧುನಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಬಿಹಾರದ ಪ್ರಾಚೀನ ವೈಭವವನ್ನು ಪುನರುಜ್ಜೀವನಗೊಳಿಸುವುದಾಗಿಯೂ ಅವರು ಭರವಸೆ ನೀಡಿದರು.

ರಾಜ್ಯದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರದ ಯುವಕರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದಾರೆ ಮತ್ತು ಅವರ ಎಲ್ಲಾ ಉದ್ಯೋಗಾವಕಾಶಗಳನ್ನು ನಾಶಪಡಿಸುತ್ತಿದ್ದಾರೆ. ಅವರು ದೆಹಲಿಯಲ್ಲಿ ಕುಳಿತವರ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಬಿಹಾರದಲ್ಲಿ ನಿಯಮಿತ ವ್ಯವಹಾರವಾಗಿದ್ದು, ಆರ್ಥಿಕವಾಗಿ ಶ್ರೀಮಂತ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com