ಮೊದಲು ಮತದಾನ ನಂತರ ಉಪಹಾರ: ಮಹಿಳಾ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಮಂತ್ರ!

243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಳೆ (ನವೆಂಬರ್‌ 6ರಂದು) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತೆಯರನ್ನುದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದರು.
Narendra Modi
ನರೇಂದ್ರ ಮೋದಿ
Updated on

ನವದೆಹಲಿ: ಬೂತ್‌ ಮಟ್ಟದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ ಬಿಹಾರದ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಅವರನ್ನುದ್ದೇಶಿಸಿ, 'ಮೊದಲು ಮತ ಚಲಾಯಿಸಿ, ನಂತರ ಉಪಹಾರ ಸೇವಿಸಿ ಇದರಿಂದ, ಮತದಾನ ಪ್ರಮಾಣ ಉತ್ತಮವಾಗಿರುತ್ತದೆ ಎಂದು ಕರೆ ನೀಡಿದ್ದಾರೆ.

ಮೊದಲ ಹಂತದ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಬಿಜೆಪಿಯ ಮೇರಾ ಬೂತ್ ಸಬ್ಸೆ ಮಜ್‌ಬೂತ್ ಅಭಿಯಾನದಡಿಯಲ್ಲಿ ಮಹಿಳಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪಕ್ಷದ ಕಾರ್ಯಕರ್ತರು ಮಹಿಳಾ ಮತದಾರರನ್ನು ಸಜ್ಜುಗೊಳಿಸಬೇಕು ಮತ್ತು ರಾಜ್ಯಾದ್ಯಂತ ಮತದಾರರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.

243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಳೆ (ನವೆಂಬರ್‌ 6ರಂದು) ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತೆಯರನ್ನುದ್ದೇಶಿಸಿ ವರ್ಚುವಲ್‌ ಆಗಿ ಮಾತನಾಡಿದರು.

'ಎನ್‌ಡಿಎ ಮೈತ್ರಿಕೂಟವು ಭಾರಿ ಬಹುಮತದಿಂದ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ. ಬಿಹಾರದ ಜನರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ, ಕಳೆದ 20 ವರ್ಷಗಳ ದಾಖಲೆಯನ್ನು ಮುರಿಯಲಿದ್ದಾರೆ. 'ಜಂಗಲ್‌ ರಾಜ್‌'ಗೆ ಸೇರಿದವರು ಅತಿ ದೊಡ್ಡ ಸೋಲನ್ನು ಅನುಭವಿಸಲಿದ್ದಾರೆ' ಎಂದು ಹೇಳಿದ್ದಾರೆ.

Narendra Modi
INDIA bloc ಅಧಿಕಾರಕ್ಕೆ ಬಂದರೆ ಬಿಹಾರ ರೈತರಿಗೆ ಬಂಪರ್ ಕೊಡುಗೆ: ತೇಜಸ್ವಿ ಯಾದವ್

ಮಹಿಳಾ ಕಾರ್ಯಕರ್ತರು, 'ನನ್ನ ಮತಗಟ್ಟೆ, ಅತ್ಯಂತ ಬಲಿಷ್ಠ' ಘೋಷದೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿರುವ ಮೋದಿ, ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಹಿಳಾ ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ, ರಾಜ್ಯದಲ್ಲಿ 'ವಿದ್ಯುತ್‌ ವೆಚ್ಚ ಕಡಿತಗೊಳಿಸಲಾಗಿದೆ. ಹಲವು ನಗರಗಳಲ್ಲಿ ಮೆಟ್ರೊ ಆರಂಭಿಸಲು ಯೋಜನೆ ರೂಪಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com