'ಮುಸ್ಲಿಮರು ವಂದೇ ಮಾತರಂ ಪಠಣ ಮಾಡುವಂತಿಲ್ಲ': ಬಿಜೆಪಿ ಶಾಸಕರ ಪ್ರಸ್ತಾಪ ನಿರಾಕರಿಸಿದ ಅಬು ಅಜ್ಮಿ

ಮುಂಬೈನಲ್ಲಿರುವ ಎಸ್‌ಪಿ ನಾಯಕನ ನಿವಾಸದ ಬಳಿ ಶುಕ್ರವಾರ ಬೆಳಿಗ್ಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಅಜ್ಮಿ ಅವರನ್ನು ಸತಮ್ ಆಹ್ವಾನಿಸಿದ್ದರು.
Abu Azmi declines BJP MLA's Vande Mataram recitation offer
ಎಸ್ ಪಿ ಶಾಸಕ ಅಬು ಅಜ್ಮಿ
Updated on

ಲಖನೌ: ಮುಸ್ಲಿಮರು ವಂದೇ ಮಾತರಂ ಪಠಣ ಮಾಡುವಂತಿಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಬಿಜೆಪಿ ಶಾಸಕರ ಪ್ರಸ್ತಾಪ ನಿರಾಕರಿಸಿದ್ದಾರೆ.

ಗುರುವಾರ ವಂದೇ ಮಾತರಂ ಪಠಣ ವಿಚಾರವಾಗಿ ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸತಮ್ ಅವರ ಆಹ್ವಾನವನ್ನು ನಿರಾಕರಿಸಿದ ಅಬು ಅಜ್ಮಿ, 'ನೀವು ನನ್ನೊಂದಿಗೆ ನಮಾಜ್ ಮಾಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ನಾವು ಮುಸ್ಲಿಮರು ವಂದೇ ಮಾತರಂ ಪಠಣ ಮಾಡುವಂತಿಲ್ಲ. ಅದರಲ್ಲಿನ ಕೆಲವು ಪದ್ಯಗಳು ಪೂಜೆ ಮತ್ತು ಪ್ರಾರ್ಥನೆಗೆ ಸಂಬಂಧಿಸಿರುವುದರಿಂದ ಮುಸ್ಲಿಮರು ವಂದೇ ಮಾತರಂ ಹಾಡನ್ನು ಪಠಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ವಂದೇ ಮಾತರಂನ 150 ವರ್ಷಗಳನ್ನು ಗುರುತಿಸುವ ವಾರದ ಆಚರಣೆಯ ಭಾಗವಾಗಿ ಮುಂಬೈನಲ್ಲಿರುವ ಎಸ್‌ಪಿ ನಾಯಕನ ನಿವಾಸದ ಬಳಿ ಶುಕ್ರವಾರ ಬೆಳಿಗ್ಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಅಜ್ಮಿ ಅವರನ್ನು ಸತಮ್ ಆಹ್ವಾನಿಸಿದ್ದರು. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅಜ್ಮಿ, ಅಹ್ವಾನಕ್ಕೆ ಧನ್ಯವಾಗಳು.. ಆದರೆ ನಾವು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಯನ್ನು ರಾಷ್ಟ್ರೀಯ ಗೀತೆ ಹಾಡುವಂತೆ ಒತ್ತಾಯಿಸುವುದು ಅವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ" ಎಂದು ಅಜ್ಮಿ ಬರೆದುಕೊಂಡಿದ್ದಾರೆ.

ಗೌರವ ಎಂದರೆ ಹಾಡುವುದೊಂದೇ ಅಲ್ಲ

ಶಾಲೆಗಳಲ್ಲಿ ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವುದನ್ನು ಈ ಹಿಂದೆ ವಿರೋಧಿಸಿದ್ದ ಮನ್ಖುರ್ದ್-ಶಿವಾಜಿನಗರದ ಶಾಸಕ ಅಜ್ಮಿ, ಈ ಹಾಡಿಗೆ ಗೌರವ ತೋರಿಸುವುದು ಎಂದರೆ ಅದನ್ನು ಎಲ್ಲರೂ ಪಠಿಸಬೇಕು ಎಂದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

"ವಿಧಾನಸಭೆಯಲ್ಲಿ ವಂದೇ ಮಾತರಂ ಹಾಡಿದಾಗಲೆಲ್ಲಾ, ನಾವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಪೂರ್ಣ ಗೌರವವನ್ನು ತೋರಿಸುತ್ತೇವೆ. ನಾವು ನಿಮ್ಮೊಂದಿಗೆ ಜನ ಗಣ ಮನ ಹಾಡುತ್ತೇವೆ. ಆದರೆ ಮುಸ್ಲಿಮರು ವಂದೇ ಮಾತರಂ ಹಾಡಲು ಸಾಧ್ಯವಿಲ್ಲ ಎಂದು ನೀವು ಸಾರ್ವಜನಿಕರಿಗೆ ಹೇಳುವುದಿಲ್ಲ. ಬದಲಾಗಿ, ನೀವು ಅವರನ್ನು 'ರಾಷ್ಟ್ರವಿರೋಧಿ' ಎಂದು ಬ್ರಾಂಡ್ ಮಾಡುತ್ತೀರಿ. ಇದು ಅತ್ಯಂತ ಖಂಡನೀಯ ಮತ್ತು ಕ್ಷುಲ್ಲಕ ರಾಜಕೀಯ" ಎಂದು ಅವರು ಅಜ್ಮಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಮುಂಬೈ ನಾಗರಿಕ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯತೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಅಜ್ಮಿ ಆರೋಪಿಸಿದ್ದಾರೆ. "ನೀವು ಮುಸ್ಲಿಮರು ವಂದೇ ಮಾತರಂ ಹಾಡಬೇಕೆಂದು ಬಯಸುತ್ತೀರಿ, ನಿಮಗೆ 'ಖಾನ್' ಎಂಬ ಉಪನಾಮ ಹೊಂದಿರುವ ಮೇಯರ್ ಬೇಡ, ಕುರಾನ್ ಓದುವವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಯಸುತ್ತೀರಿ ಮತ್ತು ಅವರನ್ನು 'ದೇಶದ್ರೋಹಿಗಳು' ಎಂದು ಹಣೆಪಟ್ಟಿ ಕಟ್ಟುತ್ತೀರಿ" ಎಂದು ಅವರು ಹೇಳಿದರು, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇಂತಹ ರಾಜಕೀಯವನ್ನು "ಮೌನವಾಗಿ ನೋಡುತ್ತಿದ್ದಾರೆ" ಎಂದು ಹೇಳಿದರು.

ವಂದೇ ಮಾತರಂ ಹಿಂದೂಗಳಿಗೆ ಮಹತ್ವದ್ದಾಗಿದ್ದರೂ, ಇಸ್ಲಾಂ ತನ್ನದೇ ಆದ ನಂಬಿಕೆಯ ಹೊರಗಿನ ಪೂಜಾ ಕ್ರಿಯೆಗಳನ್ನು ಅನುಮತಿಸುವುದಿಲ್ಲ. ವಂದೇ ಮಾತರಂ ಹಿಂದೂ ನಂಬಿಕೆಗಳನ್ನು ಪ್ರತಿಬಿಂಬಿಸುವ ಪ್ರಾರ್ಥನೆಯ ಅಭಿವ್ಯಕ್ತಿಗಳನ್ನು ಒಳಗೊಂಡಿದೆ. ಇಸ್ಲಾಂ ಒಬ್ಬರ ತಾಯಿಯನ್ನು ಗೌರವಿಸಲು ಪ್ರಾಮುಖ್ಯತೆಯನ್ನು ನೀಡುತ್ತದೆ. ಆದರೆ ಅದು ಅವಳ ಮುಂದೆ ನಮಸ್ಕರಿಸಲು ಅನುಮತಿಸುವುದಿಲ್ಲ. ಯಾರೂ ತಮ್ಮ ನಂಬಿಕೆಗೆ ವಿರುದ್ಧವಾದ ಧಾರ್ಮಿಕ ಅಭಿವ್ಯಕ್ತಿಗಳಲ್ಲಿ ಭಾಗವಹಿಸಲು ಒತ್ತಾಯಿಸಬಾರದು ಎಂದು ಅಜ್ಮಿ ಪುನರುಚ್ಚರಿಸಿದ್ದರು.

ವಂದೇ ಮಾತರಂ ಅನ್ನು ಮುಸ್ಲಿಮರು ಎಂದಿಗೂ ವಿರೋಧಿಸಲಿಲ್ಲ. ನಮ್ಮ ದೇಶಭಕ್ತಿಯನ್ನು ನೀವು ಖರೀದಿಸಲು ಸಾಧ್ಯವಿಲ್ಲ. ವಂದೇ ಮಾತರಂ ಎಂದಿಗೂ ನಮ್ಮ ವಿರುದ್ಧವಾಗಿರಲಿಲ್ಲ, ಇಲ್ಲ, ಮತ್ತು ಎಂದಿಗೂ ನಮ್ಮ ವಿರುದ್ಧವಾಗುವುದಿಲ್ಲ. ನಮ್ಮ ಹಿಂದೂ ಸಹೋದರರು ಅದನ್ನು ಹೆಮ್ಮೆಯಿಂದ ಹಾಡುತ್ತಾರೆ ಮತ್ತು ಅದನ್ನು ಮುಂದುವರಿಸುತ್ತಾರೆ. ಅಧಿಕಾರವನ್ನು ಪಡೆಯಲು ನೀವು ಅದನ್ನು ರಾಜಕೀಯ ಸಾಧನವಾಗಿ ಬಳಸಬೇಡಿ ಎಂದು ನಾನು ವಿನಂತಿಸುತ್ತೇನೆ, ಏಕೆಂದರೆ ಅಧಿಕಾರವು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ" ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com