

ಅಹಮದಾಬಾದ್: ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಭಾನುವಾರ ಅಹಮದಾಬಾದ್‌ನಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದ ಮೂವರು ಶಂಕಿತರನ್ನು ಬಂಧಿಸಿದೆ.
ಮೂವರು ಶಂಕಿತರ ಚಲನವಲನ ಮೇಲೆ ಕಳೆದ ವರ್ಷದಿಂದ ನಿಗಾ ವಹಿಸಲಾಗಿತ್ತು ಎಂದು ಗುಜರಾತ್ ಎಟಿಎಸ್ ಹೇಳಿದೆ.ಮೂವರು ಶಂಕಿತರನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.
ಅವರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಜಿಸುತ್ತಿದ್ದರು" ಎಂದು ಗುಜರಾತ್ ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಆನ್ ಲೈನ್ ನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಮಹಿಳೆ ಸೇರಿದಂತೆ ಐವರು ಅಲ್ ಖೈದಾ ಭಯೋತ್ಪಾದಕರನ್ನು ಗುಜರಾತ್ ATS ಬಂಧಿಸಿತ್ತು.
ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬೆಂಗಳೂರಿನ 30 ವರ್ಷದ ಸಮಾ ಪರ್ವೀನ್ ಎಂಬ ಮಹಿಳೆಯನ್ನು ಎಟಿಎಸ್ ಬಂಧಿಸಿತ್ತು. ಅವರು ಅಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ.
ಆಕೆಯ ಬಂಧನದ ನಂತರ ಇದೀಗ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಎಟಿಎಸ್ ಉಪ ಪೊಲೀಸ್ ಮಹಾನಿರ್ದೇಶಕ ಸುನಿಲ್ ಜೋಶಿ ತಿಳಿಸಿದ್ದಾರೆ.
Advertisement