

ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ 2 ನೇ ಹಾಗೂ ಅಂತಿಮ ಹಂತದ ಮತದಾನ ಇಂದು ಪೂರ್ಣಗೊಂಡಿದ್ದು, ದಾಖಲೆಯ ಶೇ. 67.14ಕ್ಕೂ ಹೆಚ್ಚು ಮತದಾನ ನಡೆದಿದೆ.
ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದೆ. ಹಲವು ಸಮೀಕ್ಷೆಗಳ ಪೈಕಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆಗಳಿವೆ
ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚಿಸಲು 122 ಸ್ಥಾನಗಳ ಬಹುಮತ ಅಗತ್ಯವಿದೆ.
ಡಿವಿ ರಿಸರ್ಚ್ ಸಮೀಕ್ಷೆ
ಡಿವಿ ರಿಸರ್ಚ್ ಪ್ರಕಾರ, ಎನ್‌ಡಿಎ 137-152 ಸ್ಥಾನಗಳೊಂದಿಗೆ ಸರ್ಕಾರ ರಚಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಮಹಾಘಟಬಂಧನ್ 83-98 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಜನ್ ಸುರಾಜ್ 2-4 ಸ್ಥಾನಗಳನ್ನು ಮತ್ತು ಇತರರು 1-8 ಸ್ಥಾನಗಳನ್ನು ಪಡೆಯಬಹುದು ಎನ್ನುತ್ತಿದೆ ಈ ಸಮೀಕ್ಷೆ.
ಜೆವಿಸಿ ಸಮೀಕ್ಷೆ
ಜೆವಿಸಿಯ ಸಮೀಕ್ಷೆಯ ಪ್ರಕಾರ, ಎನ್‌ಡಿಎ 142 ಸ್ಥಾನಗಳನ್ನು, ಎಂಜಿಬಿ 95 ಮತ್ತು ಜೆಎಸ್‌ಪಿ 1 ಮತ್ತು ಇತರರು 5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಊಹಿಸಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಸಮೀಕ್ಷೆಯು ಎನ್‌ಡಿಎಗೆ 147-167 ಸ್ಥಾನಗಳು ಸಿಗುವ ಸುಳಿವು ನೀಡಿದ್ದು, ಇದು ಆರಾಮದಾಯಕ ಬಹುಮತವಾಗಿದೆ. ಮ್ಯಾಟ್ರಿಜ್ ಪ್ರಕಾರ, ಮಹಾಘಟಬಂಧನ್ ಚುನಾವಣೆಯಲ್ಲಿ 70-90 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಟೈಮ್ಸ್ ನೌ-CVoter: NDA 116, ಮಹಾಘಟಬಂಧನ್ 120, LJP 1, ಇತರೆ 6
News18-ಟುಡೇಸ್ ಚಾಣಕ್ಯ: ಮಹಾಘಟಬಂಧನ್ 180 (±11), NDA 102 (±11).
Advertisement