

ಸೋಷಿಯಲ್ ಮೀಡಿಯಾ ಎಂದರೆ ಹಾಗೆ, ಇದ್ದಕ್ಕಿದ್ದ ಹಾಗೆ ಯಾರ್ಯಾರೋ, ಯಾರೋ ಹೇಳಿದ ಮಾತುಗಳು, ವಿಷಯಗಳು, ಮಾಡಿದ ಕೆಲಸಗಳು ಸುದ್ದಿಯಾಗಿ ಸಾಕಷ್ಟು ಸೆನ್ಸೇಷನ್ ಹುಟ್ಟುಹಾಕುತ್ತದೆ.
ಇದೀಗ ಕಳೆದ ನಾಲ್ಕೈದು ದಿನಗಳಿಂದ ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ಮರಾಠಿ ನಟಿ ಗಿರಿಜಾ ಓಕ್ ದಿಢೀರನೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಆಕೆ ನೀಡಿದ ಒಂದು ಸಂದರ್ಶನ ಅದರಲ್ಲಿ ಆಕೆ ಆಡಿರುವ ಕೆಲ ಮಾತುಗಳು ನೋಡುಗರ ಗಮನ ಸೆಳೆದಿದೆ. ಆಕೆಯ ಚೆಲುವೆಗೆ ಕೆಲವರು ಮಾರು ಹೋಗಿದ್ದಾರೆ. ಅದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಅಮೇರಿಕನ್ ನಟಿ ಸಿಡ್ನಿ ಸ್ವೀನಿ ಹಾಗೂ ಇಟಾಲಿಯನ್ ಮಾಡೆಲ್ ಮೋನಿಕಾ ಬೆಲ್ಲುಸಿ ಜೊತೆ ಗಿರಿಜಾ ಓಕ್ ಅವರನ್ನು ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಗಿರಿಜಾ ಮುಂದೆ ಅವರಿಬ್ಬರು ಏನೇನು ಅಲ್ಲ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇದು ಖುದ್ದು ಗಿರಿಜಾ ಓಕ್ ಅವರಿಗೂ ತಲುಪಿದೆ. ಇದು ಸಹಜವಾಗಿಯೇ ಆಕೆಯ ಸಂತಸಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಫೋಟೊಗಳು ವೈರಲ್ ಆಗಿ ಆಕೆಯ ಹಿನ್ನೆಲೆ ಏನು, ನಟಿಸಿರುವ ಸಿನಿಮಾಗಳು ಯಾವುವು ಎಂದು ಕೆಲವರು ಹುಡುಕಾಡುತ್ತಿದ್ದಾರೆ.
ಚಾನೆಲ್ ದಿ ಲಲ್ಲಂಟಾಪ್‌ನಲ್ಲಿ ನಡೆದ ಸಂದರ್ಶನದಲ್ಲಿ ಗಿರಿಜಾ ತಮ್ಮ ಭೌತಶಾಸ್ತ್ರ ಪ್ರಾಧ್ಯಾಪಕರ ತರಗತಿಯ ಘಟನೆಯನ್ನು ನೆನಪಿಸಿಕೊಂಡಿದ್ದರು. ಪ್ರಾಧ್ಯಾಪಕರು "ಬೇಬ್ಸ್ ಎಂದರೇನು?" ಎಂದು ಕೇಳಿದ್ದರಂತೆ. ಆರಂಭದಲ್ಲಿ ಗೊಂದಲ ಉಂಟಾಯಿತಂತೆ, ಅಲೆಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ತಪ್ಪಾಗಿ ಉಚ್ಚರಿಸಲಾಗಿದೆ ಎಂದು ಗೊತ್ತಾಯಿತಂತೆ.
ಸಂದರ್ಶನದಲ್ಲಿ ಗಿರಿಜಾ ತರಗತಿಯ ಅನುಭವವನ್ನು ವಿವರಿಸಿದ್ದಾರೆ. ನನಗೆ ಭೌತಶಾಸ್ತ್ರ ಪ್ರಾಧ್ಯಾಪಕರೊಬ್ಬರು ಇದ್ದರು. ಅವರು 'ಬೇಬ್ಸ್ ಎಂದರೇನು?' ಎಂದು ನಮ್ಮನ್ನು ಕೇಳಿದರು. ಸರ್‌ಗೆ ಏನಾಯಿತು ಎಂದು ನಮಗೆ ಆಶ್ಚರ್ಯವಾಯಿತು. ನಂತರ ಅವರು ಇನ್ನೊಬ್ಬ ವಿದ್ಯಾರ್ಥಿಯನ್ನು ನೋಡಿ ಪ್ರಶ್ನೆಗೆ ಉತ್ತರಿಸಲು ಕೇಳಿದರು. ಅವರು ಕೂಡ ಮೌನವಾಗಿದ್ದರು. ನಂತರ ನಮ್ಮ ಪ್ರಾಧ್ಯಾಪಕರು ಒಬ್ಬ ಹುಡುಗಿಯನ್ನು ನೋಡಿ 'ಬೇಬ್ಸ್ ಎಂದರೇನು?' ಎಂದು ಕೇಳಿದರು. ನಾವು ಅವರನ್ನು ನೋಡುತ್ತಲೇ ಇದ್ದೆವು."
ಈ ದಿಢೀರ್ ಕ್ರೇಜ್ ಬಗ್ಗೆ ನಟಿ ಗಿರಿಜಾ ಓಕ್ ಪ್ರತಿಕ್ರಿಯಿಸಿದ್ದಾರೆ. ಈ ರೀತಿ ವೈರಲ್ ಆಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ನಾನು ಯಾವುದೋ ನಾಟಕದ ರಿಹರ್ಸಲ್‌ನಲ್ಲಿದ್ದೆ. ಹೀಗೆ ವೈರಲ್ ಆಗುತ್ತಿರುವ ಬಗ್ಗೆ ಆಪ್ತರು ಮೆಸೇಜ್ ಮಾಡಿ ತಿಳಿಸಿದರು. ಇದು ನಟಿ ಪ್ರಿಯಾ ಬಾಪತ್ ಅಥವಾ ನಾನಾ ಎಂದು ಕೆಲವರು ಚರ್ಚಿಸುತ್ತಿದ್ದಾರೆ. ಇದು ಒಂದು ಟ್ರೆಂಡ್. ಇದು ಬಂದು ಹೋಗುತ್ತದೆ. ನನ್ನ ಕೆಲಸ ಮಾತ್ರ ಉಳಿಯುತ್ತದೆ. ಈಗ ನನ್ನ ಕೆಲಸದ ಬಗ್ಗೆ ತಿಳಿದುಕೊಳ್ಳುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.
ಗಿರಿಜಾ ಮರಾಠಿ, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪೋರ್ಟ್‌ಫೋಲಿಯೊದಲ್ಲಿ 'ತಾರೆ ಜಮೀನ್ ಪರ್' (2007), 'ಶೋರ್ ಇನ್ ದಿ ಸಿಟಿ' (2010), ಮತ್ತು ಇತ್ತೀಚಿನ 'ಜವಾನ್' (2023) ನಂತಹ ಬಾಲಿವುಡ್ ಚಿತ್ರಗಳಲ್ಲಿನ ನಟಿಸಿದ್ದಾರೆ.
ಡಿಸೆಂಬರ್ 27, 1987 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಗಿರಿಜಾ, 2011 ರಲ್ಲಿ ಚಲನಚಿತ್ರ ನಿರ್ಮಾಪಕ ಸುಹೃದ್ ಗಾಡ್ಬೋಲೆ ಅವರನ್ನು ವಿವಾಹವಾದರು. ಪ್ರಸಿದ್ಧ ನಟ ಗಿರೀಶ್ ಓಕ್ ಅವರ ಪುತ್ರಿ. ಅವರು ಮುಂಬೈನ ಠಾಕೂರ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ ಮತ್ತು ವ್ಯವಹಾರ ನಿರ್ವಹಣೆಯನ್ನು ಸಹ ಅಧ್ಯಯನ ಮಾಡಿದ್ದಾರೆ.
Advertisement