

ಜೈಪುರ: ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೊಡಿಸಿದ್ದು, ಮತದಾರರಿಗೆ ಹಣ ಕೊಟ್ಟು ಪಡೆದ ಗೆಲುವು ಇದಾಗಿದೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರ ಹೇಳಿದ್ದಾರೆ,
ಬಿಹಾರ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿರುವ ಅವರು, ಚುನಾವಣಾ ಫಲಿತಾಂಶ ನಿರಾಶದಾಯಕವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಲಾಗಿದೆ. ಇದು ಮಹಿಳಾ ಮತದಾರರಿಗೆ ಹಣ ಕೊಟ್ಟು ಪಡೆದ ಗೆಲುವು ಎಂದು ಟೀಕಿಸಿದ್ದಾರೆ.
ಚುನಾವಣೆಗೂ ಮುನ್ನ ಬಿಹಾರದ ಮಹಿಳಾ ಮತದಾರರಿಗೆ ತಲಾ 10,000 ರೂ.ಗಳನ್ನು ನೀಡಲಾಗಿದೆ. ಮಹಿಳೆಯರಿಗೆ ಹಣದ ಆಮಿಷವೊಡ್ಡಿದೆ. ಚುನಾವಣಾ ಪ್ರಚಾರದ ಸಮಯದಲ್ಲೂ ಇದು ನಡೆದಿದೆ. ಆದರೆ, ಚುನಾವಣಾ ಆಯೋಗವು ಮೂಕ ಪ್ರೇಕ್ಷಕನಾಗಿತ್ತು ಎಂದು ಆರೋಪಿಸಿದ್ದಾರೆ.
ಬಿಹಾರ ಫಲಿತಾಂಶಗಳು ನಿರಾಶಾದಾಯಕವಾಗಿವೆ. ಬಿಹಾರದಲ್ಲಿ ನಾನು ಕಂಡಂತೆ, ಹಣ ಹಂಚಿಕೆ ನಡೆಯುತ್ತಲೇ ಇತ್ತು. ಆದರೆ, ಚುನಾವಣಾ ಆಯೋಗ ಅದನ್ನು ನಿಲ್ಲಿಸಲಿಲ್ಲ. ಬಿಜೆಪಿ ಹಣದ ಶಕ್ತಿಯನ್ನು ಬಳಸಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡಿದೆ, ದೇಶಕ್ಕೆ ಕಾಂಗ್ರೆಸ್ ಮತ್ತು ಅದರ ಸಿದ್ಧಾಂತದ ಅಗತ್ಯವಿದೆ ಎಂದು ಹೇಳಿದ್ದಾರೆ.
Advertisement