

ಬೆಂಗಳೂರು: ನವೆಂಬರ್ 10 ರಂದು ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಉಮರ್ ಉನ್ ನಬಿಗೆ ಬಹಳ ಹಿಂದೆಯೇ ಆತ್ಮಹತ್ಯಾ ಬಾಂಬರ್ ತರಬೇತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಬಹಳ ಹಿಂದೆಯೇ ಮಸೂದ್ ಅಜರ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಸಂಘಟನೆ ಫಿದಾಯೀನ್ (ಆತ್ಮಹತ್ಯಾ ಬಾಂಬರ್) ಆಗಿ ತರಬೇತಿ ನೀಡಿರಬಹುದು ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 24, 1989 ರಂದು ಜನಿಸಿದ ಉಮರ್, ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ವೈದ್ಯಕೀಯ ವಿಭಾಗದಲ್ಲಿ ಎಂಡಿ ಪದವಿಯನ್ನು ಪೂರ್ಣಗೊಳಿಸಿದ. ನಂತರ ದೆಹಲಿಗೆ ತೆರಳುವ ಮೊದಲು ಅನಂತ್‌ನಾಗ್‌ನ ಜಿಎಂಸಿಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಸಲ್ಲಿಸಿದ್ದ.
ಅನಂತ್‌ನಾಗ್‌ನ ಜಿಎಂಸಿಯಲ್ಲಿ ಅವನನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಯಿತು, ಆತ ಪ್ರಬಲವಾದ ಸೈದ್ಧಾಂತಿಕ ನಂಬಿಕೆಗಳನ್ನು ಹೊಂದಿದ್ದ, ಆತ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದ ಎಂದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಆತ ತನ್ನ ಮನೆಯಲ್ಲಿ ಹಿಂಸೆ ಮತ್ತು ನಿಂದನೆ ಅನುಭವಿಸಿದ್ದ ಈ ವರ್ಷದ ಜನವರಿಯಲ್ಲಿ, ಅವನು ಆಪ್ತರ ಬಳಿ ಆತ್ಮಹತ್ಯಾ ಬಾಂಬ್ ದಾಳಿಯ ಪರಿಕಲ್ಪನೆಯನ್ನು ಸಮರ್ಥಿಸಿಕೊಂಡಿದ್ದನೆಂದು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಶ್‌ನಲ್ಲಿ ನೇಮಕಾತಿ ಸುಲಭವಲ್ಲ. ಭಾರತದ ಬಗ್ಗೆ ದ್ವೇಷ ಹೊಂದಿರುವವರು, ಕಠಿಣ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸುವವರಿಗೆ ಮಾತ್ರ ಜವಾಬ್ದಾರಿ ಹಾಗೂ ಉತ್ತಮ ಸ್ಥಾನ ದೊರೆಯುತ್ತದೆ.
ಉಮರ್ ಬದರ್ಪುರದಿಂದ ಕೆಂಪು ಕೋಟೆಗೆ ಕಾರು ಚಾಲನೆ ಮಾಡುವಾಗ ಅವನಿಗೆ ಆತ್ಮಹತ್ಯಾ ಬಾಂಬರ್ ಆಗಲು ತರಬೇತಿ ನೀಡಲಾಗಿದೆ ಎಂಬುದು ಆತನ ದೇಹ ಭಾಷೆಯಿಂದ ಸ್ಪಷ್ಟವಾಗಿತ್ತು. ಅವನು ಶಾಂತ ಚಿತ್ತದಿಂದ ಇದ್ದಂತೆ ಕಾಣುತ್ತಿದ್ದನು, ಆತನ ಮುಖದಲ್ಲಿ ಯಾವುದೇ ಉದ್ವೇಗ ಅಥವಾ ಗೊಂದಲ ಇರಲಿಲ್ಲ. ಇದು ಆತ್ಮಹತ್ಯಾ ಬಾಂಬರ್‌ನ ವಿಶಿಷ್ಟ ಲಕ್ಷಣ ಎಂದು ಅವರು ಹೇಳಿದರು.
ಉಮರ್ ಕೆಂಪು ಕೋಟೆಯ ಬಳಿ i20 ಕಾರನ್ನು ಮೂರು ಗಂಟೆಗಳ ಕಾಲ ನಿಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಧಿಕಾರಿಗಳು, ಆತ ಸ್ಫೋಟಿಸಲು ಅಂತಿಮ ಸೂಚನೆಗಳಿಗಾಗಿ ಕಾಯುತ್ತಿರಬಹುದು ಎಂದು ತೋರುತ್ತದೆ. ದೆಹಲಿ/ಎನ್‌ಸಿಆರ್‌ನಲ್ಲಿ ಭಯೋತ್ಪಾದಕ ದಾಳಿ ಮಾಡಲು ಜೈಶ್‌ನ ಅತ್ಯುನ್ನತ ನಾಯಕನಿಂದ ಗ್ರೀನ್ ಸಿಗ್ನಲ್ ಬರಬೇಕು ಎಂದು ಮೂಲಗಳು ತಿಳಿಸಿವೆ,
ಕೆಂಪು ಕೋಟೆ ಸ್ಫೋಟದಲ್ಲಿ ಉಮರ್ ಕೂಡ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ಮಾನವ ಅವಶೇಷಗಳ ಡಿಎನ್‌ಎ ಮಾದರಿಗಳು ಆತನ ತಾಯಿಯ ಡಿಎನ್‌ಎ ಮಾದರಿಗಳೊಂದಿಗೆ ಹೊಂದಿಕೆಯಾಗುತ್ತವೆ. ಸ್ಫೋಟಕ ತುಂಬಿದ ಕಾರನ್ನು ಹೇಗೆ ಸ್ಫೋಟಿಸಲಾಯಿತು ಎಂಬುದರ ಕುರಿತು ಹಲವು ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ್‌ನಲ್ಲಿ ಭಾರತವು ಬಹಾವಲ್‌ಪುರದಲ್ಲಿರುವ ಜೈಶ್‌ನ ಪ್ರಧಾನ ಕಚೇರಿ ಸೇರಿದಂತೆ ಗಡಿಯುದ್ದಕ್ಕೂ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ನಾಲ್ಕು ದಿನಗಳ ನಿರಂತರ ದಾಳಿ ನಂತರ ವಿವರಗಳನ್ನು ರಾಷ್ಟ್ರಕ್ಕೆ ತಿಳಿಸಲು ಸಶಸ್ತ್ರ ಪಡೆಗಳ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕೆ ಪ್ರತಿಕ್ರಿಯಾಗಿ ಲಕ್ನೋದಿಂದ ಡಾ. ಶಾಹೀನ್ ಶಾಹಿದ್ ಳನ್ನು ಜೈಶ್ ಸಂಘಟನೆ ನೇಮಕ ಮಾಡಿಕೊಂಡಿತ್ತು ಎಂದು ಹೇಳಲಾಗಿದೆ.
Advertisement