Dawood Ibrahim drug parties: ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ನೋರಾ ಫತೇಹಿ ಸೇರಿ ಹಲವರ ಹೆಸರು ಬಹಿರಂಗ

ವರದಿಯಾದ ಹೆಸರುಗಳಲ್ಲಿ ರ‍್ಯಾಪರ್ ಲೋಕಾ, ನಟಿ ಶ್ರದ್ಧಾ ಕಪೂರ್, ನೋರಾ ಫತೇಹಿ, ಓರ್ರಿ ಮತ್ತು ನಿರ್ದೇಶಕ ಜೋಡಿ ಅಬ್ಬಾಸ್-ಮಸ್ತಾನ್ ಸೇರಿದ್ದಾರೆ. ಅಕ್ಟೋಬರ್ 2024 ರಲ್ಲಿ ಅವರ ತಂದೆ ಬಾಬಾ ಸಿದ್ದಿಕ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಜೀಶನ್ ಸಿದ್ದಿಕ್ ಅವರ ಹೆಸರು ಕೂಡ ಇದೆ.
Shraddha Kapoor and Nora Fatehi
ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ
Updated on

ಬಾಲಿವುಡ್ ಸುಂದರಿಯರಾದ ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರನ್ನು 252 ಕೋಟಿ ರೂಪಾಯಿಗಳ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಹೆಸರು ಕೇಳಿಬಂದಿದೆ. ಇದು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಹೊಂದಿದೆ.

ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಅವರನ್ನೂ ಮಾದಕವಸ್ತು ತನಿಖೆಯಲ್ಲಿ ಹೆಸರಿಸಲಾಗಿದೆ. ಇತರ ಸೆಲೆಬ್ರಿಟಿಗಳು ಓರ್ರಿ, ಅಬ್ಬಾಸ್ ಮಸ್ತಾನ್, ಜೀಶನ್ ಸಿದ್ದಿಕಿ. ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಪ್ರಮುಖನಾಗಿರುವ ಮೊಹಮ್ಮದ್ ಸಲೀಂ ದುಬೈ ಮತ್ತು ಮುಂಬೈನಲ್ಲಿ ಪಾರ್ಟಿಗಳನ್ನು ಆಯೋಜಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಸಿಂಡಿಕೇಟ್ ನ್ನು ಡ್ರಗ್ ದೊರೆ ಸಲೀಂ ಡೋಲಾ ನಡೆಸುತ್ತಿದ್ದನೆಂದು ಆರೋಪಿಸಲಾಗಿದೆ. ದಾವೂದ್ ಸಹಚರ ದುಬೈನಿಂದ ಈ ಜಾಲವನ್ನು ನಿರ್ವಹಿಸುತ್ತಿದ್ದ. ಪೊಲೀಸರನ್ನು ಉಲ್ಲೇಖಿಸಿ ವರದಿಗಳ ಪ್ರಕಾರ, ಭಾರತದ ಹಲವು ರಾಜ್ಯಗಳಿಗೆ ಮೆಫೆಡ್ರೋನ್ (ಎಂ-ಕ್ಯಾಟ್ ಅಥವಾ ಮಿಯಾಂವ್ ಮಿಯಾಂವ್) ನ್ನು ಪೂರೈಸುತ್ತಿದ್ದನು, ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದನು.

ಅವನ ಮಗ ತಾಹೆರ್ ಡೋಲಾನನ್ನು ಆಗಸ್ಟ್‌ನಲ್ಲಿ ಯುಎಇಯಿಂದ ಹಸ್ತಾಂತರಿಸಲಾಯಿತು. ತನಿಖಾಧಿಕಾರಿಗಳಿಗೆ ಪ್ರಮುಖ ಮಾಹಿತಿಯನ್ನು ನೀಡಿದ್ದು ತಾಹೆರ್.

Shraddha Kapoor and Nora Fatehi
ಡಿ-ಕಂಪನಿ ಡ್ರಗ್ ಗಳಿಗೆ ಬಾಲಿವುಡ್ ತಾರೆಯರೇ ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರು!

ಬಾಲಿವುಡ್ ನಟ-ನಟಿಯರು, ಮಾಡೆಲ್‌ಗಳು, ರ‍್ಯಾಪರ್‌ಗಳು, ಚಲನಚಿತ್ರ ನಿರ್ಮಾಪಕರು ಮತ್ತು ದಾವೂದ್‌ನ ಸಂಬಂಧಿಕರು ಭಾರತ ಮತ್ತು ವಿದೇಶಗಳಲ್ಲಿ ಆಯೋಜಿಸಿದ್ದ ಡ್ರಗ್ ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎಂದು ತಾಹೆರ್ ಹೇಳಿಕೊಂಡಿದ್ದಾರೆ.

ರಿಮ್ಯಾಂಡ್ ಪ್ರತಿಯಲ್ಲಿ ತಾಹೆರ್ ಈ ಪಾರ್ಟಿಗಳನ್ನು ಏರ್ಪಡಿಸಿದ್ದಲ್ಲದೆ, ಕಾರ್ಯಕ್ರಮಗಳಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು ಎಂದು ಹೇಳಲಾಗಿದೆ. ಜಾಲ ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಹಿಂದೆ ಅಲಿಶಾ ಪಾರ್ಕರ್, ನೋರಾ ಫತೇಹಿ, ಶ್ರದ್ಧಾ ಕಪೂರ್ ಮತ್ತು ಆಕೆಯ ಸಹೋದರ ಸಿದ್ಧಾರ್ಥ್ ಕಪೂರ್, ಜಿಶಾನ್ ಸಿದ್ದಿಕಿ, ಒರಿ ಅಲಿಯಾಸ್ ಓರ್ಹಾನ್, ಅಬ್ಬಾಸ್ ಮಸ್ತಾನ್, ಲೋಕಾ ಮತ್ತು ಇತರ ಅನೇಕರೊಂದಿಗೆ ದೇಶ- ವಿದೇಶಗಳಲ್ಲಿ ಡ್ರಗ್ ಪಾರ್ಟಿಗಳನ್ನು ಆಯೋಜಿಸಿದ್ದಾನೆ. ಸ್ವತಃ ಅವರೊಂದಿಗೆ ಸೇರಿಕೊಂಡು ಈ ಜನರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾನೆ ಎಂದು ಮಾಧ್ಯಮ ವರದಿಗಳು ದಾಖಲೆಯನ್ನು ಉಲ್ಲೇಖಿಸಿವೆ.

ಶ್ರದ್ಧಾ ಕಪೂರ್ 2017 ರಲ್ಲಿ ಅಪೂರ್ವ ಲಖಿಯಾ ನಿರ್ದೇಶಿಸಿದ ಚಲನಚಿತ್ರದಲ್ಲಿ ದಾವೂದ್ ಇಬ್ರಾಹಿಂನ ತಂಗಿ ಹಸೀನಾ ಪಾರ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ಆಕೆಯ ಸಹೋದರ ಸಿದ್ಧಾರ್ಥ್ ಕಪೂರ್ ದಾವೂದ್ ಪಾತ್ರ ನಿರ್ವಹಿಸಿದ್ದರು.

ದುಂದುವೆಚ್ಚದ ಪಾರ್ಟಿಗಳು

ಅಕ್ಟೋಬರ್‌ನಲ್ಲಿ ದುಬೈನಿಂದ ಗಡೀಪಾರು ಮಾಡಲಾದ ಮೊಹಮ್ಮದ್ ಸಲೀಂ ಮೊಹಮ್ಮದ್ ಸುಹೈಲ್ ಶೇಖ್ ಕೂಡ ಎಎನ್‌ಸಿಯ ಘಾಟ್‌ಕೋಪರ್ ಘಟಕದ ವಶದಲ್ಲಿದ್ದಾರೆ. ಪಿಟಿಐ ಪ್ರಕಾರ, ವಿಚಾರಣೆಯ ಸಮಯದಲ್ಲಿ ಶೇಖ್ ಭಾರತ ಮತ್ತು ವಿದೇಶಗಳಲ್ಲಿ ಮಾದಕವಸ್ತು ಪಾರ್ಟಿಗಳನ್ನು ಆಯೋಜಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ.

ದುಬಾರಿ ಜೀವನಶೈಲಿಯಿಂದಾಗಿ ಮಾದಕವಸ್ತು ಜಗತ್ತಿನಲ್ಲಿ ಶೇಖ್ ಐಷಾರಾಮಿ ಕಾರುಗಳು, ಬ್ರಾಂಡೆಡ್ ಕೈಗಡಿಯಾರಗಳು ಮತ್ತು ದುಬಾರಿ ಬಟ್ಟೆಗಳನ್ನು ಬಳಸುತ್ತಿದ್ದನು.

ಈ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಇತರರನ್ನು ಗುರುತಿಸಲು ANC ಈಗ ಪ್ರಯತ್ನಿಸುತ್ತಿದೆ. ಇತರ ಮಾದಕವಸ್ತು ಕಳ್ಳಸಾಗಣೆದಾರರು ಸೆಲೆಬ್ರಿಟಿಗಳಿಗೆ ಇದೇ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆಯೇ ಎಂದು ಅದು ಪರಿಶೀಲಿಸುತ್ತಿದೆ. ತನಿಖೆಯಲ್ಲಿ ಹೆಸರಿಸಲಾದ ಸೆಲೆಬ್ರಿಟಿಗಳನ್ನು ಪ್ರಶ್ನಿಸುವ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ ಎಂದು ಪಿಟಿಐ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com