

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಅಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಆಘಾತಕಾರಿ ಸೋಲಿನ ಬಳಿಕ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ.
ಇತ್ತೀಚೆಗಷ್ಟೇ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ತಮ್ಮದೇ ಕುಟುಂಬಸ್ಥರ ವಿರುದ್ಧ ಕಿಡಿಕಾರಿ ಇನ್ನು ಮುಂದೆ ನಾನು ಆ ಕುಟುಂಬದ ಭಾಗವಲ್ಲ ಎಂದು ಘೋಷಿಸಿದ್ದಾರೆ.
ಈ ವಿಚಾರ ವ್ಯಾಪಕ ವೈರಲ್ ಆಗಿರುವಂತೆಯೇ ಇದೀಗ ಲಾಲು ಪ್ರಸಾದ್ ಯಾದವ್ ಕುಟುಂಬದ ಮತ್ತೊಂದು ಕುಡಿ ಹಾಗೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಇದೀಗ ತಮ್ಮದೇ ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದಾರೆ.
ಕುಟುಂಬದಿಂದ ಹೊರಗೆ ಬಂದು ತಮ್ಮ ಆದ ಜೆಜೆಡಿ (ಜನಶಕ್ತಿ ಜನತಾದಳ) ಪಕ್ಷ ಸ್ಥಾಪಿಸಿರುವ ತೇಜ್ ಪ್ರತಾಪ್ ಇದೀಗ ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಅವರ ಎನ್ಡಿಎಗೆ ಬೆಂಬಲ ನೀಡಲು ಸಜ್ಜಾಗಿದ್ದು, ಸಹೋದರಿ ರೋಹಿಣಿ ಆಚಾರ್ಯಗೂ ಬಿಗ್ ಆಫರ್ ನೀಡಿದ್ದಾರೆ.
ರೋಹಿಣಿ ಆಚಾರ್ಯ ಕುರಿತು ತೇಜ್ ಪ್ರತಾಪ್ ಯಾದವ್ ಪ್ರತಿಕ್ರಿಯೆ
ತಮ್ಮ ಸಹೋದರಿ ರೋಹಿಣಿ ಆಚಾರ್ಯ ಕುರಿತು ಮಾತನಾಡಿದ ತೇಜ್ ಪ್ರತಾಪ್ ಯಾದವ್ "ನನಗಾದ ಅನ್ಯಾಯವನ್ನು ನಾನು ಸಹಿಸಿಕೊಂಡಿದ್ದೆ. ಆದರೆ ನನ್ನ ಸಹೋದರಿಯ ಮೇಲೆ ಮಾಡಿದ ಅವಮಾನವನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗದು. ತಮ್ಮ ಕುಟುಂಬದ ಮೇಲೆ ದಾಳಿ ಮಾಡುವವರನ್ನು ಬಿಹಾರದ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.
ರೋಹಿಣಿ ಆಚಾರ್ಯ ತಮ್ಮ ಕುಟುಂಬದ ಮೇಲೆ ಕಿರುಕುಳ ಮತ್ತು ದೈಹಿಕ ದೌರ್ಜನ್ಯದ ಆರೋಪ ಹೊರಿಸಿ ಶನಿವಾರ ಸಿಂಗಾಪುರಕ್ಕೆ ತೆರಳಿದರು. "ಈ ಹೋರಾಟ ಯಾವುದೇ ಪಕ್ಷದ ಬಗ್ಗೆ ಅಲ್ಲ. ಇದು ಕುಟುಂಬದ ಗೌರವ, ಮಗಳ ಘನತೆ ಮತ್ತು ಬಿಹಾರದ ಸ್ವಾಭಿಮಾನದ ಬಗ್ಗೆ ರೋಹಿಣಿ ಹೇಳಿದ್ದರು.
ಜೆಜೆಡಿಯಲ್ಲಿ ರೋಹಿಣಿಗೆ ಪೋಷಕ ಸ್ಥಾನ
ಇನ್ನು ತೇಜ್ ಪ್ರತಾಪ್ ಯಾದವ್ ತಮ್ಮ ಸಹೋದರಿ ರೋಹಿಣಿ ಆಚಾರ್ಯ ಅವರಿಗೆ ರಾಜಕೀಯ ತ್ಯಜಿಸುವ ಮತ್ತು ಯಾದವ್ ಕುಟುಂಬವನ್ನು ತ್ಯಜಿಸುವ ನಿರ್ಧಾರವನ್ನು ಘೋಷಿಸಿದ ಮರುದಿನವೇ ಜೆಜೆಡಿಯ ಪೋಷಕ ಸ್ಥಾನವನ್ನು ನೀಡಿ ಗಮನ ಸೆಳೆದಿದ್ದಾರೆ. ತೇಜ್ ಪ್ರತಾಪ್ ಯಾದವ್ ಶೀಘ್ರದಲ್ಲೇ ರೋಹಿಣಿ ಆಚಾರ್ಯ ಅವರೊಂದಿಗೆ ಮಾತನಾಡಲಿದ್ದಾರೆ ಮತ್ತು ಜೆಜೆಡಿ ಸೇರುವಂತೆ ಅವರನ್ನು ಒತ್ತಾಯಿಸಲಿದ್ದಾರೆ ಎಂದು ಜೆಜೆಡಿ ಪಕ್ಷದ ವಕ್ತಾರ ಪ್ರೇಮ್ ಯಾದವ್ ಹೇಳಿದ್ದಾರೆ.
ಪ್ರೇಮ್ ಯಾದವ್ ಕೂಡ ಆಘಾತಕಾರಿ ಹೇಳಿಕೆ ನೀಡಿ ಆರ್ಜೆಡಿ ಇನ್ನು ಮುಂದೆ ತೇಜಶ್ವಿ ಅವರ ಪಕ್ಷವಲ್ಲ ಆದರೆ ಸಂಜಯ್ ಯಾದವ್ ಪಕ್ಷವನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅವರು ಲಾಲು ಯಾದವ್ ಅವರ ಹೊಸ ಪಕ್ಷ ಜನಶಕ್ತಿ ಜನತಾದಳ ಅವರು ಘೋಷಿಸಿದ್ದಾರೆ.
ರಾಜಕೀಯ ತ್ಯಜಿಸಿದ ರೋಹಿಣಿ ಆಚಾರ್ಯ
ರೋಹಿಣಿ ಆಚಾರ್ಯ ತಮ್ಮ ಕುಟುಂಬದ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ್ದು, ತಮ್ಮನ್ನು ನಿಂದಿಸಲಾಯಿತು, ಶಾಪಗ್ರಸ್ತಗೊಳಿಸಲಾಯಿತು ಮತ್ತು ಚಪ್ಪಲಿಗಳನ್ನು ಎಸೆಯಲಾಯಿತು ಎಂದು ಹೇಳಿದರು.
ರಾಜಕೀಯವನ್ನು ತ್ಯಜಿಸಲು ಮತ್ತು ಕುಟುಂಬವನ್ನು ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ಅವರು ಘೋಷಿಸಿದರು. ಕುಟುಂಬದಲ್ಲಿನ ಬಿರುಕುಗೆ ಆರ್‌ಜೆಡಿ ಸಂಸದ ಸಂಜಯ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರ ದೀರ್ಘಕಾಲದ ಸ್ನೇಹಿತ ರಮೀಜ್ ಖಾನ್ ಅವರನ್ನು ಸಹ ಅವರು ಹೊಣೆಗಾರರನ್ನಾಗಿ ಮಾಡಿದ್ದಾರೆ.
Advertisement