ದೆಹಲಿಯ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ, VIKAS ಕುರಿತು ಉಪನ್ಯಾಸ; Video

ಜೆಎನ್‌ಯು ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ನ್ನು 2024 ರ ಫೆಬ್ರವರಿಯಲ್ಲಿ ವಿದ್ಯಾರಣ್ಯ ಜ್ಞಾನ ಮತ್ತು ಉನ್ನತ ಅಧ್ಯಯನ ಸಂಸ್ಥೆ (VIKAS) ಎಂದು ಮರುನಾಮಕರಣ ಮಾಡಲಾಗಿದೆ.
Sringeri seer in JNU
ಜೆಎನ್ ಯು ಕ್ಯಾಂಪಸ್ ನಲ್ಲಿ ಶೃಂಗೇರಿ ಶ್ರೀಗಳು, ವಿದ್ಯಾರಣ್ಯರ ಪ್ರತಿಮೆಗೆ ಶೃ ಮಾಲಾರ್ಪಣೆ, ಉಪನ್ಯಾಸ online desk
Updated on

ನವದೆಹಲಿ: ದೆಹಲಿಗೆ ಯಾತ್ರೆ ಕೈಗೊಂಡಿರುವ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಶ್ರೀಗಳು ದೆಹಲಿಯಲ್ಲಿರುವ ಪ್ರಸಿದ್ಧ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU) ಗೆ ಇಂದು (ನ.19 ರಂದು) ಭೇಟಿ ನೀಡಿದ್ದರು.

ಜೆಎನ್ ಯು ಕ್ಯಾಂಪಸ್ ನಲ್ಲಿದ್ದ ಜೆಎನ್‌ಯು ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ನ್ನು 2024 ರ ಫೆಬ್ರವರಿಯಲ್ಲಿ ವಿದ್ಯಾರಣ್ಯ ಜ್ಞಾನ ಮತ್ತು ಉನ್ನತ ಅಧ್ಯಯನ ಸಂಸ್ಥೆ (VIKAS) ಎಂದು ಮರುನಾಮಕರಣ ಮಾಡಲಾಗಿದ್ದು, ವಿದ್ಯಾರಣ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶೃಂಗೇರಿ ಪೀಠದ ಈ ಹಿಂದಿನ ಆಡಳಿತಾಧಿಕಾರಿಗಳೂ, ಸಲಹೆಗಾರರೂ ಆಗಿದ್ದ ಡಾ.ವಿ ಆರ್ ಗೌರಿಶಂಕರ್ ಭಾಗಿಯಾಗಿದ್ದರು. ಈಗ ಸ್ವತಃ ಶೃಂಗೇರಿ ಜಗದ್ಗುರುಗಳು ವಿದ್ಯಾರಣ್ಯ ಜ್ಞಾನ ಮತ್ತು ಉನ್ನತ ಅಧ್ಯಯನ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರಣ್ಯರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ವಿದ್ಯಾರಣ್ಯರು ಶೃಂಗೇರಿ ಪೀಠದ 12ನೇ ಪೀಠಾಧಿಪತಿಗಳಾಗಿದ್ದರು. ಆ ಕಾಲಘಟ್ಟದ ರಾಜಕೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನವನ್ನು ವಿಜಯನಗರ ಸಾಮ್ರಾಜ್ಯದ ಮೂಲಕ ರೂಪಿಸುವಲ್ಲಿ ವಿದ್ಯಾರಣ್ಯ ಶ್ರೀಗಳ ಪಾತ್ರವು ಅವರನ್ನು ಭಾರತೀಯ ಇತಿಹಾಸದ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿರಿಸಿದೆ.

ಶೃಂಗೇರಿ ಶ್ರೀಗಳಿಗೆ ಉಪಕುಲಪತಿ ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್, ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಗೌರವಯುತ ಸ್ವಾಗತ ಕೋರಿದರು.

ವಿದ್ಯಾರಣ್ಯ ಜ್ಞಾನ ಮತ್ತು ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಸಂಸ್ಕೃತ ಹಾಗೂ ಇಂಡಿಕ್ ಸ್ಟಡೀಸ್ ( ಭಾರತೀಯ ಉಪಖಂಡದ ಭಾಷೆಗಳು, ಸಾಹಿತ್ಯ, ಇತಿಹಾಸ, ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಧರ್ಮಗಳ ಅಧ್ಯಯನ) ನ್ನು ಬೋಧಿಸಲಾಗುತ್ತದೆ. ಶೃಂಗೇರಿ ಶ್ರೀಗಳು ತಮ್ಮ ಭೇಟಿಯ ಸಂದರ್ಭದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರಣ್ಯರು ಮತ್ತು ಅದ್ವೈತದ ಬಗ್ಗೆ ವಿಶೇಷವಾದ ಉಪನ್ಯಾಸ ನೀಡಿದರು.

"ನಾವು ಕನಸಿನ ಸ್ಥಿತಿಯಲ್ಲಿ ಇರುವವರೆಗೆ ಮಾತ್ರ ಕನಸು ನಿಜವೆಂದು ಭಾವಿಸುತ್ತದೆ. ನಾವು ಎಚ್ಚರವಾದ ಕ್ಷಣ, ಅದು ಎಂದಿಗೂ ನಿಜವಾಗಿರಲಿಲ್ಲ ಎಂದು ನಾವು ತಕ್ಷಣ ಗುರುತಿಸುತ್ತೇವೆ."

ಅದೇ ರೀತಿ, ನಾವು ಆತ್ಮ ಜ್ಞಾನಕ್ಕೆ ಎಚ್ಚರಗೊಳ್ಳುವವರೆಗೆ ಮಾತ್ರ ದ್ವಂದ್ವತೆ ನಿಜವೆಂದು ತೋರುತ್ತದೆ. ನಿಜವಾದ ತಿಳುವಳಿಕೆ ಮೂಡಿದಾಗ, ಕನಸಿನಂತೆ ಪ್ರತ್ಯೇಕತೆಯ ಭ್ರಮೆಯೂ ಕಳಚುತ್ತದೆ.

ಜ್ಞಾನದ ಜೊತೆ ಅದನ್ನು ಸಂಸ್ಕಾರ - ಸರಿಯಾದ ನಡವಳಿಕೆ, ಸರಿಯಾದ ಮೌಲ್ಯಗಳು ಮತ್ತು ಧರ್ಮದೊಂದಿಗೆ ಹೊಂದಾಣಿಕೆಯ ಜೀವನದಿಂದ ಬೆಂಬಲಿಸಬೇಕು ಎಂದು ಶ್ರೀಗಳು ಈ ವೇಳೆ ಹೇಳಿದರು.

ಸಂಸ್ಥೆಯ ಗ್ರಂಥಾಲಯಕ್ಕೆ ಶಂಕರರ ಬ್ರಹ್ಮ ಸೂತ್ರ ಮತ್ತು ಭಗವದ್ಗೀತೆಯ ಭಾಷ್ಯವನ್ನು ಶ್ರೀಗಳು ಈ ಸಂದರ್ಭದಲ್ಲಿ ನೀಡಿದರು. ಶೃಂಗೇರಿಯ ಜಗದ್ಗುರುಗಳೊಬ್ಬರು ಈ ವಿಶ್ವವಿದ್ಯಾಲಯಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದೆ. ಸರ್ವೋಚ್ಚ ನ್ಯಾಯಾಲಯದ ಭಾರತದ ಅಡಿಷನಲ್ ಸಾಲಿಸಿಟರ್ ಜನರಲ್ ವೆಂಕಟರಮಣನ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sringeri seer in JNU
ಹುಬ್ಬಳ್ಳಿ: ಪಾಲಿಕೊಪ್ಪದಲ್ಲಿ ಶೃಂಗೇರಿ ಜಗದ್ಗುರುಗಳಿಂದ ಶಿವಶಕ್ತಿ ಧಾಮ ಲೋಕಾರ್ಪಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com