Fire breaks out in Mumbai's Dharavi, local train services hit
ಧಾರಾವಿಯಲ್ಲಿ ಅಗ್ನಿ ಅವಘಡ

ಮುಂಬೈನ ಧಾರಾವಿಯಲ್ಲಿ ಅಗ್ನಿ ಅವಘಡ; ಲೋಕಲ್ ರೈಲು ಸೇವೆ ಸ್ಥಗಿತ

ಈ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಗ್ನಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ.
Published on

ಮುಂಬೈ: ಮುಂಬೈನ ಧಾರಾವಿ ಪ್ರದೇಶದ ಹಾರ್ಬರ್ ಲೈನ್ ನ, ಲೋಕಲ್ ರೈಲು ಹಳಿಗಳ ಬಳಿಯ ಗುಡಿಸಲುಗಳಲ್ಲಿ ಶನಿವಾರ ಮಧ್ಯಾಹ್ನ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 12.30ಕ್ಕೆ 60 ಅಡಿ ರಸ್ತೆಯಲ್ಲಿರುವ ನವರಂಗ್ ಕಾಂಪೌಂಡ್ ಒಳಗೆ ಇರುವ ಗುಡಿಸಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಗ್ನಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ.

ಕನಿಷ್ಠ ನಾಲ್ಕು ಅಗ್ನಿಶಾಮಕ ವಾಹನಗಳು ಮತ್ತು ಇತರ ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ ಎಂದು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Fire breaks out in Mumbai's Dharavi, local train services hit
ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಯಿಂದ ಅದಾನಿ ಸಮೂಹಕ್ಕೆ ಅನಗತ್ಯ ಲಾಭವಿಲ್ಲ: ಹೈಕೋರ್ಟ್‌ಗೆ 'ಮಹಾ' ಸರ್ಕಾರ

ಬೆಂಕಿಯು ರೈಲ್ವೆ ಹಳಿಗಳಿಗೆ ಬಹಳ ಹತ್ತಿರದಲ್ಲಿರುವುದರಿಂದ, ಬಂದರು ಮಾರ್ಗದಲ್ಲಿ ಬಾಂದ್ರಾ ಮತ್ತು ಮಾಹಿಮ್ ನಡುವಿನ ಲೋಕಲ್ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

"ಮಹಿಮ್ ಮತ್ತು ಬಾಂದ್ರಾ ನಡುವಿನ ಪೂರ್ವ ಭಾಗದಲ್ಲಿರುವ ಅಪ್ ಹಾರ್ಬರ್ ಲೈನ್‌ನ ಪಕ್ಕದಲ್ಲಿರುವ ಗುಡಿಸಲುಗಳಲ್ಲಿ ಮಧ್ಯಾಹ್ನ 12:15 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಕಾರಣ, ಸುರಕ್ಷತಾ ಕ್ರಮವಾಗಿ ಓವರ್‌ಹೆಡ್ ಉಪಕರಣಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ" ಎಂದು ಪಶ್ಚಿಮ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಹಾರ್ಬರ್ ಲೈನ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com