ಛತ್ತೀಸ್‌ಗಢ: 28 ಮಾವೋವಾದಿಗಳು ಪೊಲೀಸರಿಗೆ ಶರಣು

19 ಮಹಿಳೆಯರು ಸೇರಿದಂತೆ 28 ನಕ್ಸಲರು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಅವರು ಹೇಳಿದ್ದಾರೆ.
28 Maoists including 22 carry Rs 89 lakh bounty surrender in Chhattisgarh
ಸಾಂದರ್ಭಿಕ ಚಿತ್ರ
Updated on

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮಂಗಳವಾರ 28 ಮಾವೋವಾದಿಗಳು ಪೊಲೀಸರು ಶರಣಾಗಿದ್ದಾರೆ. ಅವರಲ್ಲಿ 22 ನಕ್ಸಲರ ತಲೆಗೆ 89 ಲಕ್ಷ ರೂ. ಬಹುಮಾನ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ 'ನಿಯದ್ ನೆಲ್ಲನಾರ್'(ನಿಮ್ಮ ಒಳ್ಳೆಯ ಗ್ರಾಮ) ಯೋಜನೆ, ಹೊಸ ಶರಣಾಗತಿ ಮತ್ತು ಪುನರ್ವಸತಿ ನೀತಿ ಹಾಗೂ "ಪೂನಾ ಮಾರ್ಗಂ(ಸಾಮಾಜಿಕ ಪುನರ್ವಸತಿ)" ದಿಂದ ಪ್ರಭಾವಿತರಾಗಿ 19 ಮಹಿಳೆಯರು ಸೇರಿದಂತೆ 28 ನಕ್ಸಲರು, ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದರು ಎಂದು ಬಸ್ತಾರ್ ರೇಂಜ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಂ ಅವರು ಹೇಳಿದ್ದಾರೆ.

ನಿಯದ್ ನೆಲ್ಲನಾರ್ ಯೋಜನೆಯು ದೂರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದರೆ, ಪೂನಾ ಮಾರ್ಗಂ ಬಸ್ತಾರ್ ರೇಂಜ್ ಪೊಲೀಸರು ಪ್ರಾರಂಭಿಸಿದ ಪುನರ್ವಸತಿ ಉಪಕ್ರಮವಾಗಿದೆ.

28 Maoists including 22 carry Rs 89 lakh bounty surrender in Chhattisgarh
ಛತ್ತೀಸ್‌ಗಢ: ತಲೆಗೆ ಒಟ್ಟು 37 ಲಕ್ಷ ರೂ. ಬಹುಮಾನ ಹೊಂದಿದ್ದ ಏಳು ನಕ್ಸಲರು ಶರಣಾಗತಿ

ಶರಣಾದವರಲ್ಲಿ, ನಾಲ್ಕು ಹಾರ್ಡ್‌ಕೋರ್ ಕೇಡರ್‌ಗಳಾಗಿದ್ದು, ವಿಭಾಗೀಯ ಸಮಿತಿ ಸದಸ್ಯ ಪಾಂಡಿ ಧ್ರುವ್ ಅಲಿಯಾಸ್ ದಿನೇಶ್(33); ದುಲೆ ಮಾಂಡವಿ ಅಲಿಯಾಸ್ ಮುನ್ನಿ(26), ಛತ್ತೀಸ್ ಪೋಯಂ(18) ಮತ್ತು ಪಡ್ನಿ ಓಯಂ(30) ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com