

ಬಿಲಾಸ್ಪುರ: ಮನೆಯೊಳಗೆ ದಂಪತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಆರಂಭದಲ್ಲಿ ಕೌಟುಂಬಿಕ ಕಲಹದಂತೆ ಕಂಡರೂ ಬಳಿಕ ಗೋಡೆಯ ಮೇಲೆ ಲಿಪ್ಸ್ಟಿಕ್ನಲ್ಲಿ ಬರೆದ ಡೆತ್ ನೋಟ್ ತನಿಖೆಯ ದಿಕ್ಕನ್ನೇ ಬದಲಿಸಿದೆ.
ಮೂವತ್ತು ವರ್ಷದ ಶಿವಾನಿ ತಾಂಬೆ ಅಲಿಯಾಸ್ ನೇಹಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರೆ, ಆಕೆಯ ಪತಿ ರಾಜ್ ತಾಂಬೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆದರೆ ಗೋಡೆಗಳ ಮೇಲೆ ಲಿಪ್‌ಸ್ಟಿಕ್‌ನಿಂದ ಬರೆಯಲಾದ ಸಂದೇಶಗಳು ಅವರ ಹತಾಶೆಯನ್ನು ಸೂಚಿಸುತ್ತದೆ. ಆ ಬರಹಗಳಲ್ಲಿ ರಾಜೇಶ್ ವಿಶ್ವಾಸ್ ಎಂಬ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇತ್ತು. ಆತ ದಾಂಪತ್ಯದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾನೆ ಎಂದು ಅದು ಆರೋಪಿಸಲಾಗಿದೆ.
ಒಂದು ಸಾಲಿನಲ್ಲಿ ರಾಜೇಶ್ ವಿಶ್ವಾಸ್‌ನಿಂದಾಗಿ ನಾವು ಸಾಯುತ್ತಿದ್ದೇವೆ ಎಂದು ಬರೆದಿದ್ದರೆ, ಇನ್ನೊಂದು ಸಾಲಿನಲ್ಲಿ ಮಕ್ಕಳೇ, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ಬರೆಯಲಾಗಿತ್ತು. ಹೆಂಡತಿಯ ಫೋನ್ ಕರೆಗಳ ಕುರಿತು ಆಗಾಗ ಜಗಳಗಳು ನಡೆಯುತ್ತಿದ್ದವು ಎಂಬುದು ಸಂದೇಶದಿಂದ ಬಹಿರಂಗಗೊಂಡಿದೆ.
ಈ ದಂಪತಿಗೆ ಮೂವರು ಮಕ್ಕಳು, ಹತ್ತು ವರ್ಷಗಳಿಂದ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಬಿರುಕು ಮೂಡಿತ್ತು. ಈ ದಂಪತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತಿದ್ದರು ಮತ್ತು ಮೂವರು ಚಿಕ್ಕ ಮಕ್ಕಳನ್ನು ಬೆಳೆಸುತ್ತಿದ್ದರು. ಅನುಮಾನದ ವಿಚಾರವಾಗಿ ಪ್ರತಿನಿತ್ಯ ಅವರ ಮಧ್ಯೆ ಜಗಳಗಳಾಗುತ್ತಿದ್ದವು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.
ನವೆಂಬರ್ 24 ರಂದು, ರಾಜ್ ಹಾಗೂ ನೇಹಾ ಮಧ್ಯಾಹ್ನದವರೆಗೆ ಮನೆಯಿಂದ ಹೊರಗೆ ಬಾರದಿದ್ದಾಗ, ನೇಹಾಳ ತಾಯಿ ರೀನಾ ಆತಂಕಗೊಂಡು ಅವರನ್ನು ನೋಡಲು ಮನೆಗೆ ಹೋಗಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೇಗೋ ಬಾಗಿಲು ತೆರೆಯುವಲ್ಲಿ ತೆರೆದಾಗ ಅಲ್ಲಿ ಕಂಡ ದೃಶ್ಯ ಅವರನ್ನು ಆಘಾತಕ್ಕೀಡು ಮಾಡಿತ್ತು. ದಂಪತಿ ಶವವಾಗಿದ್ದರು.
Advertisement