

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತೊರೆಯ ದಡದಲ್ಲಿ ಸೂಟ್‌ಕೇಸ್‌ನಲ್ಲಿ ಯುವತಿಯೊಬ್ಬರ ಶವ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರ ಲಿವ್-ಇನ್ ಪಾರ್ಟನರ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನವೆಂಬರ್ 21 ರಂದು ಇಬ್ಬರ ನಡುವೆ ಜಗಳ ನಡೆದಿದ್ದು, ಆರೋಪಿಯು ಯುವತಿಯನ್ನು ಕೊಂದು ಮರುದಿನ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ತೊರೆಯ ಬಳಿ ಎಸೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೋಮವಾರ ದೇಸಾಯಿ ಗ್ರಾಮದ ಬಳಿಯ ತೊರೆಯ ಸೇತುವೆಯ ಕೆಳಗೆ ಪ್ರಿಯಾಂಕಾ ವಿಶ್ವಕರ್ಮ(22) ಎಂಬ ಯುವತಿಯ ಶವ ಪತ್ತೆಯಾಗಿದೆ.
ಮೃತ ಯುವತಿಯ ಕೈ ಮೇಲೆ 'ಪಿ ವಿ ಎಸ್' ಎಂಬ ಹಚ್ಚೆ ಕಂಡುಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ತೊರೆಯಲ್ಲಿ ಶವವನ್ನು ಎಸೆಯಲು ಸೂಟ್‌ಕೇಸ್‌ನಲ್ಲಿ ತುಂಬಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾಮಾಜಿಕ ಮಾಧ್ಯಮ ಮತ್ತು ಪ್ರದೇಶದ ಸಿಸಿಟಿವಿ ದೃಶ್ಯಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ದೇಸಾಯಿ ಗ್ರಾಮದ ವಿನೋದ್ ಶ್ರೀನಿವಾಸ್ ವಿಶ್ವಕರ್ಮ(50) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತ ಯುವತಿ ಕಳೆದ ಐದು ವರ್ಷಗಳಿಂದ ಆರೋಪಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದ್ದು, ನವೆಂಬರ್ 21 ರ ರಾತ್ರಿ ಅವರ ನಡುವೆ ಜಗಳವಾಗಿದೆ. ನಂತರ ಆರೋಪಿಯು ಆಕೆಯ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಒಂದು ದಿನ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದು, ಅದು ದುರ್ವಾಸನೆ ಹರಡುತ್ತಿದ್ದಂತೆ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ, ನವೆಂಬರ್ 22 ರ ರಾತ್ರಿ ತೊರೆಯ ಬಳಿ ಕಾಲ್ನಡಿಗೆಯಲ್ಲಿ ತೆಗೆದುಕೊಂಡು ಹೋಗಿ ಸೇತುವೆಯಿಂದ ಎಸೆದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement