
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನನ್ನು ಹಾಡಿ ಹೊಗಳಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದೆ. ಭಾರತೀಯ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಘೋಷಣೆ, ದೊಡ್ಡ ನಿಲುವು, ಬಡಾಯಿ ಮತ್ತು ಉಪನ್ಯಾಸದ ಸಮಯ ಮುಗಿದಿದೆ" ಎಂದು ಕಿಡಿಕಾರಿದೆ.
"ಸ್ವಯಂ ಘೋಷಿತ ವಿಶ್ವಗುರು ಮತ್ತು ಅವರ ಚೇಲಾಗಳ ತಂಡವು ಜಗತ್ತಿನೆದುರು ಕ್ರೂರವಾಗಿ ಬಟಾ ಬಯಲಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಟ್ರಂಪ್ ಹೊಗಳಿಕೆಯ ಭಾಷಣವನ್ನು ಹಂಚಿಕೊಂಡಿರುವ ರಮೇಶ್, "ಭಾರತೀಯ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಘೋಷಣೆ, ದೊಡ್ಡ ನಿಲುವು, ಬಡಾಯಿ ಮತ್ತು ಉಪನ್ಯಾಸಗಳ ಸಮಯವು ಮುಗಿದಿದೆ. ಅಮೆರಿಕ ಮಾತ್ರವಲ್ಲದೇ ಇತರ ಅನೇಕ ರಾಷ್ಟ್ರಗಳೊಂದಿಗೆ ಸವಾಲಿನ ಪರಿಸ್ಥಿತಿ ಇದೆ ಎಂದು ಬರೆದುಕೊಂಡಿದ್ದಾರೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಚೋದನಾಕಾರಿ ಹೇಳಿಕೆ ನೀಡಿದವರೇ ಟ್ರಂಪ್ ಅವರಿಗೆ ಆಕಷರ್ಣೀಯವಾಗಿದ್ದಾರೆ. ಅಮೆರಿಕ ಅಧ್ಯಕ್ಷರು ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಶ್ವೇತಭವನದಲ್ಲಿ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿ ಜೀವ ಉಳಿಸಿದ್ದಕ್ಕಾಗಿ ನನ್ನನ್ನು ಫೀಲ್ಡ್ ಮಾರ್ಷಲ್ ಹೊಗಳಿದ ರೀತಿ ತುಂಬಾ ಇಷ್ಟವಾಯಿತು ಎಂದು ಟ್ರಂಪ್ ಹೇಳಿದ್ದಾರೆ.
ಫೀಲ್ಡ್ ಮಾರ್ಷಲ್ ಅವರ ಸಮರ್ಪಣೆಯನ್ನು 'ಅತ್ಯಂತ ಸುಂದರವಾದ ವಿಷಯ' ಎಂದು ತಮ್ಮ ಪ್ರಮುಖ ಆಡಳಿತದ ಮುಖ್ಯಸ್ಥರು ವಿವರಿಸಿದ್ದಾರೆ ಎಂದು ಟ್ರಂಪ್ ಹೇಳಿರುವುದಾಗಿ ಜೈರಾಮ್ ರಮೇಶ್ ತಿಳಿಸಿದ್ದಾರೆ
Advertisement