Allahabad high court: ಮತ್ತೊಂದು ಮಹತ್ವದ ಆದೇಶ ಪ್ರಕಟ, 43 ವರ್ಷಗಳ ಹಿಂದೆ ಪತ್ನಿಯನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆ! ಏನಿದು ಪ್ರಕರಣ?

ಆರೋಪಿಗಳನ್ನು ಖುಲಾಸೆಗೊಳಿಸುವ ವಿಚಾರಣಾ ನ್ಯಾಯಾಲಯದ 1984ರ ತೀರ್ಪನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ರಾಜೀವ್ ಗುಪ್ತಾ ಮತ್ತು ಹರ್ವಿರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತು.
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ತನ್ನ ವಿಭಿನ್ನ ಆದೇಶಗಳ ಮೂಲಕ ದೇಶದಲ್ಲಿ ಗಮನ ಸೆಳೆದಿರುವ ಅಲಹಾಬಾದ್ ಹೈಕೋರ್ಟ್ ಮತ್ತೊಂದು ಮಹತ್ವದ ತೀರ್ಪು ತೀರ್ಪು ಪ್ರಕಟಿಸಿದೆ. 1982 ರಲ್ಲಿ ತನ್ನ ಹೆಂಡತಿಯನ್ನು ಕೊಂದಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದ್ದ 43 ವರ್ಷಗಳ ಹಿಂದಿನ ಪ್ರಕರಣ ಇದಾಗಿದೆ. ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಪ್ರಮುಖ ಆರೋಪಿ ಅವಧೇಶ್ ಕುಮಾರ್ ಮತ್ತು ಸಹ ಆರೋಪಿ ಕುಸುಮಾ ದೇವಿ ಹತ್ಯೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಎರಡು ವಾರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಶರಣಾಗುವಂತೆ ಅಪರಾಧಿಗಳಿಗೆ ನಿರ್ದೇಶನ ನೀಡಿದೆ.

ಆರೋಪಿಗಳನ್ನು ಖುಲಾಸೆಗೊಳಿಸುವ ವಿಚಾರಣಾ ನ್ಯಾಯಾಲಯದ 1984ರ ತೀರ್ಪನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ರಾಜೀವ್ ಗುಪ್ತಾ ಮತ್ತು ಹರ್ವಿರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತು. ಪ್ರಕರಣದ ಇತರ ಇಬ್ಬರು ಆರೋಪಿಗಳು ತಮ್ಮ ಖುಲಾಸೆ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.

ಕುರುಡು ನಂಬಿಕೆಯ ಶ್ರೇಷ್ಠ ಪ್ರಕರಣ: ಪ್ರಾಸಿಕ್ಯೂಷನ್ ಪ್ರಕಾರ, ತನ್ನ ಕಿರಿಯ ಸಹೋದರನ ಹೆಂಡತಿಯೊಂದಿಗೆ ಗಂಡನ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಸಂತ್ರಸ್ತೆಯನ್ನು ಆಕೆಯ ಪತಿ ಮತ್ತು ಇತರ ಮೂವರು ಸೇರಿ ಹತ್ಯೆಗೈದಿದ್ದರು. ಆಗಸ್ಟ್ 6, 1982 ರಂದು ಈ ಘಟನೆ ನಡೆದಿತ್ತು. ದುಷ್ಟಶಕ್ತಿಯನ್ನು ಓಡಿಸುವ' ನೆಪದಲ್ಲಿ ಆರೋಪಿಗಳು ಸಂತ್ರಸ್ತೆಗೆ ಥಳಿಸಿದ್ದರು ಎಂದು ಸಾಕ್ಷಿದಾರರು ಹೇಳಿದ್ದರು. ಅದೇ ರಾತ್ರಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಸೆಪ್ಟೆಂಬರ್ 25 ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಇದನ್ನು ಕುರುಡು ನಂಬಿಕೆಯ ಶ್ರೇಷ್ಠ ಪ್ರಕರಣ ಎಂದು ಕರೆದಿದೆ.

ದೂರದ ಪ್ರದೇಶಗಳಲ್ಲಿ ಇಂದಿಗೂ ನಡೆಯುತ್ತಿರುವ ಕುರುಡು ನಂಬಿಕೆ ಮತ್ತು ನಮ್ಮ ಕಾಲದ ದುರದೃಷ್ಟಕರ ನೈಜ ಪ್ರಕರಣವಾಗಿದೆ. ಮೂಢನಂಬಿಕೆ ಮತ್ತು ನಂಬಿಕೆಯ ಆಧಾರದ ಮೇಲೆ, ದೇವರುಗಳನ್ನು ಸಮಾಧಾನಪಡಿಸಲು ನಡೆಯುವ ಇಂತಹ ಪ್ರಕರಣಗಲು ನಮ್ಮ ಅಭಿಪ್ರಾಯದಲ್ಲಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ ಮತ್ತು ಅಂತಹ ಸಾಮಾಜಿಕ ಅನಿಷ್ಟಗಳನ್ನು ತಡೆಯಲು ಎಲ್ಲರೂ ಖಂಡಿಸಬೇಕು ಎಂದು ಪೀಠ ಹೇಳಿದೆ.

ಆತುರದ ರೀತಿಯಲ್ಲಿ ಮೃತದೇಹ ಸುಟ್ಟುಹಾಕುವುದು ಅಸಹಜ ನಡವಳಿಕೆ:

ಸಂತ್ರಸ್ತೆಯ ಮರಣದ ನಂತರ ಅಪರಾಧಿಗಳು ಪೊಲೀಸರು ಮತ್ತು ಆಕೆಯ ಸಂಬಂಧಿಕರಿಗೆ ಸಹ ತಿಳಿಸದೆ ಆಕೆಯ ದೇಹವನ್ನು ಸುಟ್ಟು ಹಾಕಿದ್ದರು. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ದೇಹವನ್ನು ಆತುರ ಮತ್ತು ಆತುರದ ರೀತಿಯಲ್ಲಿ ಸುಟ್ಟುಹಾಕುವುದು ಅಸಹಜ ನಡವಳಿಕೆ ಮತ್ತು ತಪಿತಸ್ಥರು ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Casual Images
ಒಮ್ಮೆ ಮದುವೆ ಅನೂರ್ಜಿತವಾದರೆ ಪತಿ ಜೀವನಾಂಶ ಕೊಡುವ ಕಾನೂನು ಬಾಧ್ಯತೆ ಇರಲ್ಲ: ಅಲಹಾಬಾದ್ ಹೈಕೋರ್ಟ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com