ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

ಆತ್ಮಹತ್ಯೆಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ (38.5%), ನಂತರ ಕರ್ನಾಟಕ (22.5%), ಆಂಧ್ರಪ್ರದೇಶ (8.6%), ಮಧ್ಯಪ್ರದೇಶ (7.2%) ಮತ್ತು ತಮಿಳುನಾಡು (5.9%) ಪ್ರದೇಶಗಳವರು.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಇತ್ತೀಚಿನ ವರದಿಯ ಪ್ರಕಾರ, 2023 ರಲ್ಲಿ, ದೇಶದಲ್ಲಿ ಪ್ರತಿ ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೃಷಿಯಲ್ಲಿ ತೊಡಗಿರುವವರು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಇದು ಎತ್ತಿ ತೋರಿಸುತ್ತದೆ.

ಆತ್ಮಹತ್ಯೆಗೆ ಬಲಿಯಾದವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ (38.5%), ನಂತರ ಕರ್ನಾಟಕ (22.5%), ಆಂಧ್ರಪ್ರದೇಶ (8.6%), ಮಧ್ಯಪ್ರದೇಶ (7.2%) ಮತ್ತು ತಮಿಳುನಾಡು (5.9%) ಪ್ರದೇಶಗಳವರು, ಒಂದು ಕಾಲದಲ್ಲಿ ಶ್ರೀಮಂತ ಕೃಷಿ ಪರಂಪರೆಯನ್ನು ಹೊಂದಿದ್ದ ಈ ರಾಜ್ಯಗಳ ರೈತರು ಇಂದು ತೀವ್ರ ಆರ್ಥಿಕ ಒತ್ತಡ, ಹತಾಶೆ, ನೋವಿನಿಂದ ಬಳಲುತ್ತಿದ್ದಾರೆ.

ಹಿಂದಿನ ವರ್ಷ, 2022 ಕ್ಕೆ ಹೋಲಿಸಿದರೆ ಆತ್ಮಹತ್ಯೆಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಆದರೆ ತೀವ್ರತೆ ಮಾತ್ರ ಹಾಗೆಯೇ ಇದೆ.

2023 ರಲ್ಲಿ, ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ 10,786 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ದೇಶದಲ್ಲಿ ಒಟ್ಟು ಆತ್ಮಹತ್ಯೆ ಮಾಡಿಕೊಂಡ ಜನರಲ್ಲಿ (171,418) 6.3% ರಷ್ಟಿದೆ. ಒಟ್ಟು ಆತ್ಮಹತ್ಯೆಗಳಲ್ಲಿ 43 ಶೇಕಡಾ ರೈತರು, ಉಳಿದವರು ಕೃಷಿ ಕಾರ್ಮಿಕರು ಎಂದು ಅಂಕಿಅಂಶ ತೋರಿಸುತ್ತದೆ. ಒಟ್ಟು 4,690 ರೈತರು ಮತ್ತು 6,096 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಟ್ಟು ರೈತರಲ್ಲಿ 4,553 ಪುರುಷರು ಮತ್ತು 137 ಮಹಿಳೆಯರಾಗಿದ್ದಾರೆ.

ಆದರೆ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಚಂಡೀಗಢ , ದೆಹಲಿ ಮತ್ತು ಲಕ್ಷದ್ವೀಪಗಳಲ್ಲಿ ಈ ವರ್ಷಗಳಲ್ಲಿ ರೈತರ ಆತ್ಮಹತ್ಯೆಗಳು ವರದಿಯಾಗಿಲ್ಲ.


2022 ರಲ್ಲಿ ಉತ್ತರಾಖಂಡ್‌ನಲ್ಲಿ ಯಾವುದೇ ಆತ್ಮಹತ್ಯೆಗಳು ವರದಿಯಾಗಿಲ್ಲ, ಈ ವರ್ಷ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದಲ್ಲಿ ಯಾವುದೇ ಆತ್ಮಹತ್ಯೆ ವರದಿಯಾಗಿಲ್ಲ, ಕಳೆದ ವರ್ಷ ಈ ರಾಜ್ಯಗಳಲ್ಲಿ ವರದಿಯಾಗಿದೆ.

2022 ರಲ್ಲಿ, ರೈತರ ಆತ್ಮಹತ್ಯೆಗಳ ಸಂಖ್ಯೆ ತುಲನಾತ್ಮಕವಾಗಿ ಹೆಚ್ಚಿತ್ತು. 2022 ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಒಟ್ಟು 11,290 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 5,207 ರೈತರು ಮತ್ತು 6,083 ಕೃಷಿ ಕಾರ್ಮಿಕರು ಸೇರಿದ್ದಾರೆ. ಒಟ್ಟು 5,207 ರೈತರ ಆತ್ಮಹತ್ಯೆಗಳಲ್ಲಿ, 4,999 ಪುರುಷರು ಮತ್ತು 208 ಮಹಿಳೆಯರಾಗಿದ್ದಾರೆ. ಅದೇ ರೀತಿ, 2022 ರಲ್ಲಿ ಕೃಷಿ ಕಾರ್ಮಿಕರು 6,083 ಆತ್ಮಹತ್ಯೆಗಳಲ್ಲಿ, 5,472 ಪುರುಷರು ಮತ್ತು 611 ಮಹಿಳೆಯರಾಗಿದ್ದಾರೆ.

2023 ರಲ್ಲಿ ದೇಶದಲ್ಲಿ ಒಟ್ಟು 1,71,418 ಆತ್ಮಹತ್ಯೆಗಳು ನಡೆದಿವೆ ಎಂದು ಎನ್‌ಸಿಆರ್‌ಬಿ ವರದಿ ಮಾಡಿದೆ. ಇದು 2022 ಕ್ಕೆ ಹೋಲಿಸಿದರೆ ಶೇ. 0.3 ರಷ್ಟು ಹೆಚ್ಚಳವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com