
ಯುನೈಟೆಡ್ ಕಿಂಗ್ ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಬುಧವಾರ ಮುಂಬೈಗೆ ಬಂದಿಳಿದಿದ್ದು, 2024 ರಲ್ಲಿ ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಭಾರತ ಭೇಟಿ ಇದಾಗಿದೆ.
ಅವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ಬರಮಾಡಿಕೊಂಡರು.
ಸ್ಟಾರ್ಮರ್ ನಾಳೆ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ಜುಲೈನಲ್ಲಿ ಭಾರತ ಮತ್ತು ಯುಕೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಭೇಟಿ ಮಾತುಕತೆ ನಡೆಯುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕಗಳ ಹಿನ್ನೆಲೆಯಲ್ಲಿ ಬ್ರಿಟಿಷ್ ಪ್ರಧಾನಿಯವರ ಭಾರತ ಭೇಟಿಯೂ ನಡೆಯುತ್ತಿದೆ. ನಾಳೆ ಬೆಳಗ್ಗೆ ರಾಜಭವನದಲ್ಲಿ ಉಭಯ ನಾಯಕರು ಭೇಟಿಯಾಗುವ ನಿರೀಕ್ಷೆಯಿದ್ದು, ಅಲ್ಲಿ ಭಾರತ-ಯುಕೆ ಕಾರ್ಯತಂತ್ರದ ಸಂಬಂಧದ ಪ್ರಗತಿಯ ಕುರಿತು ಜಂಟಿ ಪ್ರಕಟಣೆಯನ್ನು ನೀಡಲಿದ್ದಾರೆ.
ಇದಲ್ಲದೆ, ಜಾಗತಿಕ ಫಿನ್‌ಟೆಕ್ ಉತ್ಸವಕ್ಕಾಗಿ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ಗೆ ತೆರಳುವ ಮೊದಲು ಕೆಲವು ಪ್ರಮುಖ ಉದ್ಯಮ ನಾಯಕರನ್ನು ಭೇಟಿಯಾಗಲಿದ್ದಾರೆ.
ಭಾರತಕ್ಕೆ ಆಗಮಿಸುವ ಮುನ್ನ ತಮ್ಮ ಹೇಳಿಕೆಗಳಲ್ಲಿ, ಯುಕೆ ಪ್ರಧಾನಿ, ಕಳೆದ ಜುಲೈನಲ್ಲಿ ಭಾರತದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. 2028 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅವರೊಂದಿಗೆ ವ್ಯಾಪಾರವು ವೇಗವಾಗಿ ಮತ್ತು ಅಗ್ಗವಾಗಲಿದ್ದು, ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದಿದ್ದಾರೆ.
Advertisement