ಉ. ಪ್ರದೇಶ: ಆಗ್ರಾ ನದಿಯಲ್ಲಿ ದಸರಾ ವಿಗ್ರಹ ವಿಸರ್ಜನೆ ವೇಳೆ ಮುಳುಗಿ ಸಾವು: 12 ಮಂದಿ ಮೃತದೇಹ ಪತ್ತೆ

ಅಕ್ಟೋಬರ್ 2 ರಂದು ಖೈರಾಗರ್ ಪ್ರದೇಶದಲ್ಲಿ 13 ಯುವಕರು ದುರ್ಗಾಮಾತೆ ವಿಗ್ರಹವನ್ನು ವಿಸರ್ಜಿಸಲು ಹೋದಾಗ ಈ ದುರಂತ ಸಂಭವಿಸಿತ್ತು.
Rescue operations at Kheragarh during Durga Puja immersion, in Agra, Uttar Pradesh
ಕಾರ್ಯಾಚರಣೆ
Updated on

ದಸರಾ ಹಬ್ಬದ ಸಮಯದಲ್ಲಿ ಉತ್ತರ ಪ್ರದೇಶದ ಉತಂಗನ್ ನದಿಯಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಮುಳುಗಿ ಮೃತಪಟ್ಟಿದ್ದ ಎಲ್ಲಾ 12 ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು, ಐದು ದಿನಗಳ ಬೃಹತ್ ರಕ್ಷಣಾ ಕಾರ್ಯಾಚರಣೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಕ್ಟೋಬರ್ 2 ರಂದು ಖೈರಾಗರ್ ಪ್ರದೇಶದಲ್ಲಿ 13 ಯುವಕರು ದುರ್ಗಾಮಾತೆ ವಿಗ್ರಹವನ್ನು ವಿಸರ್ಜಿಸಲು ಹೋದಾಗ ಈ ದುರಂತ ಸಂಭವಿಸಿತ್ತು. ಅವರಲ್ಲಿ ಒಬ್ಬರಾದ ವಿಷ್ಣು ಎಂದು ಗುರುತಿಸಲ್ಪಟ್ಟವರನ್ನು ತಕ್ಷಣವೇ ರಕ್ಷಿಸಲಾಗಿ, ಉಳಿದ 12 ಮಂದಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು.

ಸತತ 124 ಗಂಟೆಗಳ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸೇನೆ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC), ಸ್ಥಳೀಯ ಪೊಲೀಸರು ಮತ್ತು ಡೈವರ್‌ಗಳು ಭಾಗವಹಿಸಿದ್ದರು ಎಂದು ಆಗ್ರಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Rescue operations at Kheragarh during Durga Puja immersion, in Agra, Uttar Pradesh
ಆಗ್ರಾ: ದುರ್ಗಾ ಮೂರ್ತಿ ವಿಸರ್ಜನೆ ವೇಳೆ 17 ಯುವಕರು ನೀರು ಪಾಲು

ಶವಗಳು ನದಿಯ ಮಧ್ಯದಲ್ಲಿರುವ ಆಳವಾದ ಹೊಂಡಗಳು ಮತ್ತು ಕುಳಿಗಳಲ್ಲಿ ಸಿಲುಕಿಕೊಂಡಿದ್ದರಿಂದ ಕಾರ್ಯಾಚರಣೆ ಕಷ್ಟಕರವಾಗಿತ್ತು. ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ನದಿಯ ಹರಿವಿನ ತಾತ್ಕಾಲಿಕ ತಿರುವು ವ್ಯವಸ್ಥೆ ಮಾಡಲಾಗಿತ್ತು ಎಂದು ದೀಪಕ್ ಕುಮಾರ್ ತಿಳಿಸಿದ್ದಾರೆ.

ಮೃತರನ್ನು ಸಚಿನ್ (14), ದೀಪಕ್ (15), ಮನೋಜ್ (15), ಅಭಿಷೇಕ್ (16), ವಿನೇಶ್ (19), ಓಕೆ (19), ಗಜೇಂದ್ರ (20), ಕರಣ್ (21), ಹರೇಶ್ (22), ಭಗವತಿ (23), ಗಗನ್ (25), ಮತ್ತು ಓಂಪಾಲ್ (35) ಎಂದು ಗುರುತಿಸಲಾಗಿದೆ.

ಯುವಕರು ವಿಗ್ರಹವನ್ನು ಆಳವಿಲ್ಲದ ನೀರಿನಲ್ಲಿ ಇರಿಸಿ ನದಿಯೊಳಗೆ ಮತ್ತಷ್ಟು ದೂರ ಹೋಗಿದ್ದರಿಂದ ದುರಂತ ಸಂಭವಿಸಿತ್ತು.

ಅವರಲ್ಲಿ ಒಬ್ಬರು ಅಕ್ರಮ ಮರಳು ಗಣಿಗಾರಿಕೆಯಿಂದ ರೂಪುಗೊಂಡ 25 ಅಡಿ ಆಳದ ಗುಂಡಿಗೆ ಜಾರಿದಾಗ ರಕ್ಷಿಸಲು ಇತರರು ಹೋದಾಗ ಅವರು ಕೂಡ ಸಿಕ್ಕಿಹಾಕಿಕೊಂಡರು. ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com