
ಮುಂಬೈ: 2028 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಪ್ರತಿಪಾದಿಸಿದ್ದಾರೆ. ಈ ಮೂಲಕ ಭಾರತದ ಆರ್ಥಿಕತೆ "ಸತ್ತಿದೆ" ಎಂಬ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್, ಭಾರತದ ಆರ್ಥಿಕ ಬೆಳವಣಿಗೆ ಗಮನಾರ್ಹವಾಗಿದೆ. ದೇಶವು ಇತ್ತೀಚೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಬ್ರಿಟನ್ ಪ್ರಧಾನಿ, ದೇಶವು ಭಾರತದ ಬೆಳವಣಿಗೆಯ ಪಯಣದಲ್ಲಿ ಪಾಲುದಾರರಾಗಲು ಬಯಸುತ್ತದೆ ಎಂದು ದೃಢಪಡಿಸಿದರು.
ಹಿಂದಿಯಲ್ಲಿ ಭಾಷಣ ಆರಂಭಿಸಿದ ಯುಕೆ ಪಿಎಂ: ಹಿಂದಿಯಲ್ಲಿ ನಮಸ್ಕಾರ್ ದೋಸ್ತಾನ್ ("Namaskar doston) ಎಂಜದು ಭಾಷಣ ಆರಂಭಿಸಿದ ಕೀರ್ ಸ್ಟಾರ್ಮರ್, 2028 ರ ವೇಳೆಗೆ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. 2047ರೊಳಗೆ ನಿಮ್ಮ ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲಿ ಎಂದು ಅವರು ಹೇಳಿದರು.
"ನಾನು ಇಲ್ಲಿಗೆ ಬಂದಾಗಿನಿಂದ ನೋಡಿದ ಪ್ರತಿಯೊಂದೂ ನನಗೆ ಸಂಪೂರ್ಣ ಪುರಾವೆಯಾಗಿದೆ. ನೀವು ಅದರಲ್ಲಿ ಯಶಸ್ವಿಯಾಗುವ ಹಾದಿಯಲ್ಲಿದ್ದೀರಿ. ನಿಮ್ಮ ಆ ಪ್ರಯಾಣದಲ್ಲಿ ಪಾಲುದಾರರಾಗಲು ಬಯಸುತ್ತೇವೆ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಸತ್ತಿದೆ ಎಂದು ಟೀಕಿಸಿದ್ದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಸ್ಥಾನ: ಕೀರ್ ಸ್ಟಾರ್ಮರ್ ಬೆಂಬಲ
ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಲು ಜುಲೈನಲ್ಲಿ ಪಿಎಂ ಮೋದಿ ಯುಕೆಗೆ ಭೇಟಿ ನೀಡಿದ ಕೆಲ ತಿಂಗಳ ನಂತರ ಇದೀಗ ಸ್ಟಾರ್ಮರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಭಾರತದ ಪ್ರಯತ್ನವನ್ನು ಅವರು ಬೆಂಬಲಿಸಿದ್ದಾರೆ. ಇದು ಭಾರತದ ದೀರ್ಘಕಾಲದ ಬೇಡಿಕೆಯಾಗಿದೆ. ನಾವು ಕಾಮನ್‌ವೆಲ್ತ್, ಜಿ 20 ನಲ್ಲಿ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಯುಎನ್ ಭದ್ರತಾ ಮಂಡಳಿಯಲ್ಲಿ ಭಾರತ ತನ್ನ ಸರಿಯಾದ ಸ್ಥಾನವನ್ನು ಪಡೆಯುವುದನ್ನು ನಾವು ನೋಡಲು ಬಯಸುತ್ತೇವೆ" ಎಂದು ಸ್ಟಾರ್ಮರ್ ಹೇಳಿದರು.
Advertisement