
ವಿಶ್ವದ ಮೊದಲ ಸಸ್ಯಾಹಾರಿ ಬಾಡಿಬಿಲ್ಡರ್ ಎಂದು ಖ್ಯಾತಿ ಪಡೆದಿದ್ದ ಪಂಜಾಬಿ ನಟ ವರೀಂದರ್ ಸಿಂಗ್ ಘುಮಾನ್ ಅಮೃತಸರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತೋಳಿನ ನೋವಿಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅವರು ಅಮೃತಸರದ ಆಸ್ಪತ್ರೆಗೆ ದಾಖಲಾಗಿದ್ದರು. ಘುಮಾನ್ ಹೃದಯಾಘಾತದಿಂದ ನಿಧನರಾದರು. ವರದಿಗಳ ಪ್ರಕಾರ ಅವರಿಗೆ 42 ವರ್ಷ ವಯಸ್ಸಾಗಿತ್ತು.
ಘುಮನ್, ದೇಹದಾರ್ಢ್ಯ ಮತ್ತು ಮನರಂಜನಾ ಕ್ಷೇತ್ರದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರು. ಅವರ ಸಾವು ಅನೇಕರಿಗೆ ಆಘಾತವನ್ನುಂಟು ಮಾಡಿದೆ. ಘುಮನ್ ವಿಶ್ವದ ಮೊದಲ ಸಸ್ಯಾಹಾರಿ ವೃತ್ತಿಪರ ಬಾಡಿಬಿಲ್ಡರ್ ಎಂದು ತಿಳಿದುಬಂದಿದೆ. ಅವರು 2009 ರಲ್ಲಿ ಮಿಸ್ಟರ್ ಇಂಡಿಯಾ ಸ್ಪರ್ಧೆಯನ್ನು ಗೆದ್ದರು ಮತ್ತು ಮಿಸ್ಟರ್ ಏಷ್ಯಾದಲ್ಲಿ ರನ್ನರ್ ಅಪ್ ಆಗಿದ್ದರು. ಭಾರತೀಯ ಬಾಡಿಬಿಲ್ಡಿಂಗ್‌ನಲ್ಲಿ ಉನ್ನತ ಹೆಸರು ಗಳಿಸಿದ್ದರು. 6 ಅಡಿ 2 ಇಂಚು ಎತ್ತರವಿದ್ದ ಘುಮಾನ್ 2009 ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು ಮತ್ತು ಮಿಸ್ಟರ್ ಏಷ್ಯಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು.
ದೇಹದಾರ್ಢ್ಯದ ಜತೆಗೆ, ಘುಮನ್ ಚಲನಚಿತ್ರೋದ್ಯಮದಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು. 2012 ರಲ್ಲಿ ಪಂಜಾಬಿ ಚಿತ್ರ 'ಕಬಡ್ಡಿ ಒನ್ಸ್ ಅಗೇನ್' ನಲ್ಲಿ ನಾಯಕ ನಟನಾಗಿ ನಟಿಸಿದರು ಮತ್ತು 2014 ರಲ್ಲಿ 'ರೋರ್: ಟೈಗರ್ಸ್ ಆಫ್ ದಿ ಸುಂದರ್ಬನ್ಸ್' ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 2019 ರಲ್ಲಿ 'ಮರ್ಜಾವಾನ್' ಸೇರಿದಂತೆ ಹಿಂದಿ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುವುದನ್ನು ಮುಂದುವರೆಸಿದರು.
Advertisement