ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಸಚಿವ ಅಮೀರ್ ಖಾನ್ ಮುತಾಕಿ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸದ ಸಮಯದಲ್ಲಿ ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
External Affairs Minister S Jaishankar during a meeting with his Afghani counterpart Amir Khan Muttaqi in New Delhi
ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಮುತ್ತಕಿ- ಎಸ್ ಜೈಶಂಕರ್ ಭೇಟಿonline desk
Updated on

ನವದೆಹಲಿ: ಅಫ್ಘಾನಿಸ್ತಾನದ ವಿದೇಶಾಂಗ ಸಚಿವರ ಭಾರತ ಭೇಟಿಯಲ್ಲಿ ಜಾಗತಿಕ ಸಮುದಾಯಕ್ಕೆ ಪ್ರಾದೇಶಿಕ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಸಂದೇಶಗಳು ರವಾನೆಯಾಗಿವೆ.

ಸಚಿವ ಅಮೀರ್ ಖಾನ್ ಮುತಾಕಿ ಭಾರತಕ್ಕೆ ತಮ್ಮ ಮೊದಲ ಅಧಿಕೃತ ಪ್ರವಾಸದ ಸಮಯದಲ್ಲಿ ನೇರವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯೊಂದಿಗೆ ರಾಜತಾಂತ್ರಿಕ ಮತ್ತು ಅಭಿವೃದ್ಧಿ ಸಂಬಂಧಗಳನ್ನು ಬಲಪಡಿಸಲು ಕಾಬೂಲ್ ಸಿದ್ಧತೆಯನ್ನು ಇದೇ ವೇಳೆ ಸೂಚಿಸಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ಮುತಾಕಿ, ಅಫ್ಘಾನಿಸ್ತಾನದೊಂದಿಗೆ ಇಸ್ಲಾಮಾಬಾದ್ ಗಡಿಯಾಚೆಗಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. "ಆಟವಾಡುವುದನ್ನು ನಿಲ್ಲಿಸಿ" ಎಂದು ಎಚ್ಚರಿಕೆ ನೀಡಿದ್ದಾರೆ. "ಪಾಕಿಸ್ತಾನ ಅಫ್ಘಾನಿಸ್ತಾನದೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು. ಅಫ್ಘಾನಿಸ್ತಾನವನ್ನು ಹೆಚ್ಚು ಪ್ರಚೋದಿಸಬೇಡಿ - ನೀವು ಹಾಗೆ ಮಾಡಿದರೆ, ಬ್ರಿಟಿಷರನ್ನು ಒಮ್ಮೆ ಕೇಳಿ; ನೀವು ಅಮೆರಿಕನ್ನರನ್ನು ಕೇಳಿದರೆ, ಅವರು ಬಹುಶಃ ಅಫ್ಘಾನಿಸ್ತಾನದೊಂದಿಗೆ ಅಂತಹ ಆಟಗಳನ್ನು ಆಡುವುದು ಒಳ್ಳೆಯದಲ್ಲ ಎಂದು ವಿವರಿಸುತ್ತಾರೆ. ನಮಗೆ ರಾಜತಾಂತ್ರಿಕ ಮಾರ್ಗ ಬೇಕು" ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ಮುತಾಕಿ, ಅಫ್ಘಾನಿಸ್ತಾನದೊಂದಿಗೆ ಇಸ್ಲಾಮಾಬಾದ್ ಗಡಿಯಾಚೆಗಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. "ಆಟವಾಡುವುದನ್ನು ನಿಲ್ಲಿಸಿ" ಎಂದು ಎಚ್ಚರಿಕೆ ನೀಡಿದ್ದಾರೆ. "ಪಾಕಿಸ್ತಾನ ಅಫ್ಘಾನಿಸ್ತಾನದೊಂದಿಗೆ ಆಟವಾಡುವುದನ್ನು ನಿಲ್ಲಿಸಬೇಕು. ಅಫ್ಘಾನಿಸ್ತಾನವನ್ನು ಹೆಚ್ಚು ಪ್ರಚೋದಿಸಬೇಡಿ - ನೀವು ಹಾಗೆ ಮಾಡಿದರೆ, ಬ್ರಿಟಿಷರನ್ನು ಒಮ್ಮೆ ಕೇಳಿ; ನೀವು ಅಮೆರಿಕನ್ನರನ್ನು ಕೇಳಿದರೆ, ಅವರು ಬಹುಶಃ ಅಫ್ಘಾನಿಸ್ತಾನದೊಂದಿಗೆ ಅಂತಹ ಆಟಗಳನ್ನು ಆಡುವುದು ಒಳ್ಳೆಯದಲ್ಲ ಎಂದು ವಿವರಿಸುತ್ತಾರೆ. ನಮಗೆ ರಾಜತಾಂತ್ರಿಕ ಮಾರ್ಗ ಬೇಕು" ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಅಫ್ಘಾನ್ ಪ್ರದೇಶದ ಮೇಲೆ ಇತ್ತೀಚಿನ ಪಾಕಿಸ್ತಾನಿ ವಾಯುದಾಳಿಗಳು ಸೇರಿದಂತೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಹಗೆತನದ ಮಧ್ಯೆ ಈ ಹೇಳಿಕೆಗಳು ಬಂದಿರುವುದು ಮಹತ್ವ ಪಡೆದುಕೊಂಡಿದೆ. ಗುರುವಾರ, ಕಾಬೂಲ್‌ನ ಅಬ್ದುಲ್ ಹಕ್ ಚೌಕದಲ್ಲಿ ಸ್ಫೋಟ ವರದಿಯಾಗಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರಂಭದಲ್ಲಿ ಇದನ್ನು ಅಪಘಾತ ಎಂದು ಬಣ್ಣಿಸಿದರೆ, ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ನಂತರ ನಂತರ ರಕ್ಷಣಾ ಸಚಿವಾಲಯ, ಈ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದೆ. ಜೊತೆಗೆ ಪಕ್ತಿಕಾ ಪ್ರಾಂತ್ಯದಲ್ಲಿ ಮತ್ತೊಂದು ದಾಳಿಯನ್ನು ನಡೆಸಿದ್ದು ಇಸ್ಲಾಮಾಬಾದ್ ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತ್ತು.

"ಆಫ್ಘನ್ನರ ಧೈರ್ಯವನ್ನು ಪರೀಕ್ಷಿಸಬಾರದು. ಯಾರಾದರೂ ಇದನ್ನು ಮಾಡಲು ಬಯಸಿದರೆ, ಅವರು ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋವನ್ನು ಕೇಳಬೇಕು. ಅಫ್ಘಾನಿಸ್ತಾನದೊಂದಿಗೆ ಆಟವಾಡುವುದು ಒಳ್ಳೆಯದಲ್ಲ" ಎಂದು ಅವರು ಎಚ್ಚರಿಸಿದ್ದಾರೆ. ಕಾಬೂಲ್‌ನ ನಿಲುವನ್ನು ಪುನರುಚ್ಚರಿಸುತ್ತಾ, "ಸಮಸ್ಯೆಗಳನ್ನು ಈ ರೀತಿ ಪರಿಹರಿಸಲಾಗುವುದಿಲ್ಲ. ನಾವು ಚರ್ಚೆಗೆ ಬಾಗಿಲು ತೆರೆದಿದ್ದೇವೆ. ಆದರೆ 40 ವರ್ಷಗಳ ನಂತರ ಅಫ್ಘಾನಿಸ್ತಾನ ಶಾಂತಿ ಮತ್ತು ಪ್ರಗತಿಯನ್ನು ಹೊಂದಿದೆ. ಅದನ್ನು ಹಳಿತಪ್ಪಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.

ಮುತ್ತಕಿ ಹೇಳಿಕೆಗಳು ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವಿನ ಆಳವಾದ ಅಪನಂಬಿಕೆಯನ್ನು ಪ್ರತಿಬಿಂಬಿಸುತ್ತವೆ, ತಾಲಿಬಾನ್ ಆಡಳಿತದ ಬಗ್ಗೆ ಬಾಹ್ಯ ಟೀಕೆಗಳನ್ನು ಮುತ್ತಾಕಿ ತಳ್ಳಿಹಾಕುತ್ತಾ, "ನಾವು ಸ್ವತಂತ್ರ ರಾಷ್ಟ್ರ. ನಮಗೆ ಶಾಂತಿ ಇದ್ದರೆ ಜನರು ಏಕೆ ತೊಂದರೆಗೊಳಗಾಗುತ್ತಾರೆ? ನಾವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ, ಆದರೆ ಅದು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ." ಎಂದು ಮುತ್ತಕಿ ಭಾರತಕ್ಕೆ ನೀಡಿದ ಸಂದೇಶವು ಗಮನಾರ್ಹವಾಗಿ ಸಹಕಾರಿಯಾಗಿತ್ತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗಿನ ಮಾತುಕತೆಯ ನಂತರ, ಅಫ್ಘಾನಿಸ್ತಾನ ಶೀಘ್ರದಲ್ಲೇ ಭಾರತಕ್ಕೆ ಹೊಸ ರಾಜತಾಂತ್ರಿಕರನ್ನು ಕಳುಹಿಸಲಿದೆ ಎಂದು ಘೋಷಿಸಿದ್ದಾರೆ.

External Affairs Minister S Jaishankar during a meeting with his Afghani counterpart Amir Khan Muttaqi in New Delhi
ಪಾಕಿಸ್ತಾನಕ್ಕೆ ಭಾರತ ಠಕ್ಕರ್: ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಜೊತೆ ಹೊಸ ಸಂಬಂಧ; ಕಾಬೂಲ್ ನಲ್ಲಿ ರಾಯಭಾರ ಕಚೇರಿ ಪುನಃಸ್ಥಾಪನೆ! Video

"ನಿಮ್ಮ ಕಾಳಜಿ ನಮಗೆ ಮುಖ್ಯ. ಅಫಘಾನ್ ಮಣ್ಣನ್ನು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಯಾವುದೇ ರೀತಿಯಲ್ಲಿ ಬಳಸಲು ಬಿಡುವುದಿಲ್ಲ" ಎಂದು ಮುತ್ತಕಿ ಇದೇ ವೇಳೆ ಹೇಳಿದ್ದಾರೆ. ಭಾರತ ಇಲ್ಲಿಯವರೆಗೆ ತಾಲಿಬಾನ್ ಸರ್ಕಾರವನ್ನು ಗುರುತಿಸುವುದನ್ನು ತಪ್ಪಿಸಿದೆ. ಭವಿಷ್ಯದ ಯಾವುದೇ ಮಾತುಕತೆಗಳೂ ಕಾಬೂಲ್‌ನಲ್ಲಿ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ವ್ಯವಸ್ಥೆಯ ರಚನೆಯ ಮೇಲೆ ಅವಲಂಬಿತವಾಗಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ಆದರೂ, ಈ ಭೇಟಿಯ ವೇಳೆ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿದೆ.

ಮಾತುಕತೆಯ ಸಮಯದಲ್ಲಿ, ಉಭಯ ದೇಶಗಳ ನಾಯಕರು ಆರೋಗ್ಯ ರಕ್ಷಣೆ, ಮೂಲಸೌಕರ್ಯ, ಶಿಕ್ಷಣ ಮತ್ತು ಸಂಪರ್ಕದಲ್ಲಿ ಸಹಕಾರವನ್ನು ಅನ್ವೇಷಿಸಿದ್ದಾರೆ. ಭಾರತ ಆರು ಹೊಸ ಅಭಿವೃದ್ಧಿ ಯೋಜನೆಗಳು, MRI ಮತ್ತು CT ಯಂತ್ರಗಳು, 20 ಆಂಬ್ಯುಲೆನ್ಸ್‌ಗಳು ಮತ್ತು ಅಫಘಾನ್ ವಿದ್ಯಾರ್ಥಿಗಳಿಗೆ ವಿಸ್ತೃತ ವಿದ್ಯಾರ್ಥಿವೇತನಗಳು ಸೇರಿದಂತೆ ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದೆ. ಕಾಬೂಲ್ ಮತ್ತು ದೆಹಲಿ ನಡುವಿನ ವಾಣಿಜ್ಯ ವಿಮಾನಗಳು ಸಹ ಪುನರಾರಂಭಗೊಂಡಿವೆ.

ಮುತ್ತಕಿಯವರ ಭೇಟಿ ತಾಲಿಬಾನ್ ಆಡಳಿತಕ್ಕೆ ರಾಜತಾಂತ್ರಿಕ ಮೈಲಿಗಲ್ಲನ್ನು ಸೂಚಿಸುತ್ತದೆ, ಪ್ರಮುಖ ಪ್ರಾದೇಶಿಕ ಶಕ್ತಿಯೊಂದಿಗೆ ಅಪರೂಪದ ಸಾರ್ವಜನಿಕ ಸಂಬಂಧ ಸುಧಾರಣೆಯ ಸುಳಿವು ನೀಡುತ್ತದೆ. ಭಾರತ ಅಫ್ಘಾನ್ ಸಚಿವರ ಭೇಟಿಯ ವೇಳೆ ಯಾವುದೇ ಔಪಚಾರಿಕ ಮಾನ್ಯತೆಯನ್ನು ನೀಡಿಲ್ಲವಾದರೂ, ಭೇಟಿ ನವದೆಹಲಿಯ ದೀರ್ಘಾವಧಿ ಕಾರ್ಯತಂತ್ರವನ್ನು ಪ್ರತಿಬಿಂಬಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com