
ನವದೆಹಲಿ: ದೆಹಲಿಯಲ್ಲಿ ನಡೆದ ಆಫ್ಘಾನಿಸ್ತಾನ ಸರ್ಕಾರದ ನೇತೃತ್ವ ವಹಿಸಿರುವ ತಾಲಿಬಾನ್ ನಾಯಕರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂದ ಹೇರಲಾಗಿತ್ತು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಸ್ಫಷ್ಟನೆ ನೀಡಿದ್ದು ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿದೆ.
ಶನಿವಾರ ದೆಹಲಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ನಡೆಸಿದ ಪತ್ರಿಕಾಗೋಷ್ಠಿ ವಿವಾದದ ಕುರಿತು "ತಮಗೆ ಯಾವುದೇ ಪಾತ್ರವಿಲ್ಲ" ಎಂದು ಪ್ರತಿಪಾದಿಸಿದೆ. ಇದು ಯಾವುದೇ ಮಹಿಳೆಯರಿಗೆ 'ಅವಕಾಶ' ನೀಡದ ಕಾರಣ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಕುರಿತು ವಿದೇಶಾಂಗ ಸಚಿವಾಲಯದ (MEA) ಪ್ರತಿಕ್ರಿಯೆ ನೀಡಿದ್ದು, 'ಪತ್ರಿಕಾಗೋಷ್ಠಿಗೆ ಆಹ್ವಾನಗಳನ್ನು ಮುಂಬೈನಲ್ಲಿರುವ ಅಫ್ಘಾನಿಸ್ತಾನದ ಕಾನ್ಸುಲ್ ಜನರಲ್‌ನ ಆಯ್ದ ಪತ್ರಕರ್ತರಿಗೆ ಕಳುಹಿಸಲಾಗಿತ್ತು, ಅವರು ಅಫ್ಘಾನ್ ಸಚಿವರ ಭೇಟಿಗಾಗಿ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಅಫ್ಘಾನ್ ರಾಯಭಾರ ಕಚೇರಿ ಪ್ರದೇಶವು ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದೆ.
ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯರು ಕಾಣೆಯಾಗಿದ್ದರು. ಕೆಲವು ಮಹಿಳಾ ಪತ್ರಕರ್ತರನ್ನು ಸಭೆಗೆ ಪ್ರವೇಶಿಸದಂತೆ ತಡೆಯಲಾಯಿತು ಎಂದು ಆರೋಪಿಸಲಾಗಿದೆ.
ಪತ್ರಿಕಾಗೋಷ್ಠಿಯ ಸ್ವಲ್ಪ ಸಮಯದ ನಂತರ, ಅನೇಕ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು ಮತ್ತು ಎಲ್ಲಾ ಮಹಿಳಾ ವರದಿಗಾರರು ಡ್ರೆಸ್ ಕೋಡ್ ಅನ್ನು ಗೌರವಿಸಿದ್ದಾರೆ ಎಂದು ಸಹ ಗಮನಸೆಳೆದರು.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಮಹಿಳೆಯರ ಮೇಲೆ ವಿಧಿಸುವ ನಿರ್ಬಂಧಗಳಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಅವರು ಕೆಲಸ ಮಾಡುವುದನ್ನು ತಡೆಯುತ್ತದೆ.
ಇತ್ತೀಚೆಗೆ, ಅದು ಅಫ್ಘಾನ್ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರು ಬರೆದ ಪುಸ್ತಕಗಳನ್ನು ನಿಷೇಧಿಸಿತು ಮತ್ತು ಲಿಂಗ ಮತ್ತು ಅಭಿವೃದ್ಧಿ, ಮಹಿಳಾ ಸಮಾಜಶಾಸ್ತ್ರ, ಮಾನವ ಹಕ್ಕುಗಳು, ಅಫಘಾನ್ ಸಾಂವಿಧಾನಿಕ ಕಾನೂನು ಮತ್ತು ಜಾಗತೀಕರಣ ಮತ್ತು ಅಭಿವೃದ್ಧಿ ಸೇರಿದಂತೆ 18 ಕೋರ್ಸ್‌ಗಳನ್ನು ಕೈಬಿಟ್ಟಿತು.
ಕೇಂದ್ರ ಸರ್ಕಾರದ ವಿರುದ್ದ ಮುಗಿಬಿದ್ದ ವಿಪಕ್ಷಗಳು
ಈ ತಾಲಿಬಾನ್ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರ ಮೇಲಿನ 'ನಿಷೇಧ'ದ ಬಗ್ಗೆ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
"ನೀವು ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ಅನುಮತಿಸಿದಾಗ, ನೀವು ಭಾರತದ ಪ್ರತಿಯೊಬ್ಬ ಮಹಿಳೆಗೂ ಅವರ ಪರವಾಗಿ ನಿಲ್ಲಲು ತುಂಬಾ ದುರ್ಬಲರು ಎಂದು ಹೇಳುತ್ತಿದ್ದೀರಿ." "ನಮ್ಮ ದೇಶದಲ್ಲಿ, ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಭಾಗವಹಿಸುವ ಹಕ್ಕಿದೆ. ಅಂತಹ ತಾರತಮ್ಯದ ವಿರುದ್ಧ ನಿಮ್ಮ ಮೌನವು ನಾರಿ ಶಕ್ತಿಯ ಕುರಿತಾದ ನಿಮ್ಮ ಘೋಷಣೆಗಳ ಶೂನ್ಯತೆಯನ್ನು ಬಹಿರಂಗಪಡಿಸುತ್ತದೆ" ಎಂದು ಅವರು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಮಾತ್ರವಲ್ಲದೇ ಪ್ರಿಯಾಂಕಾ ಗಾಂಧಿ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಕೂಡ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.
Advertisement