
ಚೆನ್ನೈ: ವಿಷಯುಕ್ತ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಾದ ಸ್ರೆಸನ್ ಫಾರ್ಮಾ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಲ್ಲದೇ ಕಂಪನಿಯನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೆಮ್ಮಿನ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಎಥಿಲೀನ್ ಗ್ಲೈಕಾಲ್ (DEG) ಅಂಶವಿರುವುದು ಪತ್ತೆಯಾಗಿದೆ. ಈ ಔಷಧಿ ಮಧ್ಯಪ್ರದೇಶದ ಮಕ್ಕಳ ಸಾವಿಗೂ ಕಾರಣವಾಗಿದೆ.
ಕಂಪನಿಯು ಸರಿಯಾದ ಉತ್ತಮ ಉತ್ಪಾದನಾ ವ್ಯವಸ್ಥೆ (GMP) ಮತ್ತು ಉತ್ತಮ ಪ್ರಯೋಗಾಲಯ ವ್ಯವಸ್ಥೆ (GLP) ಹೊಂದಿಲ್ಲ ಎಂಬುದನ್ನು ಅಧಿಕಾರಿಗಳು ಗುರುತಿಸಿದ್ದು, 300 ಕ್ಕೂ ಹೆಚ್ಚು ನಿರ್ಣಾಯಕ ಮತ್ತು ಪ್ರಮುಖ ಉಲ್ಲಂಘನೆಗಳನ್ನು ದಾಖಲಿಸಿದ್ದಾರೆ.
ಕಂಪನಿಯ ಮಾಲೀಕ ಜಿ ರಂಗನಾಥನ್ ಅವರನ್ನು ಇತ್ತೀಚೆಗೆ ಮಧ್ಯಪ್ರದೇಶದ ವಿಶೇಷ ತನಿಖಾ ತಂಡ ಬಂಧಿಸಿತ್ತು. ಜಾರಿ ನಿರ್ದೇಶನಾಲಯದ ತಂಡವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣದಲ್ಲಿ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆಲವು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದೆ.
ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಔಷಧ ತಯಾರಿಕಾ ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು, ಕಂಪನಿಯನ್ನು ಮುಚ್ಚಲಾಗಿದೆ. ತಮಿಳುನಾಡಿನಲ್ಲಿರುವ ಇತರ ಔಷಧ ತಯಾರಿಕಾ ಕಂಪನಿಗಳ ವಿವರವಾದ ತಪಾಸಣೆ ನಡೆಸಲು ಆದೇಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
Advertisement