ಕೆಮ್ಮಿನ ಸಿರಪ್ ದುರಂತ: ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು; ಮಕ್ಕಳ ಸಾವಿನ ಸಂಖ್ಯೆ 24ಕ್ಕೆ ಏರಿಕೆ!

ಸೆಪ್ಟೆಂಬರ್ 14 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಚಿಂದ್ವಾರ ಜಿಲ್ಲೆಯ ಚೌರೈ ಪ್ರದೇಶದ ಮೂಲದ ಮೂರುವರೆ ವರ್ಷದ ಅಂಬಿಕಾ ವಿಶ್ವಕರ್ಮ ಬುಧವಾರ ತೀವ್ರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು.
Coldrif cough syrup
ಸಾಂಕೇತಿಕ ಚಿತ್ರonline desk
Updated on

ಭೋಪಾಲ್: ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಿಂದಾಗಿ ಉಂಟಾಗಿರುವ ತೀವ್ರ ಮೂತ್ರಪಿಂಡ ವೈಫಲ್ಯದ ಕಾರಣ ಮಧ್ಯಪ್ರದೇಶದಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ. ಈ ದುರಂತದಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಇತ್ತೀಚಿನ ಸಾವು ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಿಂದ ವರದಿಯಾಗಿದ್ದು, ಸೆಪ್ಟೆಂಬರ್ 14 ರಿಂದ ಚಿಕಿತ್ಸೆ ಪಡೆಯುತ್ತಿದ್ದ ಚಿಂದ್ವಾರ ಜಿಲ್ಲೆಯ ಚೌರೈ ಪ್ರದೇಶದ ಮೂಲದ ಮೂರುವರೆ ವರ್ಷದ ಅಂಬಿಕಾ ವಿಶ್ವಕರ್ಮ ಬುಧವಾರ ತೀವ್ರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು.

ಈ ದುರಂತ ಬೆಳವಣಿಗೆಯನ್ನು ಚಿಂದ್ವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಧೀರೇಂದ್ರ ಸಿಂಗ್ ದೃಢಪಡಿಸಿದ್ದು, ಈ ಇತ್ತೀಚಿನ ಸಾವಿನೊಂದಿಗೆ, ಸೆಪ್ಟೆಂಬರ್ 3 ರಿಂದ ಚಿಂದ್ವಾರ ಜಿಲ್ಲೆಯ ವಿವಿಧ ಭಾಗಗಳಿಂದ 21 ಮಕ್ಕಳು ಕೆಮ್ಮಿನ ಸಿರಪ್ ವಿಷದಿಂದ ಉಂಟಾಗುವ ತೀವ್ರ ಮೂತ್ರಪಿಂಡ ವೈಫಲ್ಯದಿಂದ ಚಿಂದ್ವಾರ ಮತ್ತು ನಾಗ್ಪುರದ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು TNIE ಗೆ ತಿಳಿಸಿದ್ದಾರೆ.

ಪಂಧುರ್ನಾ ಜಿಲ್ಲೆಯ ಒಬ್ಬರು ಮತ್ತು ಬೇತುಲ್ ಜಿಲ್ಲೆಯ ಇಬ್ಬರು ಮಕ್ಕಳು ಸೇರಿದಂತೆ ಇನ್ನೂ ಮೂರು ಮಕ್ಕಳು ಇದೇ ರೀತಿಯ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದು, ದಕ್ಷಿಣ ಮಧ್ಯಪ್ರದೇಶ ಜಿಲ್ಲೆಗಳಿಂದ ಈ ಸಾವನ್ನಪ್ಪಿದ ಒಟ್ಟು ಮಕ್ಕಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ಮತ್ತು ಪ್ರಸ್ತುತ ತಮಿಳುನಾಡಿನಲ್ಲಿ ಮೊಕ್ಕಾಂ ಹೂಡಿರುವ ಚಿಂದ್ವಾರ ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡದ (SIT) ತಂಡವು ಸಂಬಂಧಿತ ಕೆಮ್ಮು ಸಿರಪ್ ತಯಾರಕರಾದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್‌ನ ಮಹಿಳಾ ರಾಸಾಯನಿಕ ವಿಶ್ಲೇಷಕಿಯನ್ನು ಬಂಧಿಸಿದೆ.

Coldrif cough syrup
Tamil Nadu: ವಿಷಯುಕ್ತ 'ಕೋಲ್ಡ್ರಿಫ್' ಸಿರಪ್; ಶ್ರೀಸನ್ ಫಾರ್ಮಾ ಕಂಪನಿಯ ಲೈಸನ್ಸ್ ರದ್ದುಗೊಳಿಸಿ, ಬಾಗಿಲು ಮುಚ್ಚಿಸಿದ ಸ್ಟಾಲಿನ್ ಸರ್ಕಾರ!

ತಮಿಳುನಾಡಿನಿಂದ ಬಂಧಿಸಲ್ಪಟ್ಟ 61 ವರ್ಷದ ಮಹಿಳಾ ರಾಸಾಯನಿಕ ವಿಶ್ಲೇಷಕಿಯನ್ನು ಈಗ ಮಧ್ಯಪ್ರದೇಶಕ್ಕೆ ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆತರಲಾಗುತ್ತದೆ. ಅಕ್ಟೋಬರ್ 11 ರಂದು ತಯಾರಿಕಾ ಕಂಪನಿಯ 75 ವರ್ಷದ ಮಾಲೀಕ ರಂಗನಾಥನ್ ಗೋವಿಂದನ್ ಬಂಧನದ ನಂತರ ತಮಿಳುನಾಡಿನಲ್ಲಿ ನಡೆದ ಎರಡನೇ ಬಂಧನ ಇದಾಗಿದ್ದು, ಒಟ್ಟಾರೆಯಾಗಿ ಪ್ರಕರಣದಲ್ಲಿ ಐದನೇ ಬಂಧನವಾಗಿದೆ.

ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಿಂದ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲ್ಪಟ್ಟ ಇತರ ಮೂವರಲ್ಲಿ ಸರ್ಕಾರಿ ವೈದ್ಯ ಡಾ. ಪ್ರವೀಣ್ ಸೋನಿ (ನಂತರ ಸಾವನ್ನಪ್ಪಿದ ಹೆಚ್ಚಿನ ಮಕ್ಕಳಿಗೆ ಪರಾಸಿಯಾ ಪಟ್ಟಣದ ತಮ್ಮ ಖಾಸಗಿ ಚಿಕಿತ್ಸಾಲಯದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಅನ್ನು ಶಿಫಾರಸು ಮಾಡಿದವರು), ಸಿರಪ್‌ನ ಸ್ಥಳೀಯ ಸ್ಟಾಕಿಸ್ಟ್ ರಾಜೇಶ್ ಸೋನಿ ಮತ್ತು ಅಪ್ನಾ ಮೆಡಿಕಲ್ ಸ್ಟೋರ್‌ನ ಔಷಧಿಕಾರ ಸೌರಭ್ ಜೈನ್ ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com