Bihar polls: ಗೆಲ್ಲುವುದಿಲ್ಲ ಎಂಬುದು ತಿಳಿದಿದ್ದರಿಂದ ಪ್ರಶಾಂತ್ ಕಿಶೋರ್ ಸ್ಪರ್ಧಿಸುತ್ತಿಲ್ಲ; ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಹಿಂದಿನ ದಿನ, ಪ್ರಶಾಂತ್ ಕಿಶೋರ್, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ದೊಡ್ಡ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದರು.
Union Minister Giriraj Singh
ಕೇಂದ್ರ ಸಚಿವ ಗಿರಿರಾಜ್ ಸಿಂಗ್
Updated on

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬುಧವಾರ ಟೀಕಿಸಿದ್ದಾರೆ. ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಅವರಿಗೆ 'ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ತಿಳಿದಿದೆ' ಎಂದು ಹೇಳಿದ್ದಾರೆ.

ಜನ ಸುರಾಜ್ ಪಕ್ಷಕ್ಕೆ 150 ಸೀಟುಗಳಿಗಿಂತ ಕಡಿಮೆ ಸ್ಥಾನಗಳು ಬಂದರೆ ಅದನ್ನು ಸೋಲು ಎಂದು ಪರಿಗಣಿಸಲಾಗುವುದು ಎಂಬ ಕಿಶೋರ್ ಹೇಳಿಕೆಯನ್ನು 'ಮುಂಗೇರಿಲಾಲ್ ಕೆ ಹಸೀನ್ ಸಪ್ನೆ' ಎಂದು ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

'ಮುಂಗೇರಿಲಾಲ್ ಕೆ ಹಸೀನ್ ಸಪ್ನೆ' ಹಗಲುಗನಸು ಕಾಣುವ ವ್ಯಕ್ತಿಯ ಕುರಿತಾದ ಕಥೆಯನ್ನು ಒಳಗೊಂಡ ದೂರದರ್ಶನ ಸರಣಿಯಾಗಿದೆ.

'ಕಿಶೋರ್ ಅವರು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದನ್ನು ಅರಿತುಕೊಂಡರು ಮತ್ತು ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಜನ ಸುರಾಜ್ ಪಕ್ಷವನ್ನು ಹುಟ್ಟುಹಾಕಲು ಅವರು ಏನೇನು ಬಂಡವಾಳ ಹೂಡಿದ್ದರೋ ಅದನ್ನು ವಾಪಸ್ ಪಡೆಯಲಾಗಿದೆ. ಅವರ ಪಕ್ಷವು 'ವೋಟ್ ಕತ್ವಾ' (ಇತರರ ಮತಗಳನ್ನು ಕಡಿತಗೊಳಿಸುವ ಪಕ್ಷ) ಹೊರತು ಬೇರೇನೂ ಅಲ್ಲ. ಜನ ಸುರಾಜ್ ಪಕ್ಷವು ಆರ್‌ಜೆಡಿಯ 'ಬಿ' ಟೀಂ' ಸಿಂಗ್ ಆರೋಪಿಸಿದ್ದಾರೆ.

ಹಿಂದಿನ ದಿನ, ಪ್ರಶಾಂತ್ ಕಿಶೋರ್ ಅವರು, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ದೊಡ್ಡ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದರು.

Union Minister Giriraj Singh
Watch | ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲ್ಲ! ನಾನು ಸ್ಪರ್ಧಿಸಲ್ಲ- ಪ್ರಶಾಂತ್ ಕಿಶೋರ್

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಜನ ಸುರಾಜ್ ಸಂಸ್ಥಾಪಕರು ತಮ್ಮ ಪಕ್ಷಕ್ಕೆ '150 ಸ್ಥಾನಗಳಿಗಿಂತ ಕಡಿಮೆ ಬಂದರೆ' ಅದನ್ನು ಸೋಲು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮುಂಬರುವ ಬಿಹಾರ ಚುನಾವಣೆಯಲ್ಲಿ 243 ವಿಧಾನಸಭಾ ಕ್ಷೇತ್ರಗಳ ಪೈಕಿ 225 ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಬಿಹಾರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಎನ್‌ಡಿಎ ಸರ್ಕಾರದ ಕೆಲಸಗಳನ್ನು ಜನ ನೋಡಿದ್ದಾರೆ. ಈ ಬಾರಿ ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟ ತನ್ನ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಕನಿಷ್ಠ 225 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿಂಗ್ ಹೇಳಿದ್ದಾರೆ.

2010ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ 210 ಸ್ಥಾನಗಳನ್ನು ಗೆದ್ದಿತ್ತು.

ಚುನಾವಣೆಗೆ ಮುನ್ನ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. 'ಮಹಾಘಟಬಂಧನ್' ಅಧಿಕಾರಕ್ಕೆ ಬಂದರೆ ಸರ್ಕಾರಿ ಕೆಲಸವಿಲ್ಲದ ಬಿಹಾರದ ಪ್ರತಿ ಮನೆಯ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಆರ್‌ಜೆಡಿ ಇತ್ತೀಚೆಗೆ ಘೋಷಿಸಿತು. ಆದರೆ, ಸರ್ಕಾರಿ ಇಲಾಖೆಗಳಲ್ಲಿ ಆರ್‌ಜೆಡಿ ಹುದ್ದೆಗಳನ್ನು ಎಲ್ಲಿಂದ ಸೃಷ್ಟಿಸುತ್ತದೆ? ಭರವಸೆ ತಪ್ಪುದಾರಿಗೆಳೆಯುತ್ತಿದೆ. ರಾಜ್ಯದಲ್ಲಿ ಜಂಗಲ್ ರಾಜ್ ಮರಳುವುದನ್ನು ಜನರು ಬಯಸುವುದಿಲ್ಲ' ಎಂದು ಸಿಂಗ್ ಹೇಳಿದರು.

'ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಪಕ್ಷವು 'ಬಿಹಾರವನ್ನು ಲ್ಯಾಂಟರ್ನ್ (ಆರ್‌ಜೆಡಿಯ ಚಿಹ್ನೆ)' ಕಾಲಕ್ಕೆ ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಿದೆ. ಅವರು ಚಾರ್ವಾಹ ಮಾದರಿಯ ಬಗ್ಗೆ ಮಾತನಾಡುತ್ತಾರೆ! ಇದು ಆಗುವುದಿಲ್ಲ. ಮೋದಿ ಜಿ ಮತ್ತು ನಿತೀಶ್ ಜಿ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯ ಮಾಡಲು ಬಯಸುತ್ತಾರೆ' ಎಂದು ಕೇಂದ್ರ ಸಚಿವರು ಹೇಳಿದರು.

1990ರ ದಶಕದ ಆರಂಭದಲ್ಲಿ, ಬಿಹಾರದ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರು ಪ್ರಾಣಿಗಳನ್ನು ಮೇಯಿಸುತ್ತಿದ್ದ 5 ರಿಂದ 15 ವರ್ಷ ವಯಸ್ಸಿನ ಬಡ ಮಕ್ಕಳಿಗಾಗಿ ಚಾರ್ವಾಹ ವಿದ್ಯಾಲಯಗಳೆಂಬ ವಿಶೇಷ ಶಾಲೆಗಳನ್ನು ಪ್ರಾರಂಭಿಸಿದರು. ಈ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಇದರ ಗುರಿಯಾಗಿತ್ತು. ಆದರೆ, ಯೋಜನೆ ಸಂಪೂರ್ಣ ವಿಫಲವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com