
ಕೋಲ್ಕತ್ತಾ: ಸಿಲಿಗುರಿಯಲ್ಲಿ ದೊಡ್ಡ 'ಮಹಾಕಾಲ' ದೇವಸ್ಥಾನವನ್ನು ನಿರ್ಮಿಸಲಾಗುವುದು ಮತ್ತು ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಇಂದು ಡಾರ್ಜಿಲಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಪಕ್ಕದಲ್ಲಿ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಹಿಂದೂ ಪುರಾಣಗಳಲ್ಲಿ ಮಹಾಕಾಲ ಎಂಬುದು ಶಿವನ ಮತ್ತೊಂದು ಹೆಸರು.
"ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಬಳಿ ದೊಡ್ಡ ಮಹಾಕಾಲ ದೇವಸ್ಥಾನ ತಲೆ ಎತ್ತಲಿದೆ. ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಬೇಕಾಗಿದೆ" ಎಂದು ಡಾರ್ಜಿಲಿಂಗ್‌ನ ಮಹಾಕಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಮತಾ ಬ್ಯಾನರ್ಜಿ ತಿಳಿಸಿದರು.
ದಿಘಾದಲ್ಲಿ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದ ಕೀರ್ತಿಯೂ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲುತ್ತದೆ.
ಮಹಾ ಮಳೆ ಮತ್ತು ಭೂಕುಸಿತದಿಂದ 32 ಜನ ಪ್ರಾಣ ಕಳೆದುಕೊಂಡ ಉತ್ತರ ಬಂಗಾಳದಲ್ಲಿ ದೀದಿ ಇಂದು ಸಾರ್ವಜನಿಕ ಸಂಪರ್ಕ ಸಭೆ ನಡೆಸಿದರು.
ದೇವಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಲಿದೆ, ಆದರೆ ದೇವಾಲಯ ನಿರ್ಮಾಣಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
Advertisement