'4ನೇ ಪತ್ನಿಯ ಜೀವನ ನಿರ್ವಹಣೆಗೆ 30 ಸಾವಿರ ರೂ. ಮಾಸಿಕ ಪರಿಹಾರ ನೀಡಬೇಕು.. ಇಲ್ಲ.. ': ಎಸ್ ಪಿ ಮುಖಂಡನಿಗೆ ಕೋರ್ಟ್ ಎಚ್ಚರಿಕೆ

ಸಮಾಜವಾದಿ ಪಕ್ಷದ ಸಂಸದ ಮೊಹಿಬ್ಬುಲ್ಲಾ ನದ್ವಿ ಅವರ ನಾಲ್ಕನೇ ಪತ್ನಿಗೆ ಮಾಸಿಕ ಜೀವನಾಂಶವನ್ನು ನಿಯಮಿತವಾಗಿ ಪಾವತಿಸುವಂತೆ ನಿರ್ದೇಶಿಸಿದ್ದು, ಮಾಸಿಕ 30 ಸಾವಿರ ರೂ ಹಣ ನೀಡಬೇಕು. ಇಲ್ಲದಿದ್ದರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಲಹಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದೆ.
Samajwadi Party MP from Rampur Mohibbullah Nadvi
ರಾಂಪುರ ಸಂಸದ ಮೊಹಿಬ್ಬುಲ್ಲಾ ನದ್ವಿ
Updated on

ಪಾಟ್ನಾ: ಉತ್ತರ ಪ್ರದೇಶದ ಸಾಮಾಜವಾದಿ ಪಕ್ಷದ ಮುಖಂಡ ಹಾಗೂ ರಾಂಪುರದ ಸಂಸದ ಮೊಹಿಬ್ಬುಲ್ಲಾ ನದ್ವಿ ತಮ್ಮ ಕೌಟುಂಬಿಕ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಅವರ 4ನೇ ಪತ್ನಿಗೆ ಮಾಸಿಕ 30 ಸಾವಿರ ರೂ ಹಣ ನೀಡುವಂತೆ ಕೋರ್ಟ್ ಸೂಚಿಸಿದೆ.

ಸಮಾಜವಾದಿ ಪಕ್ಷದ ಸಂಸದ ಮೊಹಿಬ್ಬುಲ್ಲಾ ನದ್ವಿ ಅವರ ನಾಲ್ಕನೇ ಪತ್ನಿಗೆ ಮಾಸಿಕ ಜೀವನಾಂಶವನ್ನು ನಿಯಮಿತವಾಗಿ ಪಾವತಿಸುವಂತೆ ನಿರ್ದೇಶಿಸಿದ್ದು, ಮಾಸಿಕ 30 ಸಾವಿರ ರೂ ಹಣ ನೀಡಬೇಕು. ಇಲ್ಲದಿದ್ದರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಲಹಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಅಂತೆಯೇ ವೈವಾಹಿಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಅವರು ಈ ವಿಷಯವನ್ನು ಹೈಕೋರ್ಟ್‌ನ ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಿದ್ದಾರೆ.

ಮೂಲಗಳ ಪ್ರಕಾರ ಏಪ್ರಿಲ್ 1, 2024 ರಂದು ಆಗ್ರಾದ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸಂಸದ ನದ್ವಿ ಅಲಹಾಬಾದ್ ಹೈಕೋರ್ಟ್​​​ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್​​ನ ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಅವರು ನಾಲ್ಕನೇ ಪತ್ನಿಗೆ ಮಾಸಿಕ 30,000 ರೂ.ಜೀವನಾಂಶ ನೀಡುವಂತೆ ಆದೇಶ ನೀಡಿದ್ದಾರೆ.

Samajwadi Party MP from Rampur Mohibbullah Nadvi
ಮಕ್ಕಳ ಜೀವ ತೆಗೆದ ಕೆಮ್ಮಿನ ಸಿರಪ್ ಬಳಿಕ ಭೀತಿ ಹುಟ್ಟಿಸುತ್ತಿವೆ 'ಆ್ಯಂಟಿಬಯಾಟಿಕ್'ಗಳು

ಹೈಕೋರ್ಟ್​​ನಲ್ಲಿ ಸಂಸದ ಮೊಹಿಬ್ಬುಲ್ಲಾ ನದ್ವಿ ಪರ ವಕೀಲರು ವಾದಿಸಿದ್ದಾರೆ. ಸಂಸದರು ಈ ವಿಷಯವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಇದು ವೈವಾಹಿಕ ವಿವಾದವನ್ನು ಒಳಗೊಂಡಿರುವುದರಿಂದ ಇದನ್ನು ಪರಿಹರಿಸಲು ಮಧ್ಯಸ್ಥಿಕೆ ಸೂಕ್ತ ಆಯ್ಕೆ ಎಂದು ಹೇಳಿದ್ದಾರೆ.

ನ್ಯಾಯಾಲಯವು ಎರಡೂ ಕಡೆಯವರು ಒಪ್ಪಂದಕ್ಕೆ ಬರಲು ಮೂರು ತಿಂಗಳ ಕಾಲಾವಕಾಶ ನೀಡಿದೆ. ಈ ಮಧ್ಯೆ, ಮಧ್ಯಂತರ ನಿರ್ವಹಣೆಗಾಗಿ ತಿಂಗಳಿಗೆ 30,000 ರೂ. ಸೇರಿದಂತೆ 55,000 ರೂ.ಗಳನ್ನು ಠೇವಣಿ ಇಡಲು ನದ್ವಿಗೆ ಆದೇಶ ನೀಡಿದೆ. ಒಂದು ವೇಳೆ ಸಂಸದರು ಜೀವನಾಂಶ ನೀಡಲು ಸಾಧ್ಯವಾಗದಿದ್ದರೆ, ಅಥವಾ ಮಧ್ಯಸ್ಥಿಕೆ ಯಶಸ್ವಿಯಾಗದಿದ್ದರೆ, ಮುಂದಿನ ಕ್ರಮಗಳು ಕಾನೂನಿನ ಪ್ರಕಾರ ಅನುಸರಿಸುತ್ತವೆ ಎಂದು ಕೋರ್ಟ್​​​ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com