ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಶುಭಾಶಯ: ಮತ್ತೆ ವಿವಾದ ಎಬ್ಬಿಸಿದ ಉದಯನಿಧಿ ಸ್ಟಾಲಿನ್; ಬಿಜೆಪಿ ಕಿಡಿ

ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ
Udhayanidhi Stalin
ಉದಯನಿಧಿ ಸ್ಟಾಲಿನ್
Updated on

ಚೆನ್ನೈ: ತನ್ನ ಹೇಳಿಕೆಗಳಿಂದಲೇ ಸದಾ ಪ್ರಚಾರದಲ್ಲಿರುವ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ ಇದೀಗ ಮತ್ತೆ ವಿವಾದಾತ್ಮಕ ರೀತಿಯಲ್ಲಿ ಮಾತನಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ದೀಪಾವಳಿ ಶುಭಾಶಯ ಹೇಳುವಾಗ "ನಂಬಿಕೆ ಇರುವವರಿಗೆ" ಎಂದು ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಭಾನುವಾರ ದೀಪಾವಳಿ ಹಿನ್ನಲೆ ಡಿಎಂಕೆ ಪರವಾಗಿ ಚೆನ್ನೈನಲ್ಲಿ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ ಹೇಳಿಕೆಗಳಿಂದ ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ.

ಉದಯನಿಧಿ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಬಿಜೆಪಿ ನಾಯಕಿ ಮತ್ತು ಮಾಜಿ ರಾಜ್ಯಪಾಲೆ ತಮಿಳಿಸೈ ಸೌದರಾಜನ್ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ದೀಪಾವಳಿ ಶುಭಾಶಯ ಕೋರಿದರು.

ಅವರು ಒಪ್ಪುತ್ತಾರೋ ಇಲ್ಲವೋ ಎಂಬುದು ನಮಗೆ ಬೇಡ ಇದು ಹಿಂದೂಗಳ ಹಬ್ಬ ಎಂದು ಹೇಳಿದರು. ಹಿಂದೂಗಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

Udhayanidhi Stalin
ಶನಿವಾರವಷ್ಟೇ ಹೊರ ಬರುವ ರಾಜಕಾರಣಿ ನಾನಲ್ಲ: ಚುನಾವಣಾ ಪ್ರಚಾರದ ವೇಳೆ ನಟ ವಿಜಯ್ ಕಾಲೆಳೆದ ಉದಯನಿಧಿ

ನೀವು ಇತರ ಧರ್ಮದ ಜನರನ್ನು ಸ್ವಾಗತಿಸುವಾಗ, ಅದು ನಂಬಿಕೆಯುಳ್ಳವರಿಗೆ ಎಂದು ನೀವು ಹೇಳುವುದಿಲ್ಲ. ಆದರೆ ಹಿಂದೂ ಧರ್ಮದ ವಿಷಯಕ್ಕೆ ಬಂದಾಗ, ಅದು ನಂಬಿಕೆಯುಳ್ಳವರಿಗೆ ಎಂದು ನೀವು ಹೇಳುತ್ತೀರಿ ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ವಕ್ತಾರ ಎಎನ್ಎಸ್ ಪ್ರಸಾದ್ ಮಾತನಾಡಿ, ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಮ್ಮೆ ಅಧಿಕಾರಕ್ಕೆ ಬಂದ ನಂತರ, ಪ್ರತಿಯೊಬ್ಬ ನಾಗರಿಕನನ್ನೂ ಸಂಪೂರ್ಣ ಸಮಾನತೆಯಿಂದ ನಡೆಸಿಕೊಳ್ಳುವುದು ಅವರ ಕರ್ತವ್ಯ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸೂಕ್ಷ್ಮವಾಗಿ ರಚಿಸಿದ ಸಂವಿಧಾನವು ಈ ಕಡ್ಡಾಯವನ್ನು ಸ್ಪಷ್ಟತೆಯೊಂದಿಗೆ ಒತ್ತಿಹೇಳುತ್ತದೆ. ಆದರೂ, ಡಿಎಂಕೆ ಆಡಳಿತವು ಹಿಂದೂ ಹಬ್ಬಗಳಿಗೆ ಶುಭಾಶಯ ಕೋರುವುದಿಲ್ಲ, ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com