

ಔರಂಗಾಬಾದ್: ಬಿಹಾರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ ಮತ್ತು ವಿನಾಶದ ನಡುವಿನ ಹೋರಾಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಔರಂಗಾಬಾದ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರದ ವಿಧಾನಸಭಾ ಚುನಾವಣೆಯು ಎನ್‌ಡಿಎಯ 'ವಿಕಾಸ್' (ಅಭಿವೃದ್ಧಿ) ಮತ್ತು ಇಂಡಿಯಾ ಬ್ಲಾಕ್‌ನ 'ವಿನಾಶ್' (ವಿನಾಶ) ನಡುವಿನ ಹೋರಾಟವಾಗಿದೆ ಎಂದರು.
ಇದು "ತನ್ನ ಕಿರಿಯ ಮೈತ್ರಿ ಪಾಲುದಾರರನ್ನು ಮುಗಿಸುವ ಪರಾವಲಂಬಿ ಪಕ್ಷ" ಎಂದು ಆರೋಪಿಸಿದರು. ಲಾಲು ಪ್ರಸಾದ್ ನೇತೃತ್ವದ ಪಕ್ಷವು 'ರಂಗದಾರಿ' (ಸುಲಿಗೆ), 'ಜಂಗಲ್ ರಾಜ್' (ಅರಾಜಕತೆ) ಮತ್ತು 'ದಾದಾಗಿರಿ' (ಬೆದರಿಕೆ) ಗಾಗಿ ನಿಂತಿದೆ ಎಂದು ಆರ್‌ಜೆಡಿ ವಿರುದ್ಧ ಕಿಡಿಕಾರಿದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಯುವಕರಿಗೆ ಉದ್ಯೋಗ ಒದಗಿಸುವ ಮತ್ತು ವಲಸೆ ಹೋಗುವುದನ್ನು ತಡೆಯುವ ಭರವಸೆ ಉಲ್ಲೇಖಿಸಿದ ಜೆ.ಪಿ. ನಡ್ಡಾ, ಆರ್‌ಜೆಡಿಯ ಇಂತಹ ಭರವಸೆಗಳು ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಪಕ್ಷ ಭಾಗಿಯಾಗಿರುವುದನ್ನು ನೆನಪಿಸುತ್ತದೆ ಎಂದರು.
ಬಿಹಾರದ ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಒದಗಿಸುವ ಆರ್‌ಜೆಡಿಯ ಚುನಾವಣಾ ಭರವಸೆಯನ್ನು ಟೀಕಿಸಿದ ನಡ್ಡಾ, ಸಂಬಳ ನೀಡಲು ಹಣವನ್ನು ಎಲ್ಲಿಂದ ತರ್ತಾರೆ ಎಂದು ಲೇವಡಿ ಮಾಡಿದರು.
ಚುನಾವಣೆಯಲ್ಲಿ ಗ್ಯಾಂಗ್ ಸ್ಟರ್- ರಾಜಕಾರಣಿ ದಿವಂಗತ ಎಂಡಿ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್‌ಗೆ ಟಿಕೆಟ್ ನೀಡಿದ್ದಕ್ಕಾಗಿ ಆರ್ ಜೆಡಿ ವಿರುದ್ಧ ಗುಡುಗಿದ ಅವರು,ಇದು ಬಿಹಾರದ ಬಗ್ಗೆ ಪಕ್ಷಕ್ಕೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
Advertisement