Elon Musk's X ಜೊತೆಗೆ ಕೇಂದ್ರದ ಕಾನೂನು ಹೋರಾಟ: 'ಕಂಟೆಂಟ್' ನಿಯಮಗಳಲ್ಲಿ ಮಹತ್ವದ ಬದಲಾವಣೆ; ನವೆಂಬರ್ 15 ರಿಂದ ಜಾರಿಗೆ!

ಪ್ರಮುಖ ತಿದ್ದುಪಡಿಯಲ್ಲಿ "ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕಲು ಆದೇಶಗಳನ್ನು ನೀಡಬಹುದಾದ ಅಧಿಕಾರಿಗಳ ಸಂಖ್ಯೆಯನ್ನು ಮಿತಿಗೊಳಿಸುತ್ತದೆ.
Elon Musk's X
ಎಲೋನ್ ಮಸ್ಕ್‌
Updated on

ನವದೆಹಲಿ: ಸಾಮಾಜಿಕ ಮಾಧ್ಯಮಗಳ ಮಾರ್ಗಸೂಚಿಗಳ ಕುರಿತು ಎಲೋನ್ ಮಸ್ಕ್‌ನ ಎಕ್ಸ್‌ ಜೊತೆಗಿನ ಕಾನೂನು ಹೋರಾಟದ ನಂತರ ಕಂಟೆಂಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ ಮಾಡಿದೆ. "ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸುರಕ್ಷತೆಗಳನ್ನು ಹೆಚ್ಚಿಸಲು" ಮಾಹಿತಿ ತಂತ್ರಜ್ಞಾನ ಕಾನೂನಿಗೆ ಪ್ರಮುಖ ತಿದ್ದುಪಡಿಗಳನ್ನು ಮಾಡಿದೆ.

ಪ್ರಮುಖ ತಿದ್ದುಪಡಿಯಲ್ಲಿ "ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕಲು ಆದೇಶಗಳನ್ನು ನೀಡಬಹುದಾದ ಅಧಿಕಾರಿಗಳ ಸಂಖ್ಯೆಯನ್ನು ಮಿತಿಗೊಳಿಸುತ್ತದೆ. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಅಂತಹ ನಿರ್ದೇಶನಗಳನ್ನು ನೀಡುವಾಗ ಅಧಿಕಾರಿಗಳು ಕಾನೂನಿನ ಆಧಾರ ಮತ್ತು ಶಾಸನಬದ್ಧ ನಿಬಂಧನೆಗಳು ಮತ್ತು ಕಾನೂನುಬಾಹಿರ ಕಾರ್ಯವನ್ನು ಸ್ಪಷ್ಟವಾಗಿ ಸೂಚಿಸಬೇಕು.

ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ನಂತರದ ಬೆಳವಣಿಗೆ:

ಮಾಹಿತಿಯನ್ನು ಬ್ಲಾಕಿಂಗ್ ಮಾಡುವ ಆದೇಶವನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ಒಂದು ತಿಂಗಳ ಈ ಬೆಳವಣಿಗೆಯಾಗಿದೆ.

ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯವಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಕರಣಗಳಲ್ಲಿ ಅವರ ಘನತೆಯನ್ನು ಹಕ್ಕನ್ನು ಕಾಪಾಡುವಲ್ಲಿ ವಿಫಲವಾದರೆ ನಿಯಂತ್ರಣವು ಅತ್ಯಗತ್ಯವಾಗಿರುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನವೆಂಬರ್ 15 ರಿಂದ ಬದಲಾವಣೆಗಳು ಜಾರಿಗೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬುಧವಾರ ತಡರಾತ್ರಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಗೆ ತಿದ್ದುಪಡಿಗೆ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಬದಲಾವಣೆಗಳು ನವೆಂಬರ್ 15 ರಿಂದ ಜಾರಿಗೆ ಬರಲಿವೆ. ಉನ್ನತ ಮಟ್ಟದ ಅಧಿಕಾರಿಗಳ ಹೊಣೆಗಾರಿಕೆ, ಕಾನೂನುಬಾಹಿರ ವಿಷಯದ ನಿಖರವಾದ ವಿವರಣೆ ಮತ್ತು ಉನ್ನತ ಮಟ್ಟದಲ್ಲಿ ಸರ್ಕಾರದ ನಿರ್ದೇಶನಗಳನ್ನು ಆಗಾಗ್ಗೆ ಪರಿಶೀಲನೆಯಂತಹ ಹೆಚ್ಚುವರಿ ಸುರಕ್ಷತೆಗಳ ಅಗತ್ಯವನ್ನು ಒತ್ತಿ ಹೇಳಲಾಗಿದೆ.

Elon Musk's X
ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ: X ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಈಗ ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕುವ ಸೂಚನೆಯನ್ನು "ಜಂಟಿ ಕಾರ್ಯದರ್ಶಿ ಅಥವಾ ಅವರಿಗೆ ಸರಿಸಮನವಾದ ಅಧಿಕಾರಿಗಳು ನೀಡಬಹುದಾಗಿದೆ. ಒಂದು ವೇಳೆ ಅಂತಹ ಶ್ರೇಣಿಯ ಅಧಿಕಾರಿ ಇಲ್ಲದಿದ್ದಲ್ಲಿ ನಿರ್ದೇಶಕರು ಅಥವಾ ಅವರಿಗೆ ಸರಿಸಮನಾದ ಹುದ್ದೆಯಲ್ಲಿರುವವರು ನಿರ್ದೇಶನ ನೀಡಬಹುದು.

ಪೊಲೀಸ್ ಅಧಿಕಾರಿಗಳ ವಿಷಯದಲ್ಲಿ ವಿಶೇಷವಾಗಿ ಡಿಐಜಿ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ಮಾತ್ರ ಅಂತಹ ಸೂಚನೆಯನ್ನು ನೀಡಬಹುದು ಎಂದು ಹೇಳಲಾಗಿದೆ. ಈ ಹಿಂದೆ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೂ ಇಂತಹ ನಿರ್ದೇಶನಗಳನ್ನು ನೀಡಲು ಅಧಿಕಾರ ನೀಡಲಾಗಿತ್ತು.

ಮತ್ತೊಂದು ಪ್ರಮುಖ ತಿದ್ದುಪಡಿಯೆಂದರೆ "ನಿರ್ದಿಷ್ಟ ವಿವರಗಳೊಂದಿಗೆ ತರ್ಕಬದ್ಧ ಮಾಹಿತಿ ಅಗತ್ಯವನ್ನು ಸೇರಿಸುವುದು. ಕಾನೂನುಬಾಹಿರ ಚಟುವಟಿಕೆಯ ಸ್ವರೂಪ, ನಿರ್ದಿಷ್ಟ URL/ಗುರುತಿಸುವಿಕೆ ಅಥವಾ ಮಾಹಿತಿಯ ಇತರ ಸ್ಥಳ, ಡೇಟಾ ಅಥವಾ ಸಂವಹನ ಲಿಂಕ್ ('ವಿಷಯ') ತೆಗೆದುಹಾಕಲು ಕಾರಣಗಳನ್ನು ಸ್ಪಷ್ಟವಾಗಿ ಸೂಚಿಸಬೇಕು. ಅಂತಹ ಕ್ರಮಗಳು ಅಗತ್ಯವಾಗಿದೆ.ಇವೆಲ್ಲಾವೂ ಕಾನೂನಿಗೆ ಅನುಗುಣವಾಗಿವೆ ಎಂಬ ಖಾತ್ರಿಗೆ ಮಾಸಿಕವಾಗಿ ಪರಾಮರ್ಶೆ ನಡೆಸಬೇಕು ಎಂದು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com