
ಲಖನೌ: ಉತ್ತರ ಪ್ರದೇಶದಲ್ಲಿ ದಲಿತ ವ್ಯಕ್ತಿಯೋರ್ವನ ಮೇಲೆ ದೌರ್ಜನ್ಯ ನಡೆದಿದ್ದು, ದೇವಸ್ಥಾನವೊಂದರಲ್ಲಿ ಥಳಿಸಿ ಮೂತ್ರ ನೆಕ್ಕುವಂತೆ ಒತ್ತಾಯಿಸಲಾಗಿದೆ.
ದೌರ್ಜನ್ಯಕ್ಕೆ ಒಳಗಾದ ವೃದ್ಧ ದಲಿತ ವ್ಯಕ್ತಿ ಈ ಬಗ್ಗೆ ಮಾತನಾಡಿದ್ದು, "ಅವರು ನನ್ನನ್ನು ಮೂತ್ರ ನೆಕ್ಕುವಂತೆ ಒತ್ತಾಯಿಸಿದರು. ನಾನು ಹಾಗೆ ಮಾಡಲು ನಿರಾಕರಿಸಿದಾಗ, ನನ್ನನ್ನು ಇನ್ನೂ ಹೆಚ್ಚು ಬಲವಂತಪಡಿಸಿದರು. ಅವರು ನನ್ನನ್ನು ಒದ್ದು ಹೊರಟುಹೋದರು. ನಂತರ, ಹಲವಾರು ನಾಯಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಯಾವುದೇ ಪೂರ್ವ ದ್ವೇಷವಿರಲಿಲ್ಲ. ನಾವು ದೇವಸ್ಥಾನವಿರುವ ಶಾಂತಿಯುತ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಜನರು ಕತ್ರಾ ಬಜಾರ್ ಪ್ರದೇಶದ ಬಳಿ ವಾಸಿಸುತ್ತಿದ್ದಾರೆ." ಎಂದು ಹೇಳಿದ್ದಾರೆ.
ದೀಪಾವಳಿಯಂದು ಲಕ್ನೋದ ಹೊರವಲಯದಲ್ಲಿರುವ ದೇವಸ್ಥಾನದ ಬಳಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ವೃದ್ಧ ದಲಿತ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ನೆಲ ನೆಕ್ಕುವಂತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಲಾಗಿದ್ದು, 60 ವರ್ಷದ ದಲಿತ ವ್ಯಕ್ತಿಯ ಮೊಮ್ಮಗ ತನ್ನ ಅಜ್ಜನಿಗೆ ಉಸಿರಾಟದ ತೊಂದರೆ ಇದೆ ಮತ್ತು ಕೆಮ್ಮುವಾಗ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ದಲಿತ ವ್ಯಕ್ತಿಯನ್ನು ನೆಲ ಮುಟ್ಟುವಂತೆ ಮಾತ್ರ ಒತ್ತಾಯಿಸಲಾಗಿದೆ ಎಂದು ಘಟನೆಯ ಆರೋಪಿಗಳು ಹೇಳಿದ್ದಾರೆ. ಈ ಘಟನೆ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು; ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ನಿನ್ನೆ ಸಂಜೆ ನಾನು ಲಕ್ನೋದ ಕಾಕೋರಿ ಪ್ರದೇಶದ ಶೀತ್ಲಾ ಮಾತಾ ಮಂದಿರದಲ್ಲಿ ನೀರು ಕುಡಿಯುತ್ತಿದ್ದಾಗ ಸ್ವಾಮಿ ಕಾಂತ್ ನನ್ನ ವಿರುದ್ಧ ಮೂತ್ರ ವಿಸರ್ಜನೆ ಮಾಡಿರುವುದಾಗಿ ಆರೋಪಿಸಿದರು.
"ನಾನು ಮೂತ್ರ ವಿಸರ್ಜಿಸಿಲ್ಲ ಎಂದು ಹೇಳಿದೆ, ಮತ್ತು ಅಲ್ಲಿ ನೀರು ಬಿದ್ದಿದೆ. ಆದರೆ, ಆತ (ಪಮ್ಮು) ಸುಮ್ಮನಾಗದೆ, ನನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ಆತ ನನ್ನನ್ನು ಬೆದರಿಸಿ ನೆಲ ನೆಕ್ಕುವಂತೆ ಒತ್ತಾಯಿಸಿದರು" ಎಂದು ದೂರುದಾರರು ಮಂಗಳವಾರ ಪೊಲೀಸರಿಗೆ ತಿಳಿಸಿದ್ದಾರೆ.
ರಾಂಪಾಲ್ ರಾವತ್ ಅವರ ಮೊಮ್ಮಗ ಮುಖೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, "ನನ್ನ ಅಜ್ಜನಿಗೆ ಉಸಿರಾಟದ ತೊಂದರೆ ಇದೆ. ಅವರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ಅವರು ಬದುಕುಳಿಯುವುದಿಲ್ಲ. ನಿನ್ನೆ ಸಂಜೆ, ಅವರು ಕೆಮ್ಮಲು ಪ್ರಾರಂಭಿಸಿದರು, ಮತ್ತು ಅವರು ಆಕಸ್ಮಿಕವಾಗಿ ಮೂತ್ರ ವಿಸರ್ಜಿಸಿರಬಹುದು. ಇದಾದ ನಂತರ, ಪಮ್ಮು ಅಲ್ಲಿಗೆ ಬಂದು ನನ್ನ ಅಜ್ಜನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ" ಎಂದು ಮುಖೇಶ್ ಕುಮಾರ್ ಹೇಳಿದ್ದಾರೆ.
Advertisement