Kurnool Bus Fire- ಬಸ್ಸಿನ ಸೀಟುಗಳನ್ನು ಅಕ್ರಮವಾಗಿ ಸ್ಲೀಪರ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು: ದಾಖಲೆಗಳಿಂದ ಬಹಿರಂಗ

ಸರಿಯಾದ ಅನುಮತಿಯಿಲ್ಲದೆ ಬಸ್ ನ್ನು ಸ್ಲೀಪರ್ ಸೀಟುಗಳಾಗಿ ಆಗಿ ಪರಿವರ್ತಿಸಲಾಗಿತ್ತು. ಇದನ್ನು ಸರಿಯಾದ ದಾಖಲೆಗಳಿಲ್ಲದೆ ರಾಜ್ಯ, ಹೊರರಾಜ್ಯಗಳಲ್ಲಿ ಸಂಚಾರ ನಡೆಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
Bus completely burnt
ಬಸ್ ಸಂಪೂರ್ಣ ಸುಟ್ಟುಹೋಗಿರುವುದು
Updated on

ವಿಜಯವಾಡ: ನಿನ್ನೆ ಶುಕ್ರವಾರ ಮುಂಜಾನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರ್ ಗ್ರಾಮದ ಬಳಿ ಭೀಕರ ಬೆಂಕಿ ಅವಘಡಕ್ಕೆ ಸಂಪೂರ್ಣ ಸುಟ್ಟುಹೋಗಿ 21 ಮಂದಿಯ ಸಾವಿಗೆ ಕಾರಣವಾದ ವೇಮುರಿ ವಿನೋದ್ ಕುಮಾರ್ ಒಡೆತನದ ವೇಮುರಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಹಲವಾರು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ.

ಸರಿಯಾದ ಅನುಮತಿಯಿಲ್ಲದೆ ಬಸ್ ನ್ನು ಸ್ಲೀಪರ್ ಸೀಟುಗಳಾಗಿ ಆಗಿ ಪರಿವರ್ತಿಸಲಾಗಿತ್ತು. ಇದನ್ನು ಸರಿಯಾದ ದಾಖಲೆಗಳಿಲ್ಲದೆ ರಾಜ್ಯ, ಹೊರರಾಜ್ಯಗಳಲ್ಲಿ ಸಂಚಾರ ನಡೆಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಅಧಿಕೃತ ದಾಖಲೆಗಳ ಪ್ರಕಾರ, DD01 N9490 ನೋಂದಣಿ ಸಂಖ್ಯೆ ಹೊಂದಿರುವ ಬಸ್ ನ್ನು ವೇಮುರಿ ಕಾವೇರಿ ಟ್ರಾವೆಲ್ಸ್‌ನ ಮಾಲೀಕ ವೇಮುರಿ ವಿನೋದ್ ಕುಮಾರ್ ಒಡೆತನದಲ್ಲಿತ್ತು. ಇದನ್ನು ಮೇ 2, 2018 ರಂದು ಖರೀದಿಸಲಾಗಿತ್ತು.

Bus completely burnt
Kurnool Bus Fire: ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಮೂಲದ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಡಿಯು-ಡಮನ್ ನಲ್ಲಿ ನೋಂದಾಯಿಸಲಾಗಿದೆ. ಏಪ್ರಿಲ್ 29, 2025 ರಂದು, ನೋಂದಣಿಯನ್ನು ಒಡಿಶಾದ ರಾಯಗಡ RTO ಗೆ ಜಿ ಬಿಜಯ ಲಕ್ಷ್ಮಿ ಹೆಸರಿನಲ್ಲಿ ವರ್ಗಾಯಿಸಲಾಗಿತ್ತು. ವಿಳಾಸವನ್ನು ಪರಿಶೀಲಿಸಿರಲಿಲ್ಲ ಎಂದು ಗೊತ್ತಾಗಿದೆ.

ಹೆಚ್ಚಿನ ಪರಿಶೀಲನೆಯಲ್ಲಿ ಒಡಿಶಾ ಅಧಿಕಾರಿಗಳು ನೀಡಿದ ಮೂಲ (ಪ್ರವಾಸಿ) ಪರವಾನಗಿಯು ಮೇ 1, 2025 ರಿಂದ ಏಪ್ರಿಲ್ 30, 2030 ರವರೆಗೆ ಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಸಿಲ್ವಾಸ್ಸಾ (ಡಿಯು-ದಮನ್) ಅಧಿಕಾರಿಗಳು ನೀಡಿದ ಫಿಟ್‌ನೆಸ್ ಪ್ರಮಾಣಪತ್ರವು ಮಾರ್ಚ್ 31, 2027 ರವರೆಗೆ ಮಾನ್ಯವಾಗಿದೆ. ವಿಮೆ, ಫಿಟ್‌ನೆಸ್ ಮತ್ತು ರಸ್ತೆ ತೆರಿಗೆಯಂತಹ ದಾಖಲೆಗಳನ್ನು ಹೊಂದಿದ್ದರೂ, ಬಸ್ ನ್ನು ಸೀಟರ್ ಕೋಚ್ ಆಗಿ ನೋಂದಾಯಿಸಲಾಗಿದೆ ಎಂದು ಗುರುತಿಸಲು ಅಧಿಕಾರಿಗಳು ವಿಫಲರಾಗಿದ್ದರು. ನಂತರ ಅದನ್ನು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸದೆ ಸ್ಲೀಪರ್ ಸೀಟುಗಳಾಗಿ ಮಾರ್ಪಡಿಸಲಾಯಿತು.

ರಾಯಗಡ ಆರ್‌ಟಿಎ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಅಕ್ರಮ ಬಯಲಿಗೆ ಬಂದಿದೆ.

ಪ್ರಯಾಣಿಕರ ಸುರಕ್ಷತೆ ಪ್ರಶ್ನೆ

ಬಸ್ ನ್ನು ಸ್ಲೀಪರ್ ಸೀಟುಗಳಾಗಿ ಪರಿವರ್ತಿಸುವ ಬಗ್ಗೆ ತಮಗೆ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಲಭ್ಯವಿದ್ದ ದಾಖಲೆಗಳ ಪ್ರಕಾರ ಅನುಮೋದನೆ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

APSRTC ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಿ ಹೆಚ್ ದ್ವಾರಕಾ ತಿರುಮಲ ರಾವ್ ಅವರ ಪ್ರಕಾರ, ಬಸ್ ನಿರ್ಮಾಣವು ನಿರ್ದಿಷ್ಟ ಎಂಜಿನಿಯರಿಂಗ್ ನಿಯತಾಂಕಗಳನ್ನು ಅನುಸರಿಸಬೇಕಾದ ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ನಿರ್ವಾಹಕರು ತಮ್ಮದೇ ಆದ ಆಸನ ಅಥವಾ ಮಲಗುವ ವ್ಯವಸ್ಥೆಗಳನ್ನು ಬದಲಾಯಿಸಬಾರದು. ಪ್ರತಿಯೊಂದು ವಿನ್ಯಾಸವು ತೂಕ ವಿತರಣೆ, ರಚನಾತ್ಮಕ ಸಮತೋಲನ, ತುರ್ತು ನಿರ್ಗಮನಗಳು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಮತ್ತು ಪ್ರಯಾಣಿಕರ ಸೌಕರ್ಯ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.

Bus completely burnt
ಕರ್ನೂಲ್ ಬಸ್ ದುರಂತ: ಇಂತಹ ದುರ್ಘಟನೆ ಪದೇ ಪದೇ ಮರುಕಳಿಸುತ್ತಿದ್ದು, ಸೂಕ್ತ ಕ್ರಮದ ಅಗತ್ಯವಿದೆ- ಕಾಂಗ್ರೆಸ್


ಆಂಧ್ರ ಪ್ರದೇಶ ಸರ್ಕಾರಿ ಬಸ್‌ಗಳಿಗೆ ಹೋಲಿಸಿದರೆ, ಹೆಚ್ಚಿನ ಖಾಸಗಿ ವಾಹನಗಳು ಆಸನಗಳ ನಡುವಿನ ಜಾಗವನ್ನು ಕಡಿಮೆ ಮಾಡುತ್ತವೆ. ಹೆಚ್ಚುವರಿ ಬರ್ತ್‌ಗಳು ಅಥವಾ ಸಾಲುಗಳನ್ನು ಹೊಂದಿರುತ್ತವೆ. ಪ್ರಯಾಣಿಕರ ಸಾಮರ್ಥ್ಯ ಮತ್ತು ಆದಾಯವನ್ನು ಹೆಚ್ಚಿಸಲು ಮೂಲ ವಿನ್ಯಾಸ ರಚನೆಗಳನ್ನು ಉಲ್ಲಂಘಿಸುತ್ತವೆ.

ಹಲವಾರು ಖಾಸಗಿ ನಿರ್ವಾಹಕರು ಈ ರೀತಿ ನಿಯಮ ಉಲ್ಲಂಘಿಸುವುದು ಕಂಡುಬರುತ್ತದೆ. ಪ್ರಯಾಣಿಕರ ಸುರಕ್ಷತೆಗಿಂತ ಖಾಸಗಿ ಬಸ್ ಮಾಲೀಕರಿಗೆ ಹಣವೇ ಮುಖ್ಯವಾಗುತ್ತದೆ. ಅನೇಕ ಖಾಸಗಿ ನಿರ್ವಾಹಕರು ಅನರ್ಹ ಚಾಲಕರನ್ನು ನೇಮಿಸಿಕೊಳ್ಳುತ್ತಾರೆ. ಅಕ್ರಮವಾಗಿ ಮಾರ್ಪಡಿಸಿದ ಬಸ್‌ಗಳಿಗೆ ಅನುಮೋದನೆಗಳನ್ನು ಪಡೆಯಲು ಆರ್ ಟಿಎ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಅನಧಿಕೃತ ವಿನ್ಯಾಸಗಳು ವಾಹನಗಳನ್ನು ರಚನಾತ್ಮಕವಾಗಿ ಅಸ್ಥಿರಗೊಳಿಸುತ್ತವೆ ಮತ್ತು ಅಪಘಾತಗಳಲ್ಲಿ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com