ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಉದ್ವಿಗ್ನ ಪರಿಸ್ಥಿತಿ!

ಮುಸ್ತಕೀಮ್, ಗುಲ್ ಮೊಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಎಂಬ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಉದ್ವಿಗ್ನ ಪರಿಸ್ಥಿತಿ!
Updated on

ಲಖನೌ: ಉತ್ತರ ಪ್ರದೇಶದ ಅಲಿಗಢದಲ್ಲಿ ಶನಿವಾರ ಭಗವಾನ್‌ಪುರ ಮತ್ತು ಬುಲಕಿಗಢ ಗ್ರಾಮಗಳ 5 ದೇವಾಲಯಗಳ ಗೋಡೆಗಳ ಮೇಲೆ "ಐ ಲವ್ ಮುಹಮ್ಮದ್" ಎಂಬ ಬರಹಗಳು ಕಂಡುಬಂದಿದ್ದು ಉದ್ವಿಗ್ನತೆ ಹೆಚ್ಚಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿ, ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅಪರಾಧಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ತಕೀಮ್, ಗುಲ್ ಮೊಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಎಂಬ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಮತ್ತು ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದೇವೆ. ಯಾವುದೇ ತಪ್ಪಿತಸ್ಥ ವ್ಯಕ್ತಿಯನ್ನು ಬಿಡಲಾಗುವುದಿಲ್ಲ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ನೀರಜ್ ಕುಮಾರ್ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಸಂಭಾವ್ಯ ಭೂ ವಿವಾದದ ಕೋನದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಈ ವಿಷಯದಲ್ಲಿ ಪೊಲೀಸ್ ದೂರು ದಾಖಲಿಸಿದ ಕರ್ಣಿ ಸೇನೆಯ ಅಖಿಲ ಭಾರತ ಉಪಾಧ್ಯಕ್ಷ ಜ್ಞಾನೇಂದ್ರ ಸಿಂಗ್ ಚೌಹಾಣ್, ಸ್ಥಳೀಯ ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಘಟನೆಯನ್ನು ವರದಿ ಮಾಡಿದ ಗ್ರಾಮಸ್ಥರನ್ನು ಪೊಲೀಸರು ಆರಂಭದಲ್ಲಿ ಬಂಧಿಸಿದ್ದಾರೆ ಎಂದು ಚೌಹಾಣ್ ಆರೋಪಿಸಿದ್ದಾರೆ. "ವಿಷಯವನ್ನು ತಣ್ಣಗೆ ಮಾಡಲು" ಪೊಲೀಸ್ ಸಿಬ್ಬಂದಿ ದೇವಾಲಯದ ಗೋಡೆಗಳಿಂದ ಘೋಷಣೆಗಳನ್ನು ಅಳಿಸಿಹಾಕಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಯೋಗಿಯ ನಾಡಿನಲ್ಲಿ ಒಂದಲ್ಲ 5 ದೇವಾಲಯಗಳ ಮೇಲೆ I love Muhammad ಗೋಡೆ ಬರಹ; ಉದ್ವಿಗ್ನ ಪರಿಸ್ಥಿತಿ!
'ಇಸ್ಲಾಂ ರಾಜಕೀಯ' ಸನಾತನ ಧರ್ಮಕ್ಕೆ ಅತ್ಯಂತ ಅಪಾಯಕಾರಿ; ಹಲಾಲ್ ಬಗ್ಗೆ ಎಚ್ಚರ: ಸಿಎಂ ಯೋಗಿ ಆದಿತ್ಯನಾಥ್

ಸೆಪ್ಟೆಂಬರ್ 4 ರಂದು ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಘೋಷಣೆಯೊಂದಿಗೆ ಫಲಕಗಳನ್ನು ಅಳವಡಿಸಿದ್ದಕ್ಕಾಗಿ ಕಾನ್ಪುರದಲ್ಲಿ ಪೊಲೀಸರು 24 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ 'ಐ ಲವ್ ಮುಹಮ್ಮದ್' ಗೀಚುಬರಹ ಮತ್ತು ಪೋಸ್ಟರ್‌ಗಳ ವಿವಾದ ಭುಗಿಲೆದ್ದಿತು. ಪೊಲೀಸರ ಈ ಕ್ರಮ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com