

ಹೈದರಾಬಾದ್: ಕರ್ನೂಲ್ ಜಿಲ್ಲೆಯಲ್ಲಿ ನಡೆದ ಭೀಕರ ವಿ ಕಾವೇರಿ ಟ್ರಾವೆಲ್ಸ್ ಬಸ್ ಅಪಘಾತ ತೀವ್ರ ದುಖಃವನ್ನುಂಟು ಮಾಡಿತ್ತು. ಹೈದರಾಬಾದ್ ಪೊಲೀಸ್ ಆಯುಕ್ತ ಮತ್ತು ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅಪಘಾತಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ನಿರ್ಲಕ್ಷ್ಯದ ಬಗ್ಗೆ ಅವರು ಸಂವೇದನಾಶೀಲ ಹೇಳಿಕೆ ನೀಡಿದ್ದು ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು ಎಂದು ಹೇಳಿದ್ದಾರೆ.
ಹೈದರಾಬಾದ್ ಸಿಪಿ ಸಜ್ಜನರ್ ಅವರು, ಕೇವಲ ಒಬ್ಬ ವ್ಯಕ್ತಿಯ ನಿರ್ಲಕ್ಷ್ಯದಿಂದಾಗಿ 20 ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಮೃತರು ಮತ್ತು ಅವರ ಕುಟುಂಬಗಳು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಅವರು ಉಲ್ಲೇಖಿಸಿದರು. ಕುಡಿದು ವಾಹನ ಚಲಾಯಿಸುವವರು ಮಾನವ ಬಾಂಬ್‌ಗಳು ಎಂದು ಹೇಳಿದ್ದಾರೆ.
ಮದ್ಯದ ಅಮಲಿನಲ್ಲಿ ತಮ್ಮ ವಾಹನಗಳಲ್ಲಿ ರಸ್ತೆಗೆ ಬಂದು ಅಮಾಯಕರ ಜೀವವನ್ನು ತೆಗೆಯುವವರು, ಭಯೋತ್ಪಾದಕರು ಮತ್ತು ಮಾನವ ಬಾಂಬ್‌ಗಳಲ್ಲದಿದ್ದರೆ ಅವರು ಇನ್ನೇನು ಎಂದು ಪ್ರಶ್ನಿಸಿದರು. ನಿಮ್ಮ ಮಸ್ತಿಗಾಗಿ ನೀವು ಇತರರ ಜೀವವನ್ನು ತೆಗೆದುಕೊಳ್ಳುತ್ತೀರಾ? ನಿಮ್ಮ ಮೋಜು ಮತ್ತು ಮಸ್ತಿಗಾಗಿ ಇತರರ ಜೀವ ತೆಗೆಯುವ ಹಕ್ಕು ನಿಮಗೆ ಯಾರು ಕೊಟ್ಟರು? ಎಂದು ಅವರು ಪ್ರಶ್ನಿಸಿದರು. ಸಜ್ಜನರ್ ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ಹಾನಿ ಮತ್ತು ಅದರ ಹಿಂದಿನ ಸಾಮಾಜಿಕ ಬೇಜವಾಬ್ದಾರಿಯನ್ನು ಎತ್ತಿ ತೋರಿಸಿದರು.
ಕಳೆದ ಶುಕ್ರವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ವಿ ಕಾವೇರಿ ಟ್ರಾವೆಲ್ಸ್ ಬಸ್ ಅಪಘಾತಕ್ಕೀಡಾಯಿತು. ಪಲ್ಸರ್ ಬೈಕ್ ಅನ್ನು ಎಳೆದುಕೊಂಡು ಹೋದ ನಂತರ ಬೆಂಕಿ ಕಾಣಿಸಿಕೊಂಡು ಬಸ್‌ನಲ್ಲಿದ್ದ 19 ಜನರು ಜೀವಂತವಾಗಿ ಸುಟ್ಟುಹೋದರು ಎಂದು ತಿಳಿದುಬಂದಿದೆ. ಕರ್ನೂಲು ಜಿಲ್ಲೆಯ ಚಿನ್ನಟೇಕುರು ಮತ್ತು ಚೆಟ್ಲಮಲ್ಲಪುರಂ ನಡುವೆ ಈ ದುರಂತ ಸಂಭವಿಸಿತ್ತು. ಮೃತರಲ್ಲಿ 13 ಮಂದಿ ಯುವಕರು ಮತ್ತು ಮಹಿಳೆಯರು ಸೇರಿದ್ದಾರೆ. ಡಿಎನ್ಎ ಪರೀಕ್ಷೆಗಳನ್ನು ನಡೆಸಿದ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ.
Advertisement