

ಮುಂಬೈ: ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು(SEC) ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ಪರಿಷ್ಕರಿಸಿದೆ.
ಎಂಟು ವರ್ಷಗಳ ಅಂತರದ ನಂತರ ಚುನಾವಣಾ ವೆಚ್ಚ ಮಿತಿ ಪರಿಷ್ಕರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರಾಜ್ಯದ ಮೂರು ಎ ವರ್ಗದ ಮಹಾನಗರ ಪಾಲಿಕೆಗಳಾದ ಮುಂಬೈ, ಪುಣೆ ಮತ್ತು ನಾಗ್ಪುರಕ್ಕೆ ಪ್ರತಿ ಅಭ್ಯರ್ಥಿಗೆ 15 ಲಕ್ಷ ರೂ. ಮತ್ತು ಬಿ ವರ್ಗದ ನಗರ ಪಾಲಿಕೆಗಳಾದ ಪಿಂಪ್ರಿ ಚಿಂಚ್‌ವಾಡ್, ನಾಸಿಕ್ ಮತ್ತು ಥಾಣೆಯಲ್ಲಿ ಅಭ್ಯರ್ಥಿಗಳ ವೆಚ್ಚವನ್ನು ತಲಾ 13 ಲಕ್ಷ ರೂ. ಹೆಚ್ಚಿಸಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಕಲ್ಯಾಣ್ ಡೊಂಬಿವಲಿ, ನವಿ ಮುಂಬೈ, ಛತ್ರಪತಿ ಸಂಭಾಜಿನಗರ ಮತ್ತು ವಸಾಯಿ ವಿರಾರ್‌ನಂತಹ ಸಿ ವರ್ಗದ ನಗರ ಪಾಲಿಕೆಗಳಿಗೆ 11 ಲಕ್ಷ ರೂ. ಮತ್ತು ಉಳಿದ ಡಿ ವರ್ಗದ 19 ಪುರಸಭೆಳಿಗೆ 9 ಲಕ್ಷ ರೂ. ಮಿತಿಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
"ಕೌನ್ಸಿಲ್ ಅಧ್ಯಕ್ಷರ ನೇರ ಚುನಾವಣೆಗೆ ಎ ಕ್ಲಾಸ್ ನಗರ ಪರಿಷತ್‌ಗಳಿಗೆ 15 ಲಕ್ಷ ರೂ. ಮತ್ತು ಸದಸ್ಯರಿಗೆ 5 ಲಕ್ಷ ರೂ. ವೆಚ್ಚದ ಮಿತಿ ಇರುತ್ತದೆ. ಬಿ ಕ್ಲಾಸ್ ನಗರ ಪರಿಷತ್‌ಗಳಿಗೆ, ಕೌನ್ಸಿಲ್ ಅಧ್ಯಕ್ಷರ ಚುನಾವಣೆಗೆ 11.25 ಲಕ್ಷ ರೂ. ಮತ್ತು ಸದಸ್ಯರಿಗೆ 3.5 ಲಕ್ಷ ರೂ. ವೆಚ್ಚದ ಮಿತಿ ಇರುತ್ತದೆ. ಪರಿಷತ್ತಿನ ಅಧ್ಯಕ್ಷರ ನೇರ ಚುನಾವಣೆಗೆ 7.5 ಲಕ್ಷ ರೂ. ಮತ್ತು ಸಿ ಕ್ಲಾಸ್ ನಗರ ಪರಿಷತ್‌ಗಳಲ್ಲಿ ಸದಸ್ಯರಿಗೆ 2.5 ಲಕ್ಷ ರೂ. ವೆಚ್ಚದ ಮಿತಿ ಇರುತ್ತದೆ" ಎಂದು ಆಯೋಗ ತಿಳಿಸಿದೆ.
Advertisement