ನಾಳೆ ಮಧ್ಯಾಹ್ನದೊಳಗೆ ಮುಂಬೈನ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಿ: ಜಾರಂಗೆಗೆ ಬಾಂಬೆ ಹೈಕೋರ್ಟ್

ಮಂಗಳವಾರ ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸಬೇಕು ಮತ್ತು ನಗರದ ಎಲ್ಲಾ ಬೀದಿಗಳನ್ನು ಖಾಲಿ ಮಾಡುವಂತೆ ಜಾರಂಗೆ ಹಾಗೂ ಅವರ ಬೆಂಬಲಿಗರಿಗೆ ಹೈಕೋರ್ಟ್ ಆದೇಶಿಸಿದೆ.
Manoj Jarange
ಮನೋಜ್ ಜಾರಂಗೆ
Updated on

ಮುಂಬೈ: ಮನೋಜ್ ಜಾರಂಗೆ ನೇತೃತ್ವದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟದಿಂದಾಗಿ ಇಡೀ ಮುಂಬೈ ನಗರ ಸ್ತಬ್ಧಗೊಂಡಿದೆ ಮತ್ತು ಪ್ರತಿಭಟನೆ ಶಾಂತಿಯುತವಾಗಿಲ್ಲ ಹಾಗೂ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ.

ಮುಂಬೈನಲ್ಲಿ ಸಾಮಾನ್ಯ ಸ್ಥಿತಿ ಮರಳಬೇಕೆಂದ ಹೈಕೋರ್ಟ್, ಮಂಗಳವಾರ ಮಧ್ಯಾಹ್ನದೊಳಗೆ ಪರಿಸ್ಥಿತಿಯನ್ನು ಸರಿಪಡಿಸಬೇಕು ಮತ್ತು ನಗರದ ಎಲ್ಲಾ ಬೀದಿಗಳನ್ನು ಖಾಲಿ ಮಾಡುವಂತೆ ಜಾರಂಗೆ ಹಾಗೂ ಅವರ ಬೆಂಬಲಿಗರಿಗೆ ಆದೇಶಿಸಿದೆ.

ಇತರ ಹಿಂದುಳಿದ ವರ್ಗಗಳ(ಒಬಿಸಿ) ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಾ ಸಮುದಾಯಕ್ಕೆ ಶೇಕಡಾ 10 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಕಳೆದ ಶುಕ್ರವಾರದಿಂದ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Manoj Jarange
ಮರಾಠ ಮೀಸಲಾತಿ ಹೋರಾಟ: ನಾಳೆಯಿಂದ ನೀರನ್ನೂ ಕುಡಿಯುವುದಿಲ್ಲ; ಜಾರಂಗೆ ಎಚ್ಚರಿಕೆ

ಸೋಮವಾರದಿಂದ ಜಾರಂಗೆ ಅವರು ನೀರು ಕುಡಿಯುವುದನ್ನೂ ನಿಲ್ಲಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಕದ್ ಅವರ ಪೀಠವು, ಪ್ರತಿಭಟನಾಕಾರರು ಗೊತ್ತುಪಡಿಸಿದ ಸ್ಥಳವಾದ ಆಜಾದ್ ಮೈದಾನದಲ್ಲೇ ಧರಣಿ ನಡೆಸಬೇಕು. ನಗರದ ಎಲ್ಲಾ ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‌ಎಂಟಿ) ಮತ್ತು ಚರ್ಚ್‌ಗೇಟ್ ರೈಲು ನಿಲ್ದಾಣ, ಮರೀನ್ ಡ್ರೈವ್ ವಾಯುವಿಹಾರಿ ಮತ್ತು ಹೈಕೋರ್ಟ್ ಕಟ್ಟಡದಂತಹ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com