
ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಭಾರತದ ಗಡಿಗಳನ್ನು ಕಾಯುತ್ತಿರುವ ಬಿಎಸ್‌ಎಫ್, ರಿಮೋಟ್-ನಿಯಂತ್ರಿತ ವೈಮಾನಿಕ ವೇದಿಕೆಗಳನ್ನು ಒಳಗೊಂಡ ಆಧುನಿಕ ಯುದ್ಧಕ್ಕಾಗಿ "ಡ್ರೋನ್ ಕಮಾಂಡೋಗಳು" ಮತ್ತು "ಡ್ರೋನ್ ಯೋಧರು" ಎಂಬ ವಿಶೇಷ ಘಟಕಗಳಿಗೆ ತರಬೇತಿ ನೀಡುತ್ತಿದೆ. ಆಪರೇಷನ್ ಸಿಂಧೂರ್‌ನಂತಹ ಕಾರ್ಯಾಚರಣೆಗಳಲ್ಲಿ ಅವರನ್ನು ನಿಯೋಜಿಸಲು ಬಿಎಸ್ಎಫ್ ಯೋಜಿಸಿದೆ.
ಮಧ್ಯಪ್ರದೇಶದ ಟೆಕನ್‌ಪುರದಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಅವರು ಮಂಗಳವಾರ 'ಡ್ರೋನ್ ಯುದ್ಧ ಶಾಲೆ'ಯನ್ನು ಉದ್ಘಾಟಿಸಿದರು.
"ಡ್ರೋನ್ ಯುದ್ಧ ಶಾಲೆಯು ಆಧುನಿಕ ಕಾರ್ಯತಂತ್ರದ ಸವಾಲುಗಳನ್ನು ಎದುರಿಸುವಲ್ಲಿ ಗಡಿ ಕಾವಲು ಪಡೆಗಳಿಗೆ ವಿಶೇಷ ತರಬೇತಿಯನ್ನು ನೀಡುತ್ತದೆ" ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ.
"ಮಾನವರಹಿತ ವೈಮಾನಿಕ ವಾಹನ(ಯುಎವಿ) ಕಾರ್ಯಾಚರಣೆಗಳು, ಡ್ರೋನ್ ವಿರೋಧಿ ಯುದ್ಧ ಮತ್ತು ಕಣ್ಗಾವಲು ಹಾಗೂ ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಒಳಗೊಂಡಿರುವ ಐದು ವಿಶೇಷ ಕೋರ್ಸ್‌ಗಳೊಂದಿಗೆ ಡ್ರೋನ್ ಕಮಾಂಡೋಗಳು ಮತ್ತು ಡ್ರೋನ್ ಯೋಧರನ್ನು ಸಿದ್ಧಪಡಿಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಶಾಲೆಯ ಉದ್ಘಾಟನೆಯ ನಂತರ, ತರಬೇತಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ಎಫ್ ಡಿಜಿ, ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದರು. ಅಲ್ಲಿ ಡ್ರೋನ್‌ಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.
Advertisement