Ukraine destroys 2 Russian bridges
ಉಕ್ರೇನ್ ದಾಳಿಯ ಚಿತ್ರ

Ukraine: ಖಾರ್ಕಿವ್ ಗಡಿ ಬಳಿ ಉಕ್ರೇನ್ ಡ್ರೋನ್ ದಾಳಿ; ರಷ್ಯಾದ ಎರಡು ಸೇತುವೆ ಉಡೀಸ್!

ರಷ್ಯಾ ಪಡೆಗಳು ತಮ್ಮ ಕಾರ್ಯತಂತ್ರದ ಪ್ರಮುಖ ಸ್ಥಳವನ್ನಾಗಿ ಮಾಡಿಕೊಂಡಿದ್ದ ಸೇತುವೆಗಳನ್ನು ಉಕ್ರೇನಿಯನ್ ಮಿಲಿಟರಿ ಪಡೆಗಳು ಹಠಾತ್ ದಾಳಿ ನಡೆಸಿ ನಾಶಪಡಿಸಿವೆ.
Published on

ಮಾಸ್ಕೋ: ರಷ್ಯಾ- ಉಕ್ರೇನ್ ನಡುವಿನ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಗ್ಗದ ಡ್ರೋನ್ ಬಳಸುವುದರೊಂದಿಗೆ ರಷ್ಯಾದ ಎರಡು ಸೇತುವೆಗಳನ್ನು ಉಕ್ರೇನ್ ಉಡೀಸ್ ಮಾಡಿದೆ. ರಷ್ಯಾದ ಪಡೆಗಳು ಅಲ್ಲಿ ಅಡಗಿಸಿಟ್ಟಿದ್ದ ಗಣಿ ಮತ್ತು ಮದ್ದುಗುಂಡುಗಳ ದಾಸ್ತಾನುಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.

ಈ ಸೇತುವೆಗಳು ಉಕ್ರೇನ್‌ನ ಖಾರ್ಕಿವ್ ಪ್ರದೇಶದ ಗಡಿಯ ಸಮೀಪದಲ್ಲಿದ್ದು, ರಷ್ಯಾ ತನ್ನ ಸೈನ್ಯವನ್ನು ಮರು ನಿಯೋಜಿಸಲು ಬಳಸುತ್ತಿದೆ ಎಂದು ಉಕ್ರೇನಿಯನ್ ಮಿಲಿಟರಿ ಮಾಹಿತಿ ನೀಡಿದೆ.

ರಷ್ಯಾ ಪಡೆಗಳು ತಮ್ಮ ಕಾರ್ಯತಂತ್ರದ ಪ್ರಮುಖ ಸ್ಥಳವನ್ನಾಗಿ ಮಾಡಿಕೊಂಡಿದ್ದ ಸೇತುವೆಗಳನ್ನು ಉಕ್ರೇನಿಯನ್ ಮಿಲಿಟರಿ ಪಡೆಗಳು ಹಠಾತ್ ದಾಳಿ ನಡೆಸಿ ನಾಶಪಡಿಸಿವೆ. ಶತ್ರುಗಳ ಚಲನವಲನ ತಡೆಯಲು ಸೇತುವೆಗಳು, ಹೆದ್ದಾರಿಗಳು ಮತ್ತು ಇತರ ಪ್ರಮುಖ ಮಾರ್ಗಗಗಳನ್ನು ನಾಶಪಡಿಸುವ ಹಾದಿಯಲ್ಲಿ ಮಿಲಿಟರಿ ಪಡೆಗಳು ತೊಡಗಿವೆ.

ಫೆಬ್ರವರಿ 2022 ರಲ್ಲಿ ರಷ್ಯಾದ ಪೂರ್ಣ-ಪ್ರಮಾಣದ ಆಕ್ರಮಣದ ಆರಂಭಿಕ ದಿನಗಳಲ್ಲಿ ಉಕ್ರೇನ್ ಸ್ವತಃ ಅಂತಹ ಕ್ರಮಗಳನ್ನು ಕೈಗೊಂಡಿತು. ಸೇತುವೆಗಳನ್ನು ನಾಶಪಡಿಸಿದಾಗ ರಷ್ಯಾದ ಯುದ್ಧದ ಗತಿ ನಿಧನಗೊಂಡಿತ್ತು ಅಲ್ಲದೇ ತನ್ನ ರಾಜಧಾನಿಯನ್ನು ರಕ್ಷಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಉಕ್ರೇನಿಯನ್ ಪಡೆಗಳು ರಷ್ಯಾ ಅಡಗಿಟ್ಟಿರುವ ಮದ್ದು, ಗುಂಡುಗಳ ರಹಸ್ಯ ತಿಳಿದುಕೊಂಡು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿತು ಎಂದು ಸಿಎನ್ಎನ್ ವರದಿ ಮಾಡಿದೆ.

ಉಕ್ರೇನ್‌ನ 58 ನೇ ಪ್ರತ್ಯೇಕ ಮೋಟಾರೈಸ್ಡ್ ಇನ್‌ಫ್ಯಾಂಟ್ರಿ ಬ್ರಿಗೇಡ್ ಈ ಕಾರ್ಯಾಚರಣೆ ನಡೆಸಿದೆ. ಸೇತುವೆಯೊಂದರ ಸುತ್ತಲೂ ಅನುಮಾನಾಸ್ಪದ ಚಟುವಟಿಕೆಯೊಂದನ್ನು ಉಕ್ರೇನ್ ಸೈನಿಕರು ನೋಡಿದಾಗ ಅಲ್ಲಿ ಏನೋ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಸೇತುವೆಯ ಕೆಳಗೆ ಡ್ರೋನ್ ಅನ್ನು ಹಾರಿಸಲು ನಮಗೆ ಸಾಧ್ಯವಾಗಲಿಲ್ಲ ಏಕೆಂದರೆ ಸಿಗ್ನಲ್ ಸಿಗುತ್ತಿರಲಿಲ್ಲ. ಆದ್ದರಿಂದ ನಾವು ಫೈಬರ್ ಆಪ್ಟಿಕ್ಸ್ ಹೊಂದಿದ ಅಗ್ಗದ ಡ್ರೋನ್ ದಾಳಿ ಮೂಲಕ ಸೇತುವೆ ನಾಶಪಡಿಸಿದೇವು ಎಂದು ಬ್ರಿಗೇಡ್ ನ ಪ್ರತಿನಿಧಿಯೊಬ್ಬರು ಹೇಳಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.

ದಾಳಿಯ ವಿಡಿಯೋ ದಾಖಲಾಗಿದ್ದು, ಡ್ರೋನ್ ಸೇತುವೆಯನ್ನು ಸಮೀಪಿಸುತ್ತಿರುವುದನ್ನು ತೋರಿಸುತ್ತದೆ. ಯುದ್ಧಸಾಮಗ್ರಿಗಳ ದೊಡ್ಡ ರಾಶಿಯನ್ನು ಕೂಡಾ ಬಹಿರಂಗಪಡಿಸುತ್ತದೆ. ಡ್ರೋನ್ ಸ್ಫೋಟಕಗಳ ಮೇಲೆ ಅಪ್ಪಳಿಸುತ್ತಿದ್ದಂತೆ ರೆಕಾರ್ಡಿಂಗ್ ಕಡಿತಗೊಳ್ಳುತ್ತದೆ. ಇದರಿಂದ ಭಾರಿ ಸ್ಪೋಟ ಉಂಟಾಗುತ್ತದೆ. ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ, ಉಕ್ರೇನಿಯನ್ ಗಡಿಯ ಸಮೀಪದಲ್ಲಿದೆ ಸೇತುವೆ ಇರುವುದನ್ನು ಸಿಎನ್ಎನ್ ದೃಢಪಡಿಸಿದೆ.

Ukraine destroys 2 Russian bridges
ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಆದಾದ ಬಳಿಕ ಮತ್ತೊಂದು ಸೇತುವೆ ಪರಿಶೀಲಿಸಿದ್ದೇವು. ಅಲ್ಲಿಯೂ ಮದ್ದು ಗುಂಡುಗಳ ಸಂಗ್ರಹ ನೋಡಿದ ನಂತರ ಅದನ್ನು ಉಡೀಸ್ ಮಾಡಿದ್ದೇವೆ. ಈ ಎರಡು ಸೇತುವೆಗಳ ನಾಶ ಉಕ್ರೇನ್ ಯಶಸ್ಸಿನ ಕಥೆಯನ್ನು ಗುರುತಿಸುತ್ತದೆ ಎಂದು ಬ್ರಿಗೇಡ್ ಪ್ರತಿನಿಧಿ ವಿವರಿಸಿದರು. ಉಕ್ರೇನ್ ಪ್ರಸ್ತುತ ಒತ್ತಡದಲ್ಲಿದೆ. ಒಂದು ಕಡೆ ಅಮೆರಿಕ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವುದೇ ಕದನ ವಿರಾಮ ಮಾತುಕತೆ ಮುಂದುವರೆಸುತ್ತಿದ್ದರೆ ಮತ್ತೊಂದು ಕಡೆ ರಷ್ಯಾದ ಪಡೆಗಳು ಅದಕ್ಕೆ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸುತ್ತಿಲ್ಲ. ಈ ಮಧ್ಯೆ ಮಾಸ್ಕೋ ಉಕ್ರೇನಿಯನ್ ನಗರಗಳ ಮೇಲೆ ಪ್ರತಿದಿನ ವಾಯುದಾಳಿ ನಡೆಸುತ್ತಿದೆ. ಇದರಿಂದ ಹಲವು ಜನರು ಸಾಯುತ್ತಿದ್ದು, ದೇಶದಾದ್ಯಂತ ಮೂಲಸೌಕರ್ಯಗಳನ್ನು ಧ್ವಂಸ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com