
ಗುರುಗ್ರಾಮ: ದೆಹಲಿ-ಎನ್‌ಸಿಆರ್‌ನಲ್ಲಿ ನಿರಂತರ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುರುಗ್ರಾಮ್-ದೆಹಲಿ ಹೆದ್ದಾರಿಯಲ್ಲಿ ಕಿ.ಮಿ. ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಈ ಮಧ್ಯೆ ವ್ಯಕ್ತಿಯೊಬ್ಬ ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ಮಾಡಿರುವ ಕೆಲಸದ ವಿಡಿಯೋವೊಂದು ವೈರಲ್ ಆಗಿದೆ. ಈ ವ್ಯಕ್ತಿ ಇನ್ನೋಬ್ಬರ ಸಹಾಯದಿಂದ ತನ್ನ ಹೆಗಲ ಮೇಲೆ ಸ್ಕೂಟರ್ ನ್ನು ಎತ್ತಿಕೊಂಡು ವಾಹನಗಳ ನಡುವೆ ಸಾಗುತ್ತಿರುವುದು ಕಂಡುಬಂದಿದೆ.
ಇಬ್ಬರು ವ್ಯಕ್ತಿಗಳು ಸ್ಕೂಟರ್ ನ್ನು ಈ ರೀತಿ ಎತ್ತಿಕೊಂಡು ಹೋಗುವ ದೃಶ್ಯ ನೋಡಿ ಅಲ್ಲಿದ್ದವರು ನಿಬ್ಬೆರಗಿನಿಂದ ನೋಡುತ್ತಿದ್ದರು.
ಇನ್ಸಾಟಾಗ್ರಾಮ್ ನಲ್ಲಿ ಬಳಕೆದಾರರೊಬ್ಬರು ಗುರುಗ್ರಾಮ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇದೊಂದೇ ಪರಿಹಾರ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ತಕ್ಷಣ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Advertisement