2022ರ ಬಳಿಕ ಸುದೀರ್ಘ ಪೂರ್ಣ ಚಂದ್ರಗ್ರಹಣ: ಸೆ. 7-8ರಂದು ಕರ್ನಾಟಕ ಸೇರಿ ಭಾರತದಾದ್ಯಂತ ಗೋಚರ, ಏನು ಮಾಡಬೇಕು!

2022ರ ಬಳಿಕ ಅತಿ ಉದ್ದದ ಪೂರ್ಣ ಚಂದ್ರಗ್ರಹಣ ಸೆಪ್ಟೆಂಬರ್ 7 ಮತ್ತು 8ರ ಮಧ್ಯದ ರಾತ್ರಿ ಸಂಭವಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. 2018ರ ಚಂದ್ರಗ್ರಹಣದ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರಗ್ರಹಣ ಕಾಣಸಿಗುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

2022ರ ಬಳಿಕ ಅತಿ ಉದ್ದದ ಪೂರ್ಣ ಚಂದ್ರಗ್ರಹಣ ಸೆಪ್ಟೆಂಬರ್ 7 ಮತ್ತು 8ರ ಮಧ್ಯದ ರಾತ್ರಿ ಸಂಭವಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. 2018ರ ಚಂದ್ರಗ್ರಹಣದ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರಗ್ರಹಣ ಕಾಣಸಿಗುವುದು ಇದೇ ಮೊದಲು ಎಂದು ಹೇಳಿದ್ದಾರೆ. ಮುಂದಿನ ಚಂದ್ರಗ್ರಹಣಕ್ಕಾಗಿ ನೀವು 2028ರ ಡಿಸೆಂಬರ್ 31ರವರೆಗೆ ಕಾಯಬೇಕಾಗುತ್ತದೆ ಎಂದು ಖಗೋಳಶಾಸ್ತ್ರ ಸೊಸೈಟಿ ಆಫ್ ಇಂಡಿಯಾ (ASI) ಯ ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ ಸಮಿತಿ (POEC) ಅಧ್ಯಕ್ಷೆ ಮತ್ತು ಪುಣೆಯ ರಾಷ್ಟ್ರೀಯ ರೇಡಿಯೋ ಖಗೋಳಭೌತಶಾಸ್ತ್ರ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ದಿವ್ಯಾ ಒಬೆರಾಯ್ ಹೇಳಿದ್ದಾರೆ.

ಗ್ರಹಣಗಳು ಅಪರೂಪ ಮತ್ತು ಪ್ರತಿ ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಸಂಭವಿಸುವುದಿಲ್ಲ. ಏಕೆಂದರೆ ಚಂದ್ರನ ಕಕ್ಷೆಯು ಸೂರ್ಯನ ಸುತ್ತ ಭೂಮಿಯ ಕಕ್ಷೆಗೆ ಸುಮಾರು 5 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದು ಚಂದ್ರನ ಮೇಲ್ಮೈ ಮೇಲೆ ತನ್ನ ನೆರಳು ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಸೆಪ್ಟೆಂಬರ್ 7ರಂದು ರಾತ್ರಿ 9:57 ಕ್ಕೆ ಚಂದ್ರನು, ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01 ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳ ವರೆಗೆ, ಅಂದರೆ 12:23ರವರೆಗೆ, ಮುಂದುವರಿದು ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರ ವರೆಗೆ ಮುಂದುವರಿಯುತ್ತದೆ.

ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ವಿಜ್ಞಾನ, ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ (ಸ್ಕೋಪ್) ವಿಭಾಗದ ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಂ, ಸೂರ್ಯ ಅಥವಾ ಚಂದ್ರನ ಮೇಲೆ ಭೂಮಿಯ ನೆರಳು ಸಂಪೂರ್ಣವಾಗಿ ಬಿದ್ದಾಗ ಅದು ಪೂರ್ಣವಾಗಿ ಮರೆಯಾಗುತ್ತದೆ. ಅಂದರೆ, ಭೂಮಿ, ಚಂದ್ರ ಮತ್ತು ಸೂರ್ಯವು ಒಂದೇ ನೇರಳೆರೇಖೆಯಲ್ಲಿ ಬಂದಾಗ ಈ ಖಗ್ರಾಸ ಗ್ರಹಣ ಉಂಟಾಗುತ್ತದೆ, ಮತ್ತು ಇದರಿಂದ ಭೂಮಿಯ ಮೇಲೆ ಸೂರ್ಯನ ಬೆಳಕು ಪೂರ್ಣವಾಗಿ ನಿರ್ಬಂಧಿತವಾಗುತ್ತದೆ. ಕಣ್ಣಿನಿಂದ ನೇರವಾಗಿ ಪತ್ತೆ ಮಾಡುವುದು ಕಷ್ಟ ಮತ್ತು ಬೈನಾಕ್ಯುಲರ್ ಅಥವಾ ದೂರದರ್ಶಕ ಬೇಕಾಗುತ್ತದೆ ಎಂದು ಹೇಳಿದರು.

ಸಂಗ್ರಹ ಚಿತ್ರ
Lunar Eclipse 2025: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ? ಸೂತಕ ಸಮಯ ಸೇರಿದಂತೆ 5 ವಿಶೇಷ ಸಂಗತಿ!

ಸೆಪ್ಟೆಂಬರ್ 7 ರಂದು ರಾತ್ರಿ 9.57ಕ್ಕೆ ಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿದಾಗ ಗಮನಾರ್ಹವಾದ ತಾಮ್ರ-ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಕೆಂಪು ಸೂರ್ಯನ ಬೆಳಕು ಭೂಮಿಯ ತೆಳುವಾದ ವಾತಾವರಣದ ಮೂಲಕ ಹಾದುಹೋಗುತ್ತದೆ. ಚಂದ್ರನನ್ನು ಬೆಳಗಿಸುತ್ತದೆ. ಆದರೆ ಬೆಳಕಿನ ನೀಲಿ ಭಾಗವು ಹಗಲಿನ ಆಕಾಶದಲ್ಲಿ ಹರಡುತ್ತದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದ ಮಾಜಿ ನಿರ್ದೇಶಕಿ ಬಿ ಎಸ್ ಶೈಲಜಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com