ತೇಜಸ್ವಿ ಯಾದವ್ ಪತ್ನಿ 'ಜೆರ್ಸಿ ಹಸು': ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ RJD ಮಾಜಿ ಶಾಸಕನ ಹೇಳಿಕೆ

ತೇಜಸ್ವಿ ಯಾದವ್ ಜಾತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಯಾದವ್ ಹುಡುಗಿಯನ್ನು ಮದುವೆಯಾಗಲಿಲ್ಲ. ಅವರು ಹರಿಯಾಣ-ಪಂಜಾಬ್‌ನಿಂದ ಜೆರ್ಸಿ ಹಸುವನ್ನು ಕರೆತಂದಿದ್ದಾರೆ .
Tejashwi Yadav And rajshri yadav
ತೇಜಸ್ವಿ ಯಾದವ್ ಮತ್ತು ರಾಜಶ್ರೀ ಯಾದವ್
Updated on

ಬಿಹಾರ: ಚುನಾವಣೆ ಹೊಸ್ತಿನಲ್ಲಿರುವ ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯ ಕೀಳು ಹೇಳಿಕೆ ಸದ್ದು ಮಾಡಿದ್ದು, ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿರಿ ಸೊಸೆ, ತೇಜಸ್ವಿ ಯಾದವ್ ಪತ್ನಿಯನ್ನು ಜೆರ್ಸಿ ಹಸು ಎಂದು ಮಾಜಿ ಶಾಸಕ ರಾಜವಲ್ಲಭ್ ಯಾದವ್ ನೀಡಿದ ವಿವಾದಾತ್ಮಕ ಹೇಳಿಕೆ ಬಿಹಾರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. .

ಮಾಜಿ ಶಾಸಕ ರಾಜ್‌ ಬಲ್ಲಭ್‌, ತೇಜಸ್ವಿ ಪತ್ನಿ ವಿರುದ್ಧ ಕೀಳಾಗಿ ಮಾತನಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ತೇಜಸ್ವಿ ಯಾದವ್ ಜಾತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಯಾದವ್ ಹುಡುಗಿಯನ್ನು ಮದುವೆಯಾಗಲಿಲ್ಲ. ಮದುವೆಯಾಗಿದ್ದರೆ, ಯಾದವ್ ಸಮುದಾಯದ ಮಗಳಿಗೆ ಲಾಭವಾಗುತ್ತಿತ್ತು. ಅವರು ಹರಿಯಾಣ-ಪಂಜಾಬ್‌ನಿಂದ ಜೆರ್ಸಿ ಹಸುವನ್ನು ಕರೆತಂದಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜವಲ್ಲಭ್ ಹೇಳಿಕೆ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಜೆಡಿ ನಾಯಕ ಕೌಶಲ್ ಯಾದವ್, ತೇಜಸ್ವಿ ಯಾದವ್ ಅವರ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ರಾಜ್ವಲ್ಲಭ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಇಂತಹ ಹೇಳಿಕೆಯಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ನೋವಾಗಿದೆ. ಇದು ತೇಜಸ್ವಿ ಅವರ ಪತ್ನಿಗೆ ಮಾತ್ರವಲ್ಲದೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನ. ಈ ವ್ಯಕ್ತಿಯನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Tejashwi Yadav And rajshri yadav
ಮಹಿಳಾ ನಾಯಕತ್ವಕ್ಕೆ ಎಚ್ಎಎಲ್ ಉತ್ತೇಜನ: 'ತೇಜಸ್ವಿ' ರಾಷ್ಟ್ರೀಯ ಮಹಿಳಾ ಸಮಾವೇಶ

ತೇಜಸ್ವಿ ಯಾದವ್ 2021 ರಲ್ಲಿ ಡಿಪಿಎಸ್ ಆರ್‌ಕೆ ಪುರಂನ ತಮ್ಮ ಬ್ಯಾಚ್‌ಮೇಟ್ ರಾಚೆಲ್ ಕೊಡಿನ್ಹೋ ಅವರನ್ನು ವಿವಾಹವಾಗಿದ್ದಾರೆ. ಮೂಲತಃ ಹರಿಯಾಣದ ರೇವಾರಿಯವರಾದ ಅವರು ಮದುವೆ ಬಳಿಕ ತಮ್ಮ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡಿದ್ದಾರೆ.

ಹತ್ತು ವರ್ಷಗಳ ಹಿಂದೆ, ಕುರ್ಮಿ ​​ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನಿತೀಶ್ ಕುಮಾರ್ ಸರ್ಕಾರ ಮಾಜಿ ಶಾಸಕ ರಾಜವಲ್ಲಭ್ ಯಾದವ್ ಅವರನ್ನು ಜೈಲಿಗೆ ಕಳುಹಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com