ಪೌರತ್ವಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪ್ರಜೆಯಾದರು. ಆದರೆ, ಅವರ ಹೆಸರು 1980ರ ಮತದಾರರ ಪಟ್ಟಿಯಲ್ಲಿತ್ತು ಎಂಬ ಆರೋಪದ ತನಿಖೆಗಾಗಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
Criminal complaint filed against Sonia Gandhi over alleged forgery in voter enrollment.
ಸೋನಿಯಾ ಗಾಂಧಿ
Updated on

ನವದೆಹಲಿ: ಭಾರತದ ಪೌರತ್ವ ಪಡೆಯುವುದಕ್ಕೂ ಮೂರು ವರ್ಷಗಳ ಮುನ್ನವೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರು ಮತದಾರರ ಸೇರಿಸಲಾಗಿತ್ತು ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿ ಮೇಲಿನ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ, 'ನಾನು ಆದೇಶವನ್ನು ಕಾಯ್ದಿರಿಸಿದ್ದೇನೆ' ಎಂದು ಹೇಳಿದರು.

'ದೂರುದಾರರ ವಿಕಾಸ್ ತ್ರಿಪಾತ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪವನ್ ನಾರಂಗ್, 'ಇಲ್ಲಿರುವ ಏಕೈಕ ಸಮಸ್ಯೆಯೆಂದರೆ, 1980ರ ಜನವರಿಯಲ್ಲಿ ಸೋನಿಯಾ ಗಾಂಧಿ ಭಾರತೀಯ ಪ್ರಜೆಯಾಗಿಲ್ಲದಿದ್ದರೂ ಅವರ ಹೆಸರನ್ನು ನವದೆಹಲಿ ಕ್ಷೇತ್ರದ ಮತದಾರರಾಗಿ ಸೇರಿಸಲಾಗಿದೆ' ಎಂದರು.

'ಮೊದಲು, ನೀವು ಪೌರತ್ವ ಪಡೆದುಕೊಳ್ಳಬೇಕು, ನಂತರ ನೀವು ಒಂದು ಪ್ರದೇಶದ ನಿವಾಸಿಯಾಗುತ್ತೀರಿ. 1980 ರಲ್ಲಿ, ನಿವಾಸದ ಪುರಾವೆ ಬಹುಶಃ ಪಡಿತರ ಚೀಟಿ ಮತ್ತು ಪಾಸ್‌ಪೋರ್ಟ್ ಆಗಿರಬಹುದು' ಎಂದು ಅವರು ಹೇಳಿದರು.

ಅವರು ದೇಶದ ನಾಗರಿಕರಾಗಿದ್ದರೆ, 1982ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಏಕೆ ಅಳಿಸಲಾಯಿತು? ಆಗ ಚುನಾವಣಾ ಆಯೋಗವು ಎರಡು ಹೆಸರುಗಳನ್ನು ಅಳಿಸಿಹಾಕಿತು. ಒಂದು ವಿಮಾನ ಅಪಘಾತದಲ್ಲಿ ನಿಧನರಾದ ನಂತರ ಸಂಜಯ್ ಗಾಂಧಿಯವರ ಹೆಸರು ಮತ್ತು ಇನ್ನೊಂದು ಸೋನಿಯಾ ಗಾಂಧಿಯವರ ಹೆಸರು' ಎಂದು ಹೇಳಿದರು.

Criminal complaint filed against Sonia Gandhi over alleged forgery in voter enrollment.
'ಮತ ಕಳ್ಳತನ' BJP ತಿರುಗೇಟು: ಭಾರತದ ಪೌರತ್ವ ಇಲ್ಲದೆಯೇ ಸೋನಿಯಾ ಗಾಂಧಿ ಮತದಾರರ ಪಟ್ಟಿ ಸೇರಿದ್ದೇಗೆ?

ಮತದಾರರ ಪಟ್ಟಿಯಿಂದ ಸೋನಿಯಾ ಗಾಂಧಿ ಅವರ ಹೆಸರನ್ನು ತೆಗೆದುಹಾಕುವಾಗ ಚುನಾವಣಾ ಆಯೋಗಕ್ಕೆ ಏನೋ ತಪ್ಪು ಕಂಡುಬಂದಿರಬೇಕು ಎಂದು ನಾರಂಗ್ ಹೇಳಿದರು.

ಸೋನಿಯಾ ಗಾಂಧಿಯವರ ಹೆಸರನ್ನು 1980 ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅದನ್ನು 1982 ರಲ್ಲಿ ಅಳಿಸಲಾಗಿತ್ತು ಮತ್ತು ಅವರು ಭಾರತೀಯ ಪೌರತ್ವವನ್ನು ಪಡೆದ ನಂತರ 1983ರಲ್ಲಿ ಮತ್ತೆ ಅವರ ಹೆಸರನ್ನು ಸೇರಿಸಲಾಯಿತು ಎಂದು ನಾರಂಗ್ ಹೇಳಿದರು.

ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪ್ರಜೆಯಾದರು. ಆದರೆ, ಅವರ ಹೆಸರು 1980ರ ಮತದಾರರ ಪಟ್ಟಿಯಲ್ಲಿತ್ತು ಎಂಬ ಆರೋಪದ ತನಿಖೆಗಾಗಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 175 (4) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

'ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ನಾನು ನಿಮ್ಮನ್ನು ಕೇಳುತ್ತಿಲ್ಲ. ಎಫ್‌ಐಆರ್ ದಾಖಲಿಸುವ ಮೂಲಕ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಲು ಪೊಲೀಸರಿಗೆ ಸೂಚಿಸುವಂತೆ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಕಾನೂನನ್ನು ಉಲ್ಲಂಘಿಸಲಾಗಿದೆಯೇ ಎಂಬುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com