ಹಿರಿಯ ನಾಗರಿಕರ ಕಾಯ್ದೆಯಡಿ 10,000 ರೂ. ಮಿತಿ ಪರಿಷ್ಕರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

ಈ ನ್ಯಾಯಾಲಯವು ಶಾಸನ ಮಾಡಲು ಸಾಧ್ಯವಿಲ್ಲ; ಇದು ಸೆಕ್ಷನ್ 9 ಅನ್ನು ಪುನಃ ಬರೆಯಲು ಸಾಧ್ಯವಿಲ್ಲ. ಆದರೆ 2007 ರಲ್ಲಿ ಅರ್ಥಪೂರ್ಣವಾಗಿದ್ದ ಈ ನಿಬಂಧನೆಯು ಈಗ 2025 ರಲ್ಲಿ ಅದನ್ನು ಅಣಕಿಸುವಂತಿದೆ.
High Court
ಹೈಕೋರ್ಟ್
Updated on

ಬೆಂಗಳೂರು: ದೇಶಾದ್ಯಂತ ವೃದ್ಧರಿಗೆ ಪ್ರಯೋಜನಕಾರಿಯಾದ ಕ್ರಮದಲ್ಲಿ, ಜೀವನ ವೆಚ್ಚದಲ್ಲಿನ ಹೆಚ್ಚಳವನ್ನು ಪರಿಗಣಿಸಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 9 ಅನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ಶಿಫಾರಸು ಮಾಡಿದೆ.

“ಇಷ್ಟು ಕಡಿಮೆ ನಿರ್ವಹಣೆಯು ಕಾಯ್ದೆಯ ಉದ್ದೇಶಗಳನ್ನು ಈಡೇರಿಸಬಹುದೇ? ಸೆಕ್ಷನ್ 9 ರ ಮಿತಿಯೊಳಗೆ ನಾಗರಿಕನು ಘನತೆ, ಜೀವನಾಧಾರ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬಹುದೇ? ಈ ಬಗ್ಗೆ ಚಿಂತನೆಯ ಅಗತ್ಯವಿದೆ. ಇಲ್ಲದಿದ್ದರೆ ಆ ಹಿರಿಯ ನಾಗರಿಕರ ಅಸ್ತಿತ್ವವನ್ನು 'ಕೇವಲ ಪ್ರಾಣಿಗಳ' ಮಟ್ಟಕ್ಕೆ ಇಳಿಸುತ್ತದೆ ಎಂದು ಹೈಕೋರ್ಟ್ ಕಿಡಿ ಕಾರಿದೆ.

ಈ ನ್ಯಾಯಾಲಯವು ಶಾಸನ ಮಾಡಲು ಸಾಧ್ಯವಿಲ್ಲ; ಇದು ಸೆಕ್ಷನ್ 9 ಅನ್ನು ಪುನಃ ಬರೆಯಲು ಸಾಧ್ಯವಿಲ್ಲ. ಆದರೆ 2007 ರಲ್ಲಿ ಅರ್ಥಪೂರ್ಣವಾಗಿದ್ದ ಈ ನಿಬಂಧನೆಯು ಈಗ 2025 ರಲ್ಲಿ ಅದನ್ನು ಅಣಕಿಸುವಂತಿದೆ ಎಂದ ಹೈಕೋರ್ಟ್, ಕೇಂದ್ರ ಸರ್ಕಾರ ಸಂವೇದನಾಶೀಲಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ” ಎಂದು ಹೇಳಿದೆ.

High Court
ಕೇರಳ ಸರ್ಕಾರದಿಂದ ದೇಶದಲ್ಲೇ ಮೊದಲ ಹಿರಿಯ ನಾಗರಿಕರ ಆಯೋಗ ಸ್ಥಾಪನೆ

ಆಹಾರ, ವಸತಿ, ಔಷಧ ಬೆಲೆ ಏರಿಕೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಈ ನ್ಯಾಯಾಲಯವು ಕೇಂದ್ರ ಸರ್ಕಾ, ಸೆಕ್ಷನ್ 9 ಅನ್ನು ಮರುಪರಿಶೀಲಿಸುವಂತೆ ಮತ್ತು ಜೀವನ ವೆಚ್ಚ ಸೂಚ್ಯಂಕಕ್ಕೆ ಅನುಗುಣವಾಗಿ ಮಿತಿಯನ್ನು ಪರಿಷ್ಕರಿಸುವಂತೆ ಶಿಫಾರಸು ಮಾಡುವುದು ಸೂಕ್ತವೆಂದು ಪರಿಗಣಿಸುತ್ತದೆ. ವೃದ್ಧಾಪ್ಯದಲ್ಲಿ ಘನತೆಯ ಜೀವನ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಈ ಕಾಯ್ದೆ ಜಾರಿಗೆ ಬಂದು 18 ವರ್ಷವಾದರೂ ಮಿತಿಯನ್ನು ಹೆಚ್ಚಿಸಲಾಗಿಲ್ಲ. 2007-08ರಲ್ಲಿ, ವೆಚ್ಚ ಹಣದುಬ್ಬರ ಸೂಚ್ಯಂಕವು 129 ರಷ್ಟಿತ್ತು; ಇಂದು ಅದು 363 ಕ್ಕೆ ಏರಿದೆ. ಹೀಗಾಗಿ, 2007ರಲ್ಲಿ 100 ರೂ.ಗೆ ಖರೀದಿಸಬಹುದಾದ ವಸ್ತು ಖರೀದಿಸಲು ಈಗ 1,000 ರೂ.ಗಳ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತೀವ್ರ ಅಸಮಾಧಾನವ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com