
ಮುಂಬೈ: 'ರಾಗಿಣಿ ಎಂಎಂಎಸ್ ರಿಟರ್ನ್ಸ್' ಮತ್ತು 'ಪ್ಯಾರ್ ಕಾ ಪಂಚ್ನಾಮಾ' ಸಿನಿಮಾಗಳಿಂದ ಪ್ರಸಿದ್ಧಿಯಾಗಿರುವ ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ.
ಶೂಟಿಂಗ್‌ಗಾಗಿ ಚರ್ಚ್‌ಗೇಟ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳಿಗೆ ಹಾರೈಸುತ್ತಿದ್ದಾರೆ.
ಸೀರೆ ಧರಿಸಿ ರೈಲಿನಲ್ಲಿ ಪ್ರಯಾಣಿಸಲು ನಿರ್ಧರಿಸಿದ ಶರ್ಮಾ, ಹೆಚ್ಚಿನ ವೇಗದ ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಆದರೆ, ಆ ರೈಲಿನಲ್ಲಿ ಅವರ ಸ್ನೇಹಿತರು ಇರದಿದ್ದಾಗ ಭಯಗೊಂಡು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾರೆ.
ಪರಿಣಾಮವಾಗಿ ಬೆನ್ನಿನ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅತ್ಯಂತ ನೋವಿನ ಘಟನೆ ಎಂದು ಅವರು ಬರೆದುಕೊಂಡಿದ್ದಾರೆ.
Advertisement