
ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಸ್ಥಳೀಯರಿಂದ ನೆರವು ಸಿಗುತ್ತಿಲ್ಲ. ಇದರಿಂದ ಉಗ್ರ ಸಂಘಟನೆಗಳು ತಂತ್ರಗಳನ್ನು ಬದಲಾಯಿಸುತ್ತಿದ್ದು, ಸ್ಥಳೀಯ ಮನೆಗಳಲ್ಲಿ ಆಶ್ರಯ ಪಡೆಯುವ ಬದಲು ದಟ್ಟ ಕಾಡುಗಳು ಮತ್ತು ಎತ್ತರದ ಪರ್ವತಗಳ ಒಳಗೆ ಭೂಗತ ಬಂಕರ್‌ಗಳನ್ನು ನಿರ್ಮಿಸುತ್ತಿವೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಕಳೆದ ವಾರ ಕುಲ್ಗಾಮ್ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಯಾದ ಸಂದರ್ಭದಲ್ಲಿ ಇದು ಮುನ್ನೆಲೆಗೆ ಬಂದಿತ್ತು. ಕಾರ್ಯಾಚರಣೆ ಮುಂದುವರೆದಂತೆ ರಹಸ್ಯ ಕಂದಕದಲ್ಲಿ ಪಡಿತರ,ಗ್ಯಾಸ್ ಸ್ಟೌವ್‌ಗಳು, ಪ್ರೆಶರ್ ಕುಕ್ಕರ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭದ್ರತಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು.
ಕುಲ್ಗಾಮ್, ಶೋಪಿಯಾನ್ ಜಿಲ್ಲೆ ಮತ್ತು ಜಮ್ಮು ಪ್ರದೇಶದ ಪಿರ್ ಪಂಜಾಲ್‌ನ ದಕ್ಷಿಣದಲ್ಲಿ ಈ ಟ್ರೆಂಡ್ ಹೆಚ್ಚಾಗುತ್ತಿದೆ. ಅಲ್ಲಿನ ದಟ್ಟ ಕಾಡುಗಳು ಭಯೋತ್ಪಾದಕರು ಅಡಗಿಕೊಳ್ಳಲು ನೆರವಾಗುತ್ತಿವೆ.
ಕೆಲವು ಹೊಸ ಅಡಗುತಾಣಗಳನ್ನು ಪತ್ತೆ ಹಚ್ಚುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದರೂ, ಗಡಿಯಾಚನೆಯಿಂದ ನಿರ್ದೇಶಿಸಿದಂತೆ ದಾಳಿ ನಡೆಸುವಂತೆ ಭಯೋತ್ಪಾದಕರು ಕಣಿವೆಯ ಎತ್ತರದ ಮತ್ತು ಮಧ್ಯ ಪ್ರದೇಶದಲ್ಲಿ ಉಳಿಯಲು ತಿಳಿಸಲಾಗಿದೆ. ಇದು ಭಾರತೀಯ ಸೇನಾ ಅಧಿಕಾರಿಗಳಲ್ಲಿ ಆತಂಕ ಹೆಚ್ಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರು ಈಗ ಭೂಗತ ಬಂಕರ್ ಒಳಗಡೆ ಉಳಿಯುತ್ತಿರುವುದು ಸಮಸ್ಯೆಯಾಗುತ್ತಿದೆ.
ಅರಣ್ಯದೊಳಗಿನ ಬಂಕರ್‌ಗಳು 1990 ಮತ್ತು 2000 ರ ದಶಕದ ಆರಂಭದಲ್ಲಿ ಭಯೋತ್ಪಾದಕರು ಬಳಸಿದ ತಂತ್ರಗಳನ್ನು ನೆನಪಿಸುತ್ತವೆ ಎಂದು 2016 ರ ಯಶಸ್ವಿ ಸರ್ಜಿಕಲ್ ಸ್ಟ್ರೈಕ್‌ಗಳ ನೇತೃತ್ವ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ ಎಸ್ ಹೂಡಾ ಹೇಳಿದ್ದಾರೆ. ಲೆಫ್ಟಿನೆಂಟ್ ಜನರಲ್ ಹೂಡಾ ಅವರು ಆಯಕಟ್ಟಿನ ಉತ್ತರ ಕಮಾಂಡ್‌ಗೆ ನಾಯಕತ್ವ ವಹಿಸಿದ್ದರು. ಹೊಸ ಸವಾಲನ್ನು ಎದುರಿಸಲು ಸೇನೆಯು ತನ್ನ ಕಾರ್ಯತಂತ್ರವನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಮೂರು ದಶಕಗಳ ಕಾಲ ಕಳೆದ ಪುದುಚೇರಿಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ ಶ್ರೀನಿವಾಸ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದು, ಇನ್ನು ಮುಂದೆ ಪಟ್ಟಣ ಮತ್ತು ಹಳ್ಳಿಗಳಲ್ಲಿನ ಆಶ್ರಯ ಸಿಗದ ಕಾರಣ ಭಯೋತ್ಪಾದಕರು ಈಗ ಅರಣ್ಯಗಳಲ್ಲಿ ಬಂಕರ್ ನಿರ್ಮಿಸುತ್ತಿದ್ದಾರೆ. ಇದು 2023ರಲ್ಲಿ ಸಾಕ್ಷಿಯಾಗಿದ್ದ 'ಆಪರೇಷನ್ ಸರ್ಪ್ ವಿನಾಶ್' ಪುನರಾವರ್ತನೆಯಾಗಿದೆ.
ಆಗ ಭದ್ರತಾ ಪಡೆಗಳು ಪೂಂಚ್ ಪ್ರದೇಶದಲ್ಲಿ ಉಗ್ರರ ಶಿಬಿರಗಳನ್ನು ನಾಶಪಡಿಸಿದ್ದವು. ಈ ಹೊಸ ಸವಾಲು ಎದುರಿಸಲು ಭದ್ರತಾ ಏಜೆನ್ಸಿಗಳು ಜಿಪಿಆರ್ ಆಧಾರಿತ ಡ್ರೋನ್ ಗಳು ಮತ್ತು ಸೆನ್ಸಾರ್ ಗಳನ್ನು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ವೇಳೆ ಬಳಸಬೇಕು ಎಂದು ತಿಳಿಸಿದರು.
Advertisement